ಚಿತ್ರಕಲಾವಿದರ ಪರಿಚಯ

ಈ ಬ್ಲಾಗ್ ರಚನೆ ಮಾಡಲು ಮಾರ್ಗದರ್ಶನ ಮಾಡಿದವರು ನನ್ನ ತಂದೆ
 ದಿll ಮಾನಪ್ಪ ಮಹೇಂದ್ರ, 
ನಿವೃತ್ತ ಹಿರಿಯ ಸಹಾಯಕ ನಿರ್ದೇಶಕರು (ಚಿತ್ರಕಲಾ ವಿಭಾಗ), ಆಯುಕ್ತರ ಕಛೇರಿ, ಬೆಂಗಳೂರು. 
ಶಿಕ್ಷಣ ಇಲಾಖೆಯಲ್ಲಿ ಚಿತ್ರಕಲಾ ವಿಭಾಗದ ಪ್ರಪ್ರಥಮ ಹಿರಿಯ ಸಹಾಯಕ ನಿರ್ದೇಶಕರು
ಈ ಬ್ಲಾಗ್ ರಚನೆ ಮಾಡಿಕೊಟ್ಟ ಮನೋಹರ R ಮತ್ತು ಚಿತ್ರಕಲಾ ಶಿಕ್ಷಕರ ಬಳಗಕ್ಕೆ ಹಾಗೂ What's app ಕೃಪೆಗೂ ನನ್ನ ಕೃತಜ್ಞತೆ ಸಲ್ಲಿಸುತೆನೆ
-----------------------------------------------------------------------------
ಮಾಹಿತಿಗಾಗಿ ಇವುಗಳ ಮೇಲೆ ದಯವಿಟ್ಟು ಕ್ಲಿಕ್   ಮಾಡಿ
ಜೆ.ಜೆ.ಎಸ್.ಖಂಡೇರಾವ್‌ರರಾವ್‌


ಜೆ.ಎಸ್.ಖಂಡೇರಾವ್‌ರಜೆ.ಎಸ್.ಖಂಡೇರಾವ್‌ರವರ ಪರಿಚಯ ಮಾಧ್ಯಮದ ಕಲಾಕೃತಿಗಳಲ್ಲಿ ತಂದುಕೊಂಡು ದೃಶ್ಯ ಭಾಷೆಗೆ ಕಲಬುರಗಿತು ಕಲಾವಿದ ಜಿ. ಎಸ್ ಖಂಡೇರಾವ ಅವರಿಗೆ ಪ್ರತಿಭೆ ಮತ್ತು ಸಾಧನೆಗಳಿಂದ ನಾಡಿನ ಚಿತ್ರಕಲಾ ವಲಯವನ್ನು ಶ್ರೀಮಂತಗೊಳಿಸಿದ ಹೊಸ ತಲೆಮಾರಿನ ಹಿರಿಯ ಕಲಾವಿದರಲ್ಲಿ ಜೆ. ಎಸ್. ಖಂಡೇರಾವ ಅವರು ಪ್ರಮುಖರು. ಕಲಾ ಶಿಕ್ಷಕರಾಗಿ ಮತ್ತು ಕಲಾವಿದರಾಗಿ ಇವರು ನೀಡಿದ ಕೊಡುಗೆ ಅಪೂರ್ವವಾದದ್ದು. ಕಲಬುರ್ಗಿಯಲ್ಲಿ ಹುಟ್ಟಿ (1941) ಮುಂಬೈನ ಜೆ.ಜೆ.ಕಲಾಶಾಲೆಯನ್ನು ಸೇರಿ ಚಿತ್ರಕಲೆಯಲ್ಲಿ ಡಿಪ್ಲೋಮಾ ಪದವಿ ಪಡೆದುಕೊಂಡುದು ಆಗಿನ ಕಾಲದಲ್ಲಿ ಅಪರೂಪದ ಸಾಧನೆಯೇ ಹೌದು, ಸರಕಾರಿ ನೌಕರಿಗೆ ಕರೆ ಬಂದರೂ ಸೇರದೇ ಈ ಭಾಗದಲ್ಲಿ ಚಿತ್ರಕಲೆಯ ಸಾಕ್ಷರತೆಯ ಅಗತ್ಯವನ್ನು ಮನಗಂಡರು. ಅಂತೆಯೇ ಅವರ ಕನಸಿನ ಕೂಸಾಗಿ 'ದಿ ಐಡಿಯಲ್ ಫೈನ್ ಆರ್ಟ್ ಸಂಸ್ಥೆ' ಜನ್ಮ ತಳೆಯಿತು. ತನ್ಮೂಲಕ ಈ ಭಾಗದಲ್ಲಿ ಕಲಾ ಶಿಕ್ಷಣ ಪರಂಪರೆ ಪುನರುಜ್ಜಿವನಗಳುವಂತಾಯಿತು ಮತ್ತು ಅನೇಕ ಕಲಾವಿದರು ಬೆಳೆದು ಬರಲು ಸಾಧ್ಯವಾಯಿತು. 5-6 ವರ್ಷ ಕಲಾ ಸಂಸ್ಥೆಯನ್ನು ಉತ್ಸಾಹದಿಂದ ಮುನ್ನಡೆಸಿದ ಇವರಿಗೆ ಆರ್ಥಿಕ ಮುಗ್ಗಟ್ಟು ಎದುರಾಗಿ ಸಂಸ್ಥೆಯನ್ನು ಉಳಿಸುವುದೇ ಕಷ್ಟವಾಯಿತು. ಹಾಗಾಗಿ ತಮ್ಮ ಗರಡಿಯಲ್ಲೇ ತಯಾರಾಗಿದ್ದ ವಿದ್ಯಾರ್ಥಿ ವಿ.ಜಿ. ಅಂದಾನಿ ಅವರಿಗೆ ಸಂಸ್ಥೆಯನ್ನು ಒಪ್ಪಿಸಿ, ತಾವು ಶ್ರೀ ಶರಣಬಸವೇಶ್ವರ ಮಹಾವಿದ್ಯಾಲಯದ ಲಲಿತಕಲಾ ವಿಭಾಗಕ್ಕೆ ಕಲಾ ಅಧ್ಯಾಪಕರಾಗಿ (1971) ನೇಮಕಗೊಂಡರು. ಮುಖ್ಯಸ್ಥರಾಗಿ ನಿರ್ದೆಶಕರಾಗಿ ಮೂರು ದಶಕಗಳ ಕಾಲ ಆ ವಿಭಾಗದ ಶ್ರೇಯೋಭಿವೃದ್ಧಿಗಾಗಿ ದುಡಿದವರು. ಖಂಡೇರಾವ್ ಅವರು ಬ್ರಿಟಿಷ್ ಅಕಾಡೆಮಿಕ್ ಕಲಾ ಶಿಕ್ಷಣ ಪಡೆದರೂ ಕಾಲಕ್ರಮದಲ್ಲಿ ಸಮಕಾಲೀನ ಸೃಜನ ಶೀಲತೆಯೆಡೆಗೆ ತೆರೆದುಕೊಂಡು ದೃಶ್ಯಕಲಾ ಸೃಷ್ಟಿಯಲ್ಲಿ ಅನನ್ಯತೆಯನ್ನು ಸಾಧಿಸಿದವರು. ಶೈಲಿಬದ್ಧತೆಗೆ ಕಟ್ಟುಬಿದ್ದು “ವಿಂಡೋ” ಅಮೂರ್ತ ಶೈಲಿಯ ಕಲಾಕೃತಿಗಳ ರಚನೆಯಲ್ಲಿ ತಮ್ಮದೇ ಛಾಪು ಮೂಡಿಸಿದವರು. ಕಿಟಕಿಯಿಂದ ತೂರಿಬಂದ ಬೆಳಕಿನ ಪ್ರಬಂಧದ ಸುಮಧುರ ಅನುಭವಗಳನ್ನು ತಮ್ಮ ತೈಲವರ್ಣ ಸರಣಿಯ ಹೊಸ ಪರಿಭಾಷೆಯೊಂದನ್ನು ರೂಪಿಸಿದವರು. ಚೌಕ ಆಯತ ತ್ರಿಕೋನಗಳಂತಹ ರೂಪಕಾರಗಳು ಕುಂಚದ ಸಡಿಲ ಮತ್ತು ಬಿಗು ತೆರಪುಗಳ ನಿರ್ವಹಣೆಯ ಮೂಲಕ ವಿಶಿಷ್ಟ ರೀತಿಯ ಮೈವಳಿಕೆಯಲ್ಲಿ ಸೃಷ್ಟಿಗೊಂಡು ಅಲಂಕೃತಗೊಂಡವು. ಸರಣಿ ಸರಣಿಯಾಗಿ ಸೃಷ್ಟಿಗೊಂಡ ಈ ಅದ್ಭುತ ಕಲಾಕೃತಿಗಳು ದೃಶ್ಯ ಕಾವ್ಯಗಳೇ ಆಗಿ ಹಲವಾರು ಪ್ರದರ್ಶನಗಳನ್ನು ಕಂಡು ದೇಶದ ತುಂಬೆಲ್ಲ ಪಸರಿಸಿ ಹೆಸರಾದವು. ಪ್ರಾರಂಭದಿಂದಲೂ ಭಾವಚಿತ್ರ ಹಾಗೂ ಭೂದೃಶ್ಯ ಚಿತ್ರಗಳ ರಚನೆಯಲ್ಲಿ ಆಸಕ್ತಿ ಹೊಂದಿ ಸಿದ್ಧಿ ಪಡೆದಿರುವ ಇವರು ಇದಕ್ಕೆ ಬೇಕಾಗುವ ಶಕ್ತಿ, ಸತ್ಯ ಮತ್ತು ಸಹನೆಗಳನ್ನು ಉಳಿಸಿಕೊಂಡು ಅದನ್ನು ಬೆಳೆಸಿಕೊಂಡು ಬಂದವರು. ಭಾವಚಿತ್ರ ರಚನೆಯಲ್ಲಿ ಇವರ ಕುಂಚದ ಬೀಸುಗಳು ಹಾಗೂ ವಿಶಿಷ್ಟ ರೀತಿಯ ಮೈವಳಿಕೆಗಳು ಆಸ್ವಾದಕರಲ್ಲಿ ವಿಸ್ಮಯವನ್ನು ಹುಟ್ಟಿಸಿವೆ, ಹೃದಯಗಳನ್ನು ಗೆದ್ದಿವೆ. ಖಂಡರಾವ್ ಅವರು ಕೇವಲ ಕಲಾಕೃತಿಗಳನ್ನು ರಚಿಸುತ್ತ ಒಂಟಿಸಲಗವಾಗದೆ ದೇಶದ ಹಲವಾರು ಕಡೆಗಳಲ್ಲಿನ ಕಲಾ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ, ಶಿಬಿರಗಳಲ್ಲಿ ಕಲಾವಿದರಾಗಿ, ನಿರ್ದೇಶಕರಾಗಿ, ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರೂ ಆಗಿ ಸಕ್ರಿಯ ಪಾತ್ರ ನಿರ್ವಹಿಸಿರುವರು. ಅಲ್ಲದೆ ದೇಶದ ನಾನಾ ಕಡೆಗಳಲ್ಲಿ ಕಲಾ ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಟ್ಟು ಕಲಾವಿದರ ಮನ ಸೂರೆಗೊಂಡವರು. ಇವರ ಕಲಾಕೃತಿಗಳು ದೇಶವಿದೇಶಗಳ ಗ್ಯಾಲರಿಗಳು ಮತ್ತು ಕಲಾ ಪ್ರೀಯರ ಮನೆ-ಮನಗಳನ್ನು ಆವರಿಸಿಕೊಂಡಿವೆ. ಅಂತೆಯೇ ಅವರ ಕಲಾ ಪ್ರೌಢಿಮೆಗೆ ಸಾಕ್ಷಿ ಎಂಬಂತೆ ಅನೇಕ ಗೌರವ ಪುರಸ್ಕಾರಗಳು, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಭಾರತ ಸರ್ಕಾರದ ಸೀನಿಯರ್ ಫೆಲೋಶಿಫ್ ಅಲ್ಲದೆ ಕರ್ನಾಟಕ ಸರ್ಕಾರ ಚಿತ್ರಕಲಾ ಸಾಧಕರಿಗೆ ಕೊಡಮಾಡುವ ಅತ್ಯುನ್ನತವಾದ 'ವರ್ಣಶಿಲ್ಪಿ ವೆಂಕಟಪ್ಪ' ಪ್ರಶಸ್ತಿ(2002). ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರತಿಷ್ಠಿತ 'ನಾಡೋಜ' ಗೌರವ, ಕಲಬುರಗಿ ವಿವಿ ಹಾಗೂ ಕಲಬುರಗಿಯ ಕೇಂದ್ರೀಯ ವಿವಿಯ ಗೌರವ ಡಾಕ್ಟರೇಟ್ ಗಳು ಅಲ್ಲದೆ ಬಾಂಬೆ ಆರ್ಟ್ ಸೊಸಾಯಿಟಿಯ `ರೂಪಧರ್' ಪ್ರಶಸ್ತಿಗಳು ಈ ಕುಂಚ ಮಾಂತ್ರಿಕನಿಗೆ ಸಂದಿರುವುದು ಹೆಮ್ಮೆಯ ಸಂಗತಿ. ಇದೀಗ ಮೈಸೂರಿನ ರವಿವರ್ಮ ಕಲಾ ಸಂಸ್ಥೆಯಿಂದ 2018-19ನೇ ಸಾಲಿನ "ರಾಜಾ ರವಿವರ್ಮ” ಪ್ರಶಸ್ತಿಯನ್ನಿತ್ತು ಗೌರವಿಸುತ್ತಿರುವುದು ಖುಷಿ ಎನಿಸುತ್ತದೆ. 


👇 ಕಲಾ ಮಾಂತ್ರಿಕ ಎಸ್ ಎಂ ಪಂಡಿತ್  
https://drive.google.com/file/d/115atMeQgot7owvdBbkMiAjPW9jZgmVPb/view?usp=drivesdk

ಚಿತ್ರ ಕಲಾವಿದರಾದ ಎಸ್, ಎಮ್. ಪಂಡಿತ್ ಅವರ ಪರಿಚಯ . ಭಾರತದ ಕಲಾಪರಂಪರೆಯ ಶ್ರೇಷ್ಠ ಕಲಾವಿದರೆಂದು ಆಗ್ರಗಣ್ಯರಲ್ಲಿ ಎಸ್.ಎಮ್. ಪಂಡಿತರು ಪ್ರಮುಖರು. 1916 ರಲ್ಲಿ ಕರ್ನಾಟಕ ರಾಜ್ಯದ ಗುಲ್ಬರ್ಗಾದಲ್ಲಿ ಜನಿಸಿ, ಬಾಲ್ಯದಲ್ಲಿಯೇ ರವಿವರ್ಮರ ಕೃತಿಗಳಿಂದ ಆಕರ್ಷಿತರಾದ ಪಂಡಿತರು, ಮದ್ರಾಸ್‌ದ ಸರಕಾರಿ ಕಲಾಶಾಲೆಗೆ ಕಲಾ ಅಭ್ಯಾಸಕ್ಕಾಗಿ ಸೇರಿದರು. ಮುಂದ ಅವ್ಯಾಹತವಾಗಿ ಕಲಾಭ್ಯಾಸ ಮಾಡಿ 1931 ರಲ್ಲಿ ಚಿತ್ರಕಲೆಯ ಡಿಪ್ಲೋಮಾ ಪಡೆದರು. ಕ್ರಮೇಣ ಕಲೆಯ ಹೆಚ್ಚಿನ ವ್ಯಾಸಂಗಕ್ಕಾಗಿ ಜೆ.ಜೆ. ಸ್ಕೂಲಿನ ತರಬೇತಿ ಪಡೆದು ಅಲ್ಲಿಯೂ ಚಿತ್ರಕಲೆಯ ಡಿಪ್ಲೊಮಾ ಗಳಿಸಿದರು. ಪೋಸ್ಟರ ವರ್ಣಗಳ ಬಳಕೆಯನ್ನು ಬೆಳಕಿಗೆ ತಂದ ಕೀರ್ತಿ ಎಸ್. ಎಮ್. ಪಂಡಿತರಿಗೆ ಸಲ್ಲುತ್ತದೆ. ಉತ್ತಮ ಕಲೆಗಾರರೆಂದು ಖ್ಯಾತಿಗಳಿಸಿ ವಾಣಿಜ್ಯದ ವ್ಯಾಪ್ತಿಯ ಮಾರ್ಗದಲ್ಲಿ ಹಲವಾರು ಹೊಸ ಹೊಸ ಪ್ರಯೋಗಗಳನ್ನು ನಡೆಸಿದ ಕಲಾವಿದರು. ಈ ಪ್ರಯೋಗಗಳ ಇಂತಹ ಒಂದು ವಿನ್ಯಾಸಕ್ಕೆ ಕೆನಡಾದ ಬಹುಮಾನವು ದೊರಕಿತು ತಮಗೆ ಪ್ರಿಯವಾದ ಪುರಾಣೇತಿಹಾಸಗಳ ಮತ್ತು ಮೂರ್ತಿ ಚಿತ್ರಣದತ್ತ ತಮ್ಮ ಕ್ರಿಯಾಶೀಲತೆಯನ್ನು ಬೆಳೆಸಿದರು ಸ್ವಾಮಿ ವಿವೇಕನಾಂದ ತೈಲ -ಚಿತ್ರ, ಇಂದಿರಾಗಾಂಧಿ, ಮಾರ್ಗರೇಟ ಥ್ಯಾಚರ್ ಮುಂತಾದ ನೂರಾರು ಗಣ್ಯವ್ಯಕ್ತಿಗಳ ನೈಜರೂಪದ ಭಾವಚಿತ್ರಗಳು ಇವರ ಕಲಾ -ಪ್ರೌಢಿಮೆಯ ಜೀವಂತ ಸಾಕ್ಷಿಯಾಗಿವೆ. 1978 ರಲ್ಲಿ ರಾಯಲ್ ಸೊಸೈಟಿಯ ಫೆಲೋಷಿಪ್ 1982 ರ ರಾಜ್ಯ ಲಲಿತ ಕಲಾ ಆಕಾಡೆಮಿಯ ಪ್ರಶಸ್ತಿ, ಮುಂತಾದ ಅನೇಕ ಪ್ರಶಸ್ತಿಗಳನ್ನು ಪಡೆದುದು, ಕನ್ನಡಿಗರು ಹೆಮ್ಮೆ ಪಡುವಸಂಗತಿ. ಇವರು ಮುಂಬಯಿ ವಾಣಿಜ್ಯಕಲಾವಿದರ ಗಿಲ್ಡ್ದ ಸ್ಥಾಪಕರಾಗಿ, ಚಿತ್ರಕಲೆಯ ಲೋಕದಲ್ಲಿ ಸದಾಕಾರ ನಿರತ ಕಲಾರಾಧಕರಾಗಿದ್ದಾರೆ.

*********************************************

👆 ಜಾಮಿನಿರಾಯ 

ಚಿತ್ರ ಕಲಾವಿದರಾದ ಜಾಮಿನಿರಾಯ್ ರವರ ಪರಿಚಯ . ಆಧುನಿಕ ಭಾರತೀಯ ಚಿತ್ರಕಲೆಯ ಕ್ಷೇತ್ರದಲ್ಲಿ ಅಗ್ರಗಣ್ಯರೆಂದು ಲೋಕ ವಿಖ್ಯಾತರಾದವರು ಜಾಮಿನಿರಾಯ್.: 1887 ರಲ್ಲಿ ಪಶ್ಚಿಮ ಬಂಗಾಳದ 'ಬಲಿಯಾತ್” ಎಂಬ ಹಳ್ಳಿಯಲ್ಲಿ ಜನನ. ಚಿಕ್ಕ ವಯಸ್ಸಿನಲ್ಲಿಯೇ ಮಣ್ಣಿನ ಗೊಂಬೆಗಳ ರಚನೆಯಲ್ಲಿ ವಿಶೇಷ ಆಸಕ್ತಿ ತೋರಿಸಿದರು. ಮುಂದೆ ಕಲ್ಕತ್ತಾ ಪಟ್ಟಣದ ಸರ್ಕಾರಿ ಕಲಾ ಶಾಲೆಗಳಿಗೆ ಕಲಾ ಅಧ್ಯಯನಕ್ಕಾಗಿ ಸೇರಿದರು ಅಲ್ಲಿಯೇ ಪಾಶ್ಚಾತ್ಯ ಪದ್ಧತಿಯಲ್ಲಿ ರೇಖಾಚಿತ್ರ ಮತ್ತು ವರ್ಣಚಿತ್ರ ಚಿತ್ರಿಸುವ ಶಿಕ್ಷಣ ದೊರೆಯಿತು. ಕಲ್ಕತ್ತೆಯ ಕಲಾಪ್ರಪಂಚದಲ್ಲಿ ತಮ್ಮದೇ ಆದ ಸ್ಥಾನವನ್ನು ಕಲ್ಪಿಸಿಕೊಂಡು ವಿಖ್ಯಾತರಾದರು. 1921 ರ ಸುಮಾರಿಗೆ ಅವರ ಬದುಕಿನಲ್ಲಿ ದೃಡಸಂಕಲ್ಪದ ವೇಳೆ ಬಂತು. ಅವರು ಭಾವಚಿತ್ರಗಳ ತೈಲವರ್ಣ ಚಿತ್ರಗಳನ್ನು ಚಿತ್ರಿಸುವದನ್ನು ನಿಲ್ಲಿಸಿ, ಒಂದು ಸರಳ ವೈಯಕ್ತಿಕ ಶೈಲಿಯನ್ನು ರೂಪಿಸಿಕೊಳ್ಳುವ ಮಹತ್ವಾಕಾಂಕ್ಷೆಯ ಸಾಧನೆಗೆ ಗಮನ ಹರಿಸಿದರು. ಬಣ್ಣ ಮತ್ತು ರೇಖೆಗಳ ಬಳಕೆಯಲ್ಲಿ ಮಿತವ್ಯಯ ಆರಂಭವಾಯಿತು. ಜಲಮಿಶ್ರಿತ ಟೆಂಪರ ವರ್ಣವು ಕಲಾ ಪ್ರಪಂಚದಲ್ಲಿ ಹೊಸ ಪ್ರಯೋಗಗಳ ಹಾದಿಯನ್ನು ನಿರ್ಮಿಸಿತು. ವಾದನಗಾರರು, ಸೀತಾದೇವಿಯ ಅಗ್ನಿ ಪರೀಕ್ಷೆ, ಕಪ್ಪು ಕುದುರೆ, ಗಣೇಶ ಮತ್ತು ಪಾರ್ವತಿ, ಜಿಂಕೆ, ಅನಾಥಮಕ್ಕಳು, ರೈತರು-ಇತ್ಯಾದಿ ಕಲಾಕೃತಿಗಳಲ್ಲಿ ಜಾನಪದ ಕಲೆಯ ಪ್ರಭಾವ ಹಾಗೂ ಭಾರತೀಯ ಪರಂಪರೆಯ ಭಾವನೆಗಳನ್ನು ಚಿತ್ರಗಳಲ್ಲಿ ಸ್ಪಷ್ಟವಾಗಿ ಮೂಡಿಸಿದರು. ಪುರಾಣ ಮತ್ತು ದಂತ ಕಥೆಗಳಲ್ಲಿಯೂ ನಿಹಿತವಾದ ಮಹತ್ವ, ಲಾಲಿತ್ಯ ಮತ್ತು ಸಾಮರಸ್ಯಗಳನ್ನು ಕಲಾಕೃತಿಗಳಲ್ಲಿ ಮತ್ತು ವಿನ್ಯಾಸಗಳಲ್ಲಿಯೂ ಸಮನ್ವಗೊಳಿಸುವ ರಹಸ್ಯವನ್ನು ಅರಿತುಕೊಂಡು, ಈ ಅವಧಿಯ ತನ್ನ ವರ್ಣಚಿತ್ರಗಳಲ್ಲಿ ಆ ಸಮನ್ವಯ ಶೈಲಿಯನ್ನು ಪೂರ್ಣವಾಗಿ ಬಳಸಿಕೊಂಡರು. ಭಾರತೀಯ ವಿಷಯಗಳ ಮೇಲೆ ಅವರು ರಚಿಸಿದ ಚಿತ್ರಗಳಲ್ಲಿ ಕಂಡುಬರುವ ಪ್ರಶಾಂತಿ, ಗಾಂಭೀರ ಹಾಗೂ ಅನುಕಂಪದ ಭಾವನೆಗಳನ್ನು ಹಾಗೂ ತರುವಾಯ ಕ್ರಿಸ್ತನ ಜೀವನವನ್ನು ಕುರಿತು ರಚಿಸಿದ ವರ್ಣ ಚಿತ್ರಗಳಲ್ಲಿ ಜೀವಂತವಾಗಿ ಮೂಡಿದೆ. ಜಾಮಿನಿರಾಯರ ಹೊಸ ಪ್ರಯೋಗದಿಂದ ಅವರ ಆನಂತರದ ಕಲಾಕೃತಿಗಳಲ್ಲಿ ವಿನೂತನ ಸೌಂದರ ಸೃಷ್ಟಿಯಾಯಿತು. 
***********************************************

a👉 ಕೆ. ಕೆ ಹೆಬ್ಬಾರ್ ರವರ ಕಲಾಕೃತಿಗಳು


ಅಂತಾರಾಷ್ಟ್ರೀಯ ಮಟ್ಟದ ಕಲಾವಿದ-ಕೆ.ಕೆ.ಹೆಬ್ಬಾರ್ ಪರಿಚಯ ಕಟ್ಟಿಂಗೇರಿ ಕೃಷ್ಣ ಹೆಬ್ಬಾರ್‌ (ಜನನ: 1911; ನಿಧನ: 1996) (ಕೆ. ಕೆ. ಹೆಬ್ಬಾರ್‌ ಎಂದು ಚಿರಪರಿಚಿತ) ಒಬ್ಬ ಖ್ಯಾತ ಚಿತ್ರಕಲಾವಿದರಾಗಿದ್ದರು.  ಆರಂಭಿಕ ಜೀವನ:- ಕೃಷ್ಣ ಹೆಬ್ಬಾರ್‌ 1911ರಲ್ಲಿ ಭಾರತ ದೇಶದ ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಕಟ್ಟಿಂಗೇರಿಯಲ್ಲಿ ವಾಸವಾಗಿದ್ದ ತುಳು ಭಾಷಿಕ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ತಾಯಿ ಸೀತಮ್ಮ, ತಂದೆ ನಾರಾಯಣ ಹೆಬ್ಬಾರ. ತಂದೆ ಗಣಪತಿಯ ಮಣ್ಣಿನ ಮೂರ್ತಿಗಳನ್ನು ಮಾಡುವದರಲ್ಲಿ ಸಿದ್ಧಹಸ್ತರು. ಮಗ ಗೋಡೆ ಹಾಗೂ ನೆಲದ ಮೇಲೆ ಇದ್ದಿಲಿನಿಂದ ಗೀಚಿದ ಚಿತ್ರಗಳಿಗೆ ತಾಯಿಯ ವಾತ್ಸಲ್ಯಪೂರ್ಣ ಪ್ರೋತ್ಸಾಹ. ತಮ್ಮ ತಂದೆಯವರು ಆಗೊಮ್ಮೆಈಗೊಮ್ಮೆ ಗಣೇಶ  ವಿಗ್ರಹಗಳನ್ನು ನಿರ್ಮಿಸುತ್ತಿದ್ದನ್ನು ಗಮನಿಸುತ್ತಿದ್ದ ಬಾಲಕ ಕೃಷ್ಣ ಹೆಬ್ಬಾರ್‌ ಆಗಿನಿಂದಲೇ ಕಲೆಯತ್ತ ಒಲವು ಬೆಳೆಸಿಕೊಂಡಿದ್ದರು. ಕಲಾವಿದರ ಕುಟುಂಬದಲ್ಲಿ ಜನಿಸಿದ ಕೃಷ್ಣ ಹೆಬ್ಬಾರರು ಔಪಚಾರಿಕ ಶಿಕ್ಷಣವನ್ನುಪೂರ್ತಿಗೊಳಿಸಲಿಲ್ಲ. ಕೌಟಂಬಿಕ ಪರಿಸ್ಥಿತಿಯೂ ಅದಕ್ಕೆ ಪೂರಕವಾಗಿರಲಿಲ್ಲ. ಹಿತೈಷಿಯೊಬ್ಬರ ಸಲಹೆಯ ಮೇರೆಗೆ ಮೈಸೂರಿನಲ್ಲಿರುವ ಚಾಮರಾಜೇಂದ್ರ ಟೆಕ್ನಿಕಲ್ ಇನ್ಸ್ಟಿಟ್ಯೂಟದಲ್ಲಿ ಚಿತ್ರಕಲೆಯ ಅಭ್ಯಾಸಕ್ಕಾಗಿ ಸೇರಿಕೊಂಡರು. ಅಲ್ಲಿಯ ಶಿಕ್ಷಣ ಪದ್ಧತಿಯಿಂದ ಸಮಾಧಾನವಾಗದ ಹೆಬ್ಬಾರರು ಮುಂಬಯಿಗೆ ನಡೆದರು. ಹೊಟ್ಟೆಪಾಡಿಗಾಗಿ ಫೋಟೋಗ್ರಾಫರ್ ಒಬ್ಬರಲ್ಲಿ ದುಡಿಯುತ್ತ ದಂಡವತಿಯವರ ಚಿತ್ರಕಲಾಶಾಲೆಯಲ್ಲಿ ಅಭ್ಯಾಸ ನಡೆಸಿದರು. 1934 ರಿಂದ 1938ರ ತನಕ ಮುಂಬಯಿಯ ಜೆ ಜೆ ಸ್ಕೂಲ್‌ ಆಫ್‌ ಆರ್ಟ್ಸ್‌ನಲ್ಲಿ ಕಲೆಯ ವಿಧ್ಯುಕ್ತ ವ್ಯಾಸಂಗ ಮಾಡಿದರು. ನಂತರ, ಅವರು ಪ್ಯಾರಿಸ್‌ನಲ್ಲಿ ಅಕಾಡೆಮೀ ಜೂಲಿಯನ್‌ನಲ್ಲಿ ಕಲಾ ವ್ಯಾಸಂಗ ಮಾಡಿದರು. ವೃತ್ತಿಜೀವನ :- 1939ರಿಂದ1946 ರವರೆಗೆ  ಮುಂಬಯಿಯ J.J.School of Artನಲ್ಲಿ ಚಿತ್ರಕಲೆಯನ್ನು ಬೋಧಿಸಿದರು. ಹೆಬ್ಬಾರ್‌ರ ಆರಂಭಕಾಲಿಕ ಕಲಾಕೃತಿಗಳನ್ನು ಕೇರಳ ಹಂತ ಎನ್ನಲಾಗಿತ್ತು, ಏಕೆಂದರೆ, ಅವರ ಕಲೆಯಲ್ಲಿ ಮಲಬಾರ್‌ ಮತ್ತು  ತುಳುನಾಡು ವಲಯಗಳ ನಿರಂತರ ಶ್ರೇಣಿಯನ್ನು ಆಗಾಗ್ಗೆ ವಿವರಿಸಲಾಗುತ್ತಿತ್ತು. ಆನಂತರ ಅವರು ತಮ್ಮ ಕಲೆಯಲ್ಲಿ ಇತರೆ ವಿಷಯಗಳೊಂದಿಗೆ ಪ್ರಯೋಗ ನಡೆಸಿದರು. ಇವರ ಕಲಾಕೃತಿಗಳು ಪಾಲ್‌ ಗಾಗ್ವಿನ್‌ ಮತ್ತು ಅಮೃತಾ ಷರ್‌-ಗಿಲ್‌ರ ಕಲಾಕೃತಿಗಳಿಂದ ಪ್ರೇರಿತವಾಗಿದ್ದವು. ಆಗ 1965ರಲ್ಲಿ ಲಂಡನ್‌ ಮತ್ತು  ಬ್ರಸೆಲ್ಸ್‌ನಲ್ಲಿ ನಡೆದ ಆರ್ಟ್‌ ನೌ ಇನ್‌ ಇಂಡಿಯಾ ಕಲಾ ಪ್ರದರ್ಶನದಲ್ಲಿ ಪ್ರದರ್ಶಿಸಲಾದ ತಮ್ಮ ಚಿತ್ರಕಲೆಗಳ ಮೂಲಕ ಅಂತರರಾಷ್ಟ್ರೀಯ ಅಭಿಮಾನಿಗಳನ್ನು ಗಳಿಸಿಕೊಂಡಂತಾಯಿತು. ಇಂದು ಹೆಬ್ಬಾರ್‌ರ ಕಲಾಕೃತಿಗಳನ್ನು ಭಾರತೀಯ ಕಲಾ ಇತಿಹಾಸದಲ್ಲಿ ಬಹಳಷ್ಟು ಪ್ರಭಾವಿ ಎಂದು ಪರಿಗಣಿಸಲಾಗಿದೆ. ವೆನಿಸ್‌ ಬಯೆನ್ನೇಲ್‌, ಸಾವೊ ಪಾಲೊ ಆರ್ಟ್‌ ಬಯೆನ್ನಿಯಲ್‌ ಹಾಗೂ ಟೊಕಿಯೊ ಬಯೆನ್ನೇಲ್‌ ಸೇರಿದಂತೆ ವಿಭಿನ್ನ ಅಂತರರಾಷ್ಟ್ರೀಯ ಕಲಾ ಪ್ರದರ್ಶನಗಳಲ್ಲಿ ಹೆಬ್ಬಾರ್‌ ಭಾಗವಹಿಸಿದರು.

 ಚಿತ್ರಪ್ರದರ್ಶನ :-

 * 1941 : Academy of Fine Arts, Kolkata.         * 1945 : ಮುಂಬಯಿಯಲ್ಲಿ ಏಕವ್ಯಕ್ತಿ ಚಿತ್ರಪ್ರದರ್ಶನ.       * 1947: Bombay Arts Society, ಮುಂಬಯಿ ಯ ವಾರ್ಷಿಕ ಪ್ರದರ್ಶನ. 
   * 1949: ಪ್ಯಾರಿಸ್‍ನಲ್ಲಿ ಏಕವ್ಯಕ್ತಿ ಚಿತ್ರಪ್ರದರ್ಶನ. 
   * 1950: ಲಂಡನ್‍ದಲ್ಲಿ ಏಕವ್ಯಕ್ತಿ ಚಿತ್ರಪ್ರದರ್ಶನ. 
 * 1951: Salon de Mai, ಪ್ಯಾರಿಸನಲ್ಲಿ  ಚಿತ್ರಪ್ರದರ್ಶನ.   *1953: ರಶಿಯಾ, ಪೋಲ್ಯಾಂಡ ಹಾಗು ಜರ್ಮನಿ(ಆಗ ಪಶ್ಚಿಮ ಜರ್ಮನಿ) ಗಳಲ್ಲಿ ಪ್ರಯಾಣ ಹಾಗೂ ಚಿತ್ರಪ್ರದರ್ಶನ. 
 * 1955: Venice Biennale, ಇಟಲಿ. 
* 1956: ರಾಷ್ಟ್ರೀಯ ಚಿತ್ರಪ್ರದರ್ಶನ, ರವೀಂದ್ರಭವನ, ಲಲಿತ ಕಲಾ ಅಕಾಡೆಮಿ, ಹೊಸ ದೆಹಲಿ. 
 * 1957: ರಾಷ್ಟ್ರೀಯ ಚಿತ್ರಪ್ರದರ್ಶನ, ರವೀಂದ್ರಭವನ, ಲಲಿತ ಕಲಾ ಅಕಾಡೆಮಿ, ಹೊಸ ದೆಹಲಿ. 
 * 1958: ರಾಷ್ಟ್ರೀಯ ಚಿತ್ರಪ್ರದರ್ಶನ, ರವೀಂದ್ರಭವನ, ಲಲಿತ ಕಲಾ ಅಕಾಡೆಮಿ, ಹೊಸ ದೆಹಲಿ. "1959: Sao Paulo Biennale, ಬ್ರೇಝಿಲ್. 
 * 1964: ನ್ಯೂಯಾರ್ಕ್ನಲ್ಲಿ ಏಕವ್ಯಕ್ತಿ ಚಿತ್ರಪ್ರದರ್ಶನ. 
* 1969: Bonythan Art Gallery, ಸಿಡ್ನಿ, ಆಸ್ಟ್ರೇಲಿಯಾ. 
 * 1971: Retrospective, ರವೀಂದ್ರಭವನ, ಲಲಿತ ಕಲಾ ಅಕಾಡೆಮಿ, ಹೊಸದೆಹಲಿ. 
 * 1987: Indian Drawing Today: Jehangir Art Gallery, Bombay. 
 * 1994: Vadhera Art Gallery, ದಿಲ್ಲಿಯಲ್ಲಿ ಏಕವ್ಯಕ್ತಿ ಚಿತ್ರಪ್ರದರ್ಶನ. 
 *1999: Fine Art Company, ಮುಂಬಯಿಯಲ್ಲಿ ಚಿತ್ರಪ್ರದರ್ಶನ 
 (Jehangir Art Gallery):- ಮುಂಬಯಿನಗರದಲ್ಲಿ ಸ್ಥಾಪಿಸಲ್ಪಟ್ಟಿರುವ ವಿಶ್ವ ವಿಖ್ಯಾತ-ಕಲಾ ಪ್ರದರ್ಶನ ಕೇಂದ್ರ (Jehangir Art Gallery)ಯ ಕಲ್ಪನೆಯನ್ನು ಕನ್ನಡದ ಕಲಾವಿದ ಕೆ.ಕೆ.ಹೆಬ್ಬಾರ್ ಹಾಗೂ ಪ್ರಖ್ಯಾತ ವಿಜ್ಞಾನಿ ಮತ್ತು ಕಲಾವಿದ ಡಾ. ಹೋಮಿ ಭಾಭಾರವರ ಪ್ರಯತ್ನದಿಂದಾಗಿ ಸಾಧ್ಯವಾಯಿತು. ಸರ್ ಕವಾಸ್ ಜಿ ಜೆಹಾಂಗೀರ್, ಈ ಕಲಾನಿಲಯಕ್ಕೆ ಆರ್ಥಿಕ ನೆರವನ್ನು ಕೊಡಲು ವಾಗ್ದಾನಮಾಡಿದರು. ಹಾಗಾಗಿ 1952ರಲ್ಲಿ 'ಜೆಹಾಂಗೀರ್ ಆರ್ಟ್ ಗ್ಯಾಲರಿ', ಮುಂಬಯಿನ ಕೋಟೆ ಪ್ರದೇಶದಲ್ಲಿ ರೂಪುಗೊಂಡಿತು. ಈ ಜನಪ್ರಿಯ ಕಲಾಮಂದಿರದ ನಿರ್ವಣೆಯನ್ನು 'ಮುಂಬಯಿ ಆರ್ಟ್ ಸೊಸೈಟಿ'ಯವರು ವಹಿಸಿಕೊಂಡರು. 'ಕಾಲಾಘೋಡ' ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಈ ಪ್ರತಿಷ್ಠಿತ ಮಹಾ ಪ್ರದರ್ಶನ ತಾಣದಲ್ಲಿ ತಮ್ಮ ಕಲೆಯ ಪರಿಚಯಮಾಡಲು ಭಾರತದ ಎಲ್ಲಾ ರಾಜ್ಯಗಳಿಂದ ಕಲಾವಿದರು, ಶಿಲ್ಪಿಗಳು ಮುಂಬಯಿಗೆ ಬರುತ್ತಾರೆ. ಬೇಡಿಕೆ ಅತಿಯಾಗಿದ್ದು, ಕೆಲವೊಮ್ಮೆ, ಕೆಲವು ವರ್ಷಗಳು ಕಾಯಬೇಕಾಗುತ್ತದೆ. 

 ಪ್ರಶಸ್ತಿಗಳು:-
 ತಮ್ಮ ಜೀವನದುದ್ದಕ್ಕೂ ಹೆಬ್ಬಾರ್‌ ಹಲವು ಪ್ರಶಸ್ತಿಗಳನ್ನು ಗಳಿಸಿದರು. 
 * 1941 : ಕೋಲಕತ್ತಾದ Academy of Fine Arts ನೀಡಿದ ಸ್ವರ್ಣಪದಕ. 
 * 1947 : Bombay Art Society ನೀಡಿದ ಸ್ವರ್ಣಪದಕ. 
 * 1954 : ಲಲಿತ ಕಲಾ ಅಕಾಡೆಮಿಯಿಂದ Eminent Artist ಎಂಬ ಪುರಸ್ಕಾರ. 
 * 1956 : ಮುಂಬಯಿ ಪ್ರಾಂತ ಪುರಸ್ಕಾರ. 
 * 1957 : ರಾಷ್ಟ್ರೀಯ ಕಲಾ ಅಕಾಡೆಮಿ ಪುರಸ್ಕಾರ (ಲಲಿತ ಕಲಾ ಅಕಾಡೆಮಿ, ಹೊಸ ದಿಲ್ಲಿ). 
 * 1957 : ರಾಷ್ಟ್ರೀಯ ಕಲಾ ಅಕಾಡೆಮಿ ಪುರಸ್ಕಾರ (ಲಲಿತ ಕಲಾ ಅಕಾಡೆಮಿ, ಹೊಸ ದಿಲ್ಲಿ). 
 * 1958 : ರಾಷ್ಟ್ರೀಯ ಕಲಾ ಅಕಾಡೆಮಿ ಪುರಸ್ಕಾರ (ಲಲಿತ ಕಲಾ ಅಕಾಡೆಮಿ, ಹೊಸ ದಿಲ್ಲಿ). 
 * 1961 : ಪದ್ಮಶ್ರೀ ಪುರಸ್ಕಾರ. 
 * 1976 : Fellow of Lalit Kala Akademi, New Delhi. 
 * 1976 : ಮೈಸೂರು ವಿಶ್ವವಿದ್ಯಾನಿಲಯದವರು ನೀಡಿದ ಗೌರವ ಡಿ.ಲಿಟ್. ಪುರಸ್ಕಾರ. 
 * 1980-84 : ಲಲಿತ ಕಲಾ ಅಕಾಡೆಮಿಯ ಚೇರ್ಮನ್ ಎಂದು ರಾಷ್ಟ್ರಪತಿಯವರಿಂದ ನೇಮಿತ. 
 * 1983 : ಸೋವಿಯೆಟ್ ಲ್ಯಾಂಡ್ ನೆಹರು ಪ್ರಶಸ್ತಿ. 
 * 1985 : ಕರ್ನಾಟಕ ಲಲಿತ ಕಲಾ ಅಕಾಡೆಮಿಯಿಂದ ವಿಶಿಷ್ಟ ಕಲಾಕಾರರ ಪ್ರಶಸ್ತಿ. 
 * 1986 : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ. *1988 : ಮಹಾರಾಷ್ಟ್ರ ರಾಜ್ಯದ ಗೌರವ ಪುರಸ್ಕಾರ. 
 * 1989 : ಪದ್ಮಭೂಷಣ ಪ್ರಶಸ್ತಿ ಪ್ರದಾನ. 
 * 1990 : ಮಹಾರಾಷ್ಟ್ರ ರಾಜ್ಯದ ಗೌರವ ಪುರಸ್ಕಾರ. 

 ಕೆಲವು ಖ್ಯಾತ ಚಿತ್ರಗಳು:-
ಕಾರ್ಲೆ ಗುಹಾ ಚಿತ್ರ, ದನಗಳ ಸಂತೆ, ಭಿಕ್ಷುಕರು, Sunny Southfood, ಮಾಹೀಮ್ ದರ್ಗಾ, ಶಾಂತಿ, ಸಂಗೀತಗಾರ, ವಿನಾಶ, ಸಂಧ್ಯಾಗೀತೆ, ಗಾಳಿಪಟಗಳು, ಜೀವನ ಮತ್ತು ಮೃತ್ಯು, ನಾಗಮಂಡಲ. 

 ಹೆಬ್ಬಾರರ ಚಿತ್ರಸಂಗ್ರಹಗಳು:- 
 * National Gallery of Modern Art, New Delhi (Lalit Kala Academy, New Delhi). 
 * Governmental Museums in Punjab, Karnataka, Tamilnadu, Baroda. 
 * Academy of Fine Arts, Kolkata. 
 * Birla Academy of Fine Arts, Kolakata. 
 * Tata Institute of Fundamental Research, Bombay. 
 * Kala Academy, Goa. Museum of Modern Art, Paris. 
*Government Museums : Poland,  Czechoslovakia, Russia, Dresden Gallery, Germany. 
 * The Commonwealth, Australia. 
 * The Staten Island Institute of Arts & Science Museum, U.S.A. 
 ಕೆ.ಕೆ.ಹೆಬ್ಬಾರರವರು 1996 ಮಾರ್ಚ 26ರಂದು ನಿಧನರಾದರು. 
✍️✍️✍️✍️✍️✍️✍️✍️✍️✍️✍️ ✍️✍️✍️✍️✍️✍️




👆 ಆರ್ ಎಂ ಹಡಪದ


ಚಿತ್ರ ಕಲಾವಿದರಾದ ಆರ್.ಎಂ. ಹಡಪದ ರವರ ಪರಿಚಯ ಆರ್.ಎಂ. ಹಡಪದ ಅವರು ಬಿಜಾಪುರ ಜಿಲ್ಲೆಯ ಬಾದಾಮಿಯಲ್ಲಿ ಮಾರ್ಚ್ 1, 1936ರಲ್ಲಿ ಜನಿಸಿದರು . ಕಲೆಯ ಬೀಡಾದ ಬಾದಾಮಿಯೇ ಬಾಲಕನ zಮೇಲೆ ಅಪಾರವಾದ ಪ್ರಭಾವ ಬೀರಿದವು. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗಲೇ ಚಿತ್ರ ಬರೆಯುವ ಗೀಳು ಹತ್ತಿಸಿಕೊಂಡ ಹಡಪದ ಅವರು ಸ್ನೇಹಿತರ ಪಾಟಿಯ ಮೇಲೆ ಬಿಡಿಸುತ್ತಿದ್ದ ಚಿತ್ರಗಳನ್ನು ಕಂಡ ಉಪಾಧ್ಯಾಯ ಬಿರಾದಾರ ಅವರು, ಇವರ ಪ್ರತಿಭೆಗೆ ನೀರೆರೆದರು. ಎಸ್.ಎಸ್.ಎಲ್.ಸಿ. ಮುಗಿಸಿ ಹುಬ್ಬಳ್ಳಿಯ ಕಲಾಶಾಲೆಯಿಂದ ಶಿಕ್ಷಣ ಪಡೆದರು. ಮುಂದೆ ಮುಂಬೈಯ ಜೆ. ಜೆ. ಸ್ಕೂಲ್ ಆಫ್ ಆರ್ಟದಿಂದ ಎ. ಎಂ. ಆನಂತರ ಜಿ.ಡಿ. ಅರ್ಟನ್ನು ಸಂಪಾದಿಸಿದರು. ಜೊತೆಗೆ ಕಲಾಗುರು ಜಿ. ಎಸ್. ದಂಡಾವತಿಮಠ ಹಾಗೂ ಟಿ.ಪಿ. ಅಕ್ಕಿಯವರಂತಹ ಹಿರಿಯರ ಮಾರ್ಗದರ್ಶನ ಹಾಗೂ ಪ್ರೋತ್ಸಾಹವು ಅವರಿಗೆ ದೊರೆತಿದೆ. 1961ರಲ್ಲಿ ಮಿಣಜಿಗಿಯವರು ಡ್ರಾಯಿಂಗ್ ಟೀಚರ್ಸ್ ಇನ್‌ಸ್ಟಿಟ್ಯೂಟನ್ನು ಬೆಂಗಳೂರಲ್ಲಿ ತೆರೆದಾಗ ಹಡಪದರವರು ಬೆಂಗಳೂರಿಗೆ ಬಂದರು. 1963ರ ವರ್ಷದಲ್ಲಿ ಕಲಿಯುತ್ತಿದ್ದ ದಿನಗಳಲ್ಲೇ ಏಕವ್ಯಕ್ತಿ ಪ್ರದರ್ಶನ ನಡೆಸಿದರು. 1966 ರ ಅವಧಿಯಲ್ಲಿ ನ್ಯಾಷನಲ್ ಬುಕ್ ಟ್ರಸ್ಟಿನ ಪುಸ್ತಕಗಳ ಮುಖಪುಟಕ್ಕೆ ಮತ್ತು ಈಸ್ಟವೆಸ್ಟ ಮಾಗ್ರಿನ್‌ಗಳಂತಹ ಗ್ರಂಥಗಳಿಗೆ ಚಿತ್ರಗಳನ್ನು ರಚಿಸಿಕೊಟ್ಟಿದ್ದಾರೆ. 1966 ರಲ್ಲಿ “We Four" ಎಂಬ ಕಲಾಗುಂಪಿನ ಸಂಸ್ಥಾಪಕರಾದ ಇವರು ಭಾರತದ ಪ್ರಮುಖ ಸ್ಥಳಗಳಲ್ಲಿ ಸುಮಾರು ಇಪ್ಪತ್ತಕ್ಕಿಂತ ಹೆಚ್ಚು ಏಕವ್ಯಕ್ತಿ ಕಲಾ ಪ್ರದರ್ಶನವನ್ನು ಸಂಘಟಿಸಿ ಅಪಾರ ಜನಪ್ರಿಯರಾಗಿದ್ದಾರೆ. ಮಿಣಜಿಗಿಯವರಿಗೆ ಶಾಲೆ ಮುಚ್ಚಬೇಕಾದ ಪರಿಸ್ಥಿತಿ ಬಂದಾಗ ಅದನ್ನು ಹಡಪದರವರು ವಹಿಸಿಕೊಂಡು ಕೆನ್‌ ಕಲಾಶಾಲೆಯಾಗಿ ಪರಿವರ್ತನೆಗೊಳಿಸಿ ನೂರಾರು ವಿದ್ಯಾರ್ಥಿಗಳಿಗೆ ಕಲಿಕೆಗೆ ಅವಕಾಶ ಮೂಡಿಸಿದರು. ಚಂದ್ರನಾಥ್, ಸಿ. ಚಂದ್ರಶೇಖರ್, ಪ.ಸ. ಕುಮಾರ್, ಕಾಮದಾಸ್, ಶ್ಯಾಮಸುಂದರ್, ಶೀಲಾ ಗೌಡ, ಬಿ.ಎ. ಅರಸ್ , ಮಾನಪ್ಪರವರು ಮಹೇಂದ್ರ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ಬೆಂಗಳೂರಿನಲ್ಲಿ ಚಿತ್ರಕಲಾ ವಿಷಯದ ಪ್ರಪ್ರಥಮ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು ಇನ್ನು ಮುಂತಾದ ಮಹಾನ್ ಕಲಾವಿದರು ಹಡಪದರವರ ಕೆನ್ ಕಲಾಶಾಲೆಯ ವಿದ್ಯಾರ್ಥಿಗಳೇ. ಕೆನ್ ಕಲಾಶಾಲೆಯಲ್ಲಿ ಹಡಪದರು ಹಲವಾರು ವರ್ಷಗಳ ಕಾಲ ಪ್ರಾಂಶುಪಾಲ ಹುದ್ದೆ ನಿರ್ವಹಿಸಿದರು. 1970ರ ಆಸ್ಟಿನ್‌ದಲ್ಲಿ ಸಾಮೂಹಿಕ ಪ್ರದರ್ಶನ, 1979-80ರ ಜರ್ಮನಿಯಲ್ಲಿ ಸೋಲೂ ಪ್ರದರ್ಶನ ಹಾಗೂ ಇತರ ವಿದೇಶಗಳಲ್ಲಿ ಸಂಘಟಿಸಿ, ಜನತೆಯ ಮೆಚ್ಚುಗೆಯನ್ನು ಗಳಿಸಿದ್ದಾರೆ. ರಾಜ್ಯ ಯುವಜನ ಕೇಂದ್ರ ನಡೆಸಿದ ಕಲಾಭಿರುಚಿ ಬೆಳವಣಿಗೆಯ ಕಾರ್ಯಕ್ರಮದ ನಿರ್ದೆಶಕರಾಗಿ ಸೇವೆ ಸಲ್ಲಿಸಿದ್ದಾರೆ. 'ಕಂಕಣ' ಎಂಬ ಕನ್ನಡ ಚಿತ್ರದಲ್ಲಿಯೂ ಕಲಾನಿರ್ದೆಶನ ಕಾರ್ಯನಿರ್ವಹಣೆ. ರಾಜ್ಯ ಹಾಗೂ ಕೇಂದ್ರ ಲಲಿತಕಲಾ ಅಕಾಡೆಮಿಯ ಸದಸ್ಯರಾಗಿ ಇಂದಿಗೂ ಬಹು ಹುರುಪಿನಿಂದ ಕಲೆಯ ಬೆಳ್ಳಗಾಗಿ ಹಗಲಿರುಳು ಶ್ರಮಿಸಿದರು . ದಸರಾ ಪ್ರದರ್ಶನ, ರಾಜ್ಯ ಲಲಿತಕಲಾ ಅಕಾಡೆಮಿ, ಕೇಂದ್ರ ಲಲಿತಕಲಾ ಆಕಾಡೆಮಿ ಹಾಗೂ ಇನ್ನಿತರ ಸಂಸ್ಥೆಗಳು ಸಂಘಟಿಸಿದ ಕಲಾ ಪ್ರದರ್ಶನಗಳಲ್ಲಿ ಬಹುಮಾನ ವಿಜೇತರಾಗಿದ್ದಾರೆ. 1982-83 ನೇ ಸಾಲಿನ ರಾಜ್ಯ ಲಲಿತಕಲಾ ಅಕಾಡೆಮಿಯ ಪ್ರಶಸ್ತಿ ವಿಜೇತರಾದ ಇವರು ಸಮಕಾಲೀನ ಚಿತ್ರಕಲಾರಂಗದ ಹೆಸರಾಂತ ಕಲಾವಿದರಲ್ಲಿ ಒಬ್ಬರು. 1987-90 ರ ಅವಧಿಯಲ್ಲಿ ಹಡಪದರು ಲಲಿತ ಕಲಾ ಅಕಾಡಮಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಕಲಾ ಸಂಗ್ರಹಣ ಶಿಬಿರ, ಕಲಾ ಪುಸ್ತಕ ಪ್ರಕಟಣೆ, ಗ್ರಾಫಿಕ್ ಸ್ಟುಡಿಯೋ ಸ್ಥಾಪನೆ, ಅಂತರ ರಾಜ್ಯ ವಿನಿಮಯ ಕಲಾ ಕೇಂದ್ರ ಪ್ರದರ್ಶನ ಮುಂತಾದುವು ಅವರು ನಡೆಸಿದ ಮಹತ್ವದ ಕಾರ್ಯಗಳಾಗಿವೆ. ಲಲಿತಕಲಾ ಅಕಾಡಮಿ, ನವದೆಹಲಿ, ಭಾರತ್ ಭವನ್-ಭೂಪಾಲ್ ಅಲ್ಲದೆ ಆಸ್ಟಿನ್, ಅಮೆರಿಕಾ, ಜರ್ಮನಿ ಮುಂತಾದೆಡೆ ವ್ಯಾಪಕ ಪ್ರವಾಸಮಾಡಿ ಕಲಾ ಪ್ರದರ್ಶನ ನಡೆಸಿದ ಕೀರ್ತಿ ಹಡಪದ ಅವರದು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ, ಕೇಂದ್ರ ಲಲಿತಕಲಾ ಅಕಾಡೆಮಿ ಪ್ರಶಸ್ತಿ, ಉತ್ತಮ ಕಲಾವಿದ ಮತ್ತು ಅಧ್ಯಾಪಕ ಪುರಸ್ಕಾರ, ಕರ್ನಾಟಕ ಲಲಿತಕಲಾ ಅಕಾಡಮಿ ಸೀನಿಯರ್ ಫೆಲೊಷಿಪ್ ಮುಂತಾದ ಹಲವಾರು ಗೌರವಗಳು ಹಡಪದ ಅವರಿಗೆ ಸಂದಿವೆ. ಆರ್ ಎಂ ಹಡಪದ ಅವರು 2003ರ ವರ್ಷದಲ್ಲಿ ಈ ಲೋಕವನ್ನಗಲಿದರು.

***********************************************

👉 ಡಾ. ಎಸ್. ಎಂ ಪಂಡಿತ



👆  ರಾಜಾ ರವಿ ವರ್ಮ 👇
ರಾಜಾ ರವಿವರ್ಮ( 29 ಏಪ್ರಿಲ್ 1848 ರಿಂದ -2 ಅಕ್ಟೋಬರ್ 1906 ) - ಭಾರತದ ಸುಪ್ರಸಿದ್ಧ ವರ್ಣಚಿತ್ರಗಾರ ಪರಿಚಯ ಆರಂಬಿಕ ಬದುಕುಸಂಪಾದಿಸಿ ರಾಜಾ ರವಿವರ್ಮರು ಕಿಳಿಮಾನೂರು ಊರಿನ, ರಾಜವಂಶಕ್ಕೆ ಸೇರಿದವರು. ಈ ಗ್ರಾಮ, ತಿರುವನಂತಪುರದ ಉತ್ತರಕ್ಕೆ , 25 ಮೈಲಿ ದೂರದಲ್ಲಿದೆ. ಕಂಡನೂರು ದೆಶತ್ತ್ ಮತ್ತು ಉಮಾ ಅಂಬಾಬಾಯಿಯವರ ಒಲವಿನ ಮಗನಾಗಿ, 29, ಏಪ್ರಿಲ್ 1848 ರಲ್ಲಿ ರವಿವರ್ಮರು ಜನಿಸಿದರು. ತಾಯಿ ಕವಯಿತ್ರಿ, ಮತ್ತು ಸುಸಂಸ್ಕೃತರು. ತಂದೆ, ಸಂಸ್ಕೃತವನ್ನು ಓದಿಕೊಂಡವರು. ಚಿಕ್ಕಂದಿನಿಂದಲೂ ರವಿಯವರು ದೈವಭಕ್ತರು. ಆಚಾರ, ನಿಷ್ಠೆ, ಆತ್ಮಸ್ಥೈರ್ಯ, ಮತ್ತು ಆತ್ಮವಿಶ್ವಾಸಗಳು, ಅವರಿಗೆ ಹುಟ್ಟಿನಿಂದಲೆ ಬಂದಿದ್ದವು. ಪ್ರತಿದಿನ ಬೆಳಿಗ್ಯೆ ಬೇಗ ಎದ್ದು, ನಿತ್ಯಕರ್ಮಗಳನ್ನು ಮುಗಿಸಿ, ಸೌಂದರ್ಯಲಹರಿ, ಸ್ವಯಂವರ, ಮಂತ್ರಗಳನ್ನು ಬಾಯಿಪಾಠವಾಗಿ ಹೇಳುತ್ತಿದ್ದರು. ರವಿ, [ ರವಿವರ್ಮರನ್ನು ಬಾಲ್ಯದಲ್ಲಿ ಗೆಳೆಯರು ಹಾಗೆಯೇ ಕರೆಯುತ್ತಿದ್ದದ್ದು ] ಸಾಹಿತ್ಯ, ವ್ಯಾಕರಣ, ಶಾಸ್ತ್ರೀಯ ಸಂಗೀತ, ಮತ್ತು ವೇದಪುರಾಣಗಳಲ್ಲಿ 
ಆಸಕ್ತರು. ರಾಮಾಯಣ, ಮಹಾಭಾರತ, ಅವರಿಗೆ ಬಲು ಪ್ರಿಯವಾದ ಗ್ರಂಥಗಳು. ಅಮರಕೋಶ, ಸಿದ್ಧರೂಪ, ಅವರಿಗೆ 5 ನೇ ವಯಸ್ಸಿನಲ್ಲೇ ಬಾಯಿಪಾಠವಾಗಿತ್ತು. ಅವರ ಮಾವ, ರಾಜರಾಜವರ್ಮರು ಒಳ್ಳೆಯ ಕಲಾಸಾಧಕರು. ಅವರು ಆಗಿನ ತಿರುವಾಂಕೂರಿನ ಮಹಾರಾಜರಾದ, ಆಯಿಲ್ಯಂ ತಿರುನಾಳ್ ರವರಿಗೆ ರವಿಯನ್ನು ಪರಿಚಯಿಸಿದರು. ಆಗ ರವಿಗೆ ಕೇವಲ 14 ವರ್ಷ ವಯಸ್ಸು. ದೊರೆಗಳು ರವಿಗೆ ಆಗಿನಕಾಲದ ಪ್ರಮುಖ ಚಿತ್ರಕಲಾವಿದರು ರಚಿಸಿದ, ಸಚಿತ್ರ ಪುಸ್ತಕವನ್ನು ಕೊಟ್ಟು ಅದನ್ನು ಅಭ್ಯಸಿಸಲು ಹೇಳಿದರು. ಅಳಗಿರಿ ನಾಯ್ಡು ಅವರನ್ನು ಪರಿಚಯಿಸಿ, ಅವರಬಳಿ ತಮ್ಮ ಕಲಾಭ್ಯಾಸವನ್ನು ಮುಂದುವರೆಸಲು ಅನುಮತಿ ನೀಡಲಾಯಿತು. ತಿರುವನಂತಪುರದ ಅರಮನೆಯ ಆಸ್ಥಾನಕಲಾವಿದನಾಗಿ:- 1866ರಲ್ಲಿ, "ವೀರಶೃಂಖಲೆ ", ಪ್ರಶಸ್ತಿಯ ಜೊತೆಗೆ, ತಿರುವನಂತಪುರದ ಅರಮನೆಯ ಆಸ್ಥಾನಕಲಾವಿದನಾಗಿ, ನೇಮಿಸಲ್ಪಟ್ಟರು ; ತಿಂಗಳಿಗೆ ೫೦ ರೂಗಳ ಮಾಸಾಶನದ ಏರ್ಪಾಡುಮಾಡಲಾಯಿತು. 1868ರಲ್ಲಿ, ಥಿಯೊಡರ್ ಜೆನ್ಸನ್, ಎಂಬ ಐರೋಪ್ಯ ಚಿತ್ರಕಲಾಕಾರನು ಕೇರಳಕ್ಕೆ ಬಂದಿದ್ದನು. ತನ್ನ ಐರೋಪ್ಯ ಚಿತ್ರಕಲೆಯ ವಿವರಗಳನ್ನು ತೋರಿಸಿ ಅಲ್ಲಿನ ಭಾವ ವೈವಿಧ್ಯತೆಗಳನ್ನು ವಿವರಿಸಿದನು. ತೈಲ ವರ್ಣಚಿತ್ರಗಳ ಸಂಯೋಜನೆಯನ್ನು ಅವನು ರವಿಗೆ ಹೆಳಿಕೊಟ್ಟನು. ಭಾರತೀಯ ಚಿತ್ರಕಲೆಯಲ್ಲಿ ತುಂಬಬೇಕಾದ, ಗಂಭೀರ ವದನ, ಮಹಿಳೆಯಲ್ಲಿ ಇರಬೇಕಾದ ನಾಚಿಗೆ, ವಿಸ್ಮಯ, ಭೀತಿ, ಚಾಂಚಲ್ಯ, ಧೀರತೆ, ಮಂದಹಾಸ, ಇತ್ಯಾದಿಗಳನ್ನು ನಮ್ಮ ದೇಶದ ವರ್ಣಚಿತ್ರಗಳಲ್ಲಿ ಮಾತ್ರ ಕಾಣಬಹುದು. ರವಿಯವರು ಅದನ್ನು ತಾವೇ ವೀಕ್ಷಿಸಿ ಕಲಿತುಕೊಂಡರು. ಮತ್ತು ರವಿ ದೂರದಿಂದ ನೋಡಿಯೇ ಹಲವಾರು ಸೂಕ್ಷ್ಮತೆಗಳನ್ನು ಗಮನಿಸಿ ಮನನಮಾಡಿದರು. ಅರಮನೆಯಲ್ಲಿ ಚಿತ್ರಕಲೆಗಾಗಿಯೇ ಒಂದು ಪ್ರತ್ಯೇಕ ಕೊಠಡಿಯನ್ನು ಮೀಸಲಾಗಿಟ್ಟಿದ್ದರು. ಹಿರಿಯ ಕಲಾವಿದರಾದ, ರಾಮಸ್ವಾಮಿ ನ್ಯಾಕರ್, ಮತ್ತು ಆರ್ಮುಗಂ ಪಿಳ್ಳೆಯವರ ಪ್ರಭಾವವೂ, ರವಿಯವರಮೇಲೆ ಆಯಿತು. ಈ ಗುರುಗಳು ರವಿಯವರಿಗೆ ತಕ್ಕ ಕಲಾಮೂಲ ಅಡಿಪಾಯವನ್ನು ಸುಸ್ಥಿರವಾಗಿ ಹಾಕಿಕೊಟ್ಟಿದ್ದರಿಂದ ಕಲೆಯ ಹೊಸ ಹೊಸ ಪದ್ಧತಿಗಳು, ವಿನ್ಯಾಸಗಳೂ ಬಂದಾಗ, ಪ್ರಾಕಾರಗಳನ್ನು ಅರಿಯಲು ಅವರಿಗೆ ತೊಂದರೆಯೇನೂ ಆಗಲಿಲ್ಲ. ರವಿವರ್ಮರು ತಮ್ಮ ಸ್ವಂತ ಸಹಾಯದ ಕಲಿಕೆಯಿಂದಲೇ ಕಲೆಯನ್ನು ತಮ್ಮದಾಗಿಸಿಕೊಂಡರು. ಕಲೆಗೆ ಪೂರಕವಾದ ಮಾಹಿತಿಗಳನ್ನು ಅವರು, ಪುರಾಣ ಪುಣ್ಯಕಥೆಗಳನ್ನು ಪಠಿಸುವ ಮೂಲಕ ತಮ್ಮ ಕಲಾ-ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಂಡರು. ರವಿಯವರ ವಿವಾಹ, ರಾಜಕುಟುಂಬಕ್ಕೆ ಸೇರಿದ ಪುರೂರು ಟ್ಟಾತಿನಾಳ್ ರಾಣಿ,(ರಾಣಿ ಭಾಗೀರತಿಬಾಯಿ)(ಕೊಚ್ಚು ಪಂಗಿ ಅಮ್ಮ) ಎಂಬ ಕನ್ಯೆಯೊಡನೆ ನೆರವೇರಿತು. ಈಕೆ ಮಾವೇಲಿಕ್ಕರ ಮನೆತನದವಳು. ಈ ದಂಪತಿಗಳಿಗೆ 2 ಗಂಡುಮಕ್ಕಳು ಹಾಗೂ 2 ಹೆಣ್ಣು ಮಕ್ಕಳು ಜನಿಸಿದರು. ಚೊಚ್ಚಲು ಮಗ ಕೇರಳವರ್ಮ, 1876 ರಲ್ಲಿ ಜನಿಸಿದನು. ಎರಡನೆಯ ಮಗ ರಾಮವರ್ಮ 1879 ರಲ್ಲಿ ಹುಟ್ಟಿದ . ಮೂರನೆಯ ಮಗನೇ ರಾಜ ರಾಜ ವರ್ಮ. ಮಹಾಪ್ರಭ, ಮತ್ತು ಉಮಬಾಯಿ ಹೆಣ್ಣುಮಕ್ಕಳು. ಮಹಾಪ್ರಭ ತಂದೆಯವರ 2 ಪ್ರಸಿದ್ಧ ತೈಲಚಿತ್ರಗಳಿಗೆ ರೂಪದರ್ಶಿಯಾಗಿದ್ದರು. ಇವರ ಮಗಳೇ ಮಹರಾಣೀ ಸೇತುಲಕ್ಷ್ಮಿ ಬಾಯಿ. ಈಕೆ ತಿರುವಂತಪುರದ ಮಹಾರಾಜರನ್ನು ಮದುವೆಯಾದಳು. ಕೇರಳ ವರ್ಮ 1912 ರಲ್ಲಿ ಎಲ್ಲೋ ಕಾಣೆಯಾದನು. ಅವನ ಯಾವ ಸುಳಿವೂ ತಿಳಿಯಲಿಲ್ಲ. ರಾಮವರ್ಮ,ಬೊಂಬಾಯಿನ ಜೆ. ಜೆ. ಸ್ಕೂಲ್ ಆಫ್ ಆರ್ಟ್ಸ ನಲ್ಲಿ ಚಿತ್ರಕಲಾವಿದ್ಯಾಭ್ಯಾಸಮಾಡಿದನು. ಈತನು ದಿವಾನ್ ಪೀ. ಜಿ. ಎನ್ ಉನ್ನಿಥನ್ ರವರ ಸೋದರಿ, ಗೌರಿ ಕುಂಜಮ್ಮನವರೊಂದಿಗೆ ವಿವಾಹ ಮಾಡಿಕೊಂಡನು. 1870 ರಲ್ಲಿ, ಕೊಲ್ಲೂರಿನ ಮೂಕಂಬಿಕಾ ದೇವಿಸನ್ನಿಧಿಗೆ ಹೋಗಿ, ಅಲ್ಲಿ 41ದಿನಗಳ ವ್ರತಾಚರಣೆ ಮಾಡಿದರು. ಏಕಾಗ್ರತೆಯಿಂದ ಸರಸ್ವತಿ ದೇವಿಯ ಭಜನೆ, ನಡೆಯುತ್ತಿತ್ತು. ಕೊನೆಗೆ, ಮಂಗಳಕ್ಕೆ 3 ದಿನ ಮೊದಲು, ಸರ್ವಾಂಗಸುಂದರಿ, ಮೂಕಾಂಬಿಕಾ ಅಮ್ಮನವರು ಕಾಣಿಸಿಕೊಂಡು, ಪ್ರೀತಿವಾತ್ಸಲ್ಯದಿಂದ ತಮ್ಮ ಸ್ನೇಹಹಸ್ತವನ್ನು ಅವರ ಮಸ್ತಕದಮೇಲೆ ಇಟ್ಟು ಹರಸಿದಂತೆ ಕನಸಾಯಿತಂತೆ. ಅಂದಿನಿಂದ ಅವರು ರಚಿಸಲು ಪ್ರಯತ್ನಿಸಿದ ಎಲ್ಲಾ ದೇವಿಯರ ಚಿತ್ರಗಳಿಗೂ, ಅಮ್ಮನವರೇ ರೂಪದರ್ಶಿಯಾಗಿ ಅವರಿಗೆ, ಸ್ಪೂರ್ತಿ ಕೊಟ್ಟರಂತೆ. ಉತ್ತರಭಾರತಕ್ಕೆ ಹೋದಾಗ, ಅಲ್ಲಿನ ವೇಷ-ಭೂಷಣ, ಜೀವನ-ಕ್ರಮವಿಧಾನ, ಆಚಾರ-ವ್ಯವಹಾರ, ಮರ್ಯಾದೆ ಕುಲಂಕುಶವಾಗಿ ನೋಡಿಕೊಂಡು ಬಂದರು. ಹೀಗೆ ಅವರು ತಮ್ಮ ಕಲೆಯ ಅಭಿವ್ಯಕ್ತಿಗಾಗಿ ಅನೇಕ ಏರ್ಪಾಡು, ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾಯಿತು. ವಿಷ್ಣು ಧರಮೋತ್ತರ ಪುರಾಣದಲ್ಲಿ ವಿವರಿಸಿದ "ಚಿತ್ರಸೂತ್ರ" ಕಲಾ ಆಯಾಮಗಳು ತೀರ ನೀರಸವಾಗಿದ್ದು ಅವುಗಳು ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಲಾರದ ಪ್ರಸಂಗವನ್ನು ಅವರು ತಿರಸ್ಕರಿಸಿ, ನಮ್ಮ ಪುರಾಣಪುರುಷರುಗಳು, ದೇವಿಯರು ಸಾಮಾನ್ಯಮಾನವರಂತೆ ಇರುವ ಚಿತ್ರಗಳನ್ನು ಅವರು ಪ್ರಸಿದ್ದಿಪಡಿಸಿದರು. ಇದು ಆ ಕಾಲದಲ್ಲಿ ರವಿಯವರು ಆಗಲೇ ಪ್ರಸ್ತುತದಲ್ಲಿದ್ದ ಕಲಾ ಪದ್ಧತಿಗೆ ವಿರೋಧವಾಗಿ ಸ್ಪಂದಿಸಿದ ರೀತಿಯಾಗಿತ್ತು. ಕೊನೆಗೆ ಅದೇ ಸರ್ವರ ಮನಗೆದ್ದಿತು. ಊರ್ವಶಿ, ರಂಭೆ, ತಿಲೋತ್ತಮೆ, ಉಷೆ, ಎಂಬನಾಯಿಕೆಯರ ಚಿತ್ರಗಳನ್ನು ರಚಿಸಿದ್ದು ತಮ್ಮ ಪುರಾಣಗಳ ಅಧ್ಯಯನದ ಜ್ಞಾನದಿಂದ. ಮರಾಠಾ, ಗುಜರಾತೀ, ಮಲಬಾರೀ , ರಾಜ್ ಪೂತ್ ವನಿತೆಯರ ಸುಂದರ ಚಿತ್ರಗಳು ಅವರ ಕಲಾಸಂಗ್ರಹದಲ್ಲಿ ಸೇರಿಕೊಂಡವು. ಆಗಿನ ಪ್ರಮುಖ ವ್ಯಕ್ತಿಗಳಾದ ತಿಲಕ್, ರಾನಡೆಯವರ ಚಿತ್ರಗಳನ್ನೂ, ಹಿಮಾಲಯ ಪರ್ವತಶ್ರೇಣಿಯ ಭವ್ಯತೆಯನ್ನೂ, ಮತ್ತು ದೇಶದ ಎಲ್ಲಾ ಗಿರಿಧಾಮಗಳ, ಪ್ರದೇಶಗಳ ಪ್ರಕೃತಿಸಿರಿಯನ್ನೂ ತಮ್ಮ ಕುಂಚದಲ್ಲಿ ಸೆರೆಹಿಡಿದರು. 1904 ರಲ್ಲಿ, ರವಿವರ್ಮರಿಗೆ, ಬ್ರಿಟಿಶ್ ಸರ್ಕಾರ, " ಕೈಸರ್-ಎ ಹಿಂದ್ " ಎಂಬ ಪ್ರಶಸ್ತಿ ಕೊಡಲಾಯಿತು. ಪುದುಕೋಟೈ, ಆಳ್ವಾರ್, ಮೈಸೂರ್,ಬರೋಡ, ಇಂದೋರ್, ಗ್ವಾಲಿಯರ್, ಜೈಪುರ, ಉದಯಪುರಗಳ ರಾಜರ ಆಹ್ವಾನ ಬಂದಿತ್ತು. ಒಬ್ಬ ಆಂಗ್ಲಸಂಸ್ಕೃತ ವಿದ್ವಾಂಸರು, ಪ್ರಕಟಿಸಿದ ಶಾಕುಂತಲ ಮಹಾಕಾವ್ಯದ ಮುಖಪುಟಕ್ಕೆ ತಕ್ಕದಾದ ಚಿತ್ರವನ್ನು ಬರೆದುಕೊಟ್ಟರು. ಈ ಪುಸ್ತಕ ಹೆಸರುವಾಸಿಯಾಗಿದ್ದು, ಕಾವ್ಯ ಸೌಂದರ್ಯಕ್ಕೆ. ಆದರೆ ಹೆಚ್ಚು ಜನಪ್ರಿಯವಾದದ್ದು ಪುಸ್ತಕದ ಹೊರಕವಚದಲ್ಲಿ ಮೂಡಿಸಿದ್ದ ಶಕುಂತಳೆಯ ಮುಗ್ಧ ಸೌಂದರ್ಯಕ್ಕೆ. ಹೀಗೆ ಪುಸ್ತಕದ ಜೊತೆಗೆ, ರವಿವರ್ಮರೂ ವಿಶ್ವದಾದ್ಯಂತ ಹೆಸರುವಾಸಿಯಾದ ವ್ಯಕ್ತಿಯಾದರು. 1876 ರಲ್ಲಿ ಪ್ಯಾರಿಸ್ಸಿನಲ್ಲಿ ಪ್ರದರ್ಶನಗೊಂಡ, "ವಸ್ತುಕಲಾ ಪ್ರದರ್ಶನ," ದಲ್ಲಿ ' " ಮಲೆಯಾಳದ ವನಿತೆ " ಎಂಬ ತೈಲಚಿತ್ರಕ್ಕೆ, ರವಿವರ್ಮರಿಗೆ "ಗೋಲ್ಡ್ ಮೆಡಲ್," ಪ್ರಶಸ್ತಿ ದೊರೆಯಿತು. ಅದೇ ವರ್ಷ ವಿಯನ್ನ ದಲ್ಲಿ ಏರ್ಪಡಿಸಿದ ಪ್ರದರ್ಶನದಲ್ಲೂ, " ಮಲಯಾಳದ ವನಿತೆ", ಗೆ ಬಹುಮಾನ ದೊರೆಯಿತು. ಈ ಪ್ರದರ್ಶನಗಳಿಂದ ರವಿವರ್ಮರಿಗೆ ವಿಶ್ವಮಾನ್ಯತೆ ದೊರೆಯಿತು. ಸೀರೆ ಉಡುಪನ್ನು ಅವರ ಭವ್ಯಕಲಾಕೃತಿಗಳಲ್ಲಿ ಹೆಚ್ಚಾಗಿ ಬಳಸಿಕೊಂಡಿದ್ದಾರೆ. ಆಗಿನಕಾಲದಲ್ಲಿ ಕೇರಳ ಮುಂತಾದ ರಾಜ್ಯಗಳಲ್ಲಿ ಸೀರೆ ಉಡುವ ಪರಂಪರೆ ಇರಲಿಲ್ಲ. ಹಾಗಾಗಿ, ಸೀರೆಉಡುಪನ್ನು ದೇಶದಾದ್ಯಂತ ಪ್ರಸಿದ್ಧಿಪಡಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಬಕಿಂಗ್ ಹ್ಯಾಮ್ ಡ್ಯೂಕರ, ಎತ್ತರದ ನಿಲುವಿನ ತೈಲಚಿತ್ರವನ್ನು ಬರೆದುಕೊಟ್ಟಿದ್ದರು. ಅದನ್ನು ಮದ್ರಾಸ್ ಸರ್ಕಾರ, ತಮ್ಮ ಆಫೀಸಿನ ಮುಖ್ಯದ್ವಾರದಮುಂದೆ ಪ್ರದರ್ಶಿಸಿದ್ದರು. 1877 ರಲ್ಲಿ, ಮದ್ರಾಸ್ ಲಲಿತಕಲಾ ಅಕ್ಯಾಡಮಿಯವರು ಪ್ರಸ್ತುತಪಡಿಸಿದ, ವಸ್ತು ಪ್ರದರ್ಶನದಲ್ಲಿ, ರವಿವರ್ಮರ, " ವೀಣೆನುಡಿಸುವ ತಮಿಳು ಮಹಿಳೆ" ಎಂಬ ತೈಲಚಿತ್ರದ ಪ್ರದರ್ಶನವಾಗಿತ್ತು. ದುಶ್ಯಂತನಿಗೆ ಶಕುಂತಳೆ ಬರೆಯುತ್ತಿರುವ ಪ್ರೇಮ-ಪತ್ರ,ದ ತೈಲಚಿತ್ರಕ್ಕೆ ಬಹುಮಾನ ದೊರೆಯಿತು. ಒಮ್ಮೆ ಆಗಿನ ಬ್ರಿಟಿಷ್ ಗವರ್ನರ್, ತಿರುವನಂತಪುರದ ಅರಮನೆಗೆ ಬಂದವರು, ನೇರವಾಗಿ ಶಕುಂತಲ, ತೈಲಚಿತ್ರವನ್ನು ನೋಡಲು ಹೋದರು. ಅಲ್ಲೇ ನಿಂತಿದ್ದರೂ ಗವರ್ನರ್ ಸಾಹೇಬರು ಆಯಿಲ್ಯಂರವರನ್ನು ವಿಚಾರಿಸದೇ ಹೋದ ಘಟನೆಯಿಂದ ರಾಜರು ತತ್ತರಿಸಿದರು. ಆಯಿಲ್ಯಂ ತಿರುನಾಳ್ ರವರಿಗೆ ಅವಮಾನವಾಗಿ, ಮುಖಭಂಗವಾಯಿತು. ಕೂಡಲೇ ರವಿವರ್ಮರನ್ನು ಅರಮನೆಯಿಂದ ವಜಾ ಮಾಡಿದರು. 1880 ರಲ್ಲಿ ಆಯಿಲ್ಯಂ ತಿರುನಾಳ್ ತೀರಿಕೊಂಡಮೇಲೆ ಹೊಸರಾಜ, ವಿಶಾಖಂ ತಿರು ಆಯಿಲ್ಯರು, ರವಿವರ್ಮರನ್ನು ಪುನಃ ಬರಮಾಡಿಕೊಂಡು ಸನ್ಮಾನಿಸಿದರು. ಬರೋಡ ಮಹಾರಾಜರ ಬಳಿಸಂಪಾದಿಸಿ:-  1881 ರಲ್ಲಿ, ದಮಯಂತಿ, ಸೈರಂಧ್ರಿ, ಸರಸ್ವತಿ, ಲಕ್ಷ್ಮಿ, ಮೊಘಲ್ ಶೈಲಿ ಮತ್ತು ರಾಜಸ್ಥಾನಿ ಶೈಲಿಗಳನ್ನು ಸ್ವಲ್ಪದಿನ ಅಭ್ಯಾಸಮಾಡಿದರು. 3 ವರ್ಷಗಳ ಕಾಲ ಬರೋಡದಲ್ಲೆ ಇದ್ದರು. ಆ ಸಮಯದಲ್ಲಿ ಸೀತಾ-ಪರಿತ್ಯಾಗದ ತೈಲಚಿತ್ರವನ್ನು ರಚಿಸಿ ಅರಸರಿಗೆ ಕೊಟ್ಟಿದ್ದರು. ಮಹಾರಾಜರಿಗೆ ಅತಿಯಾದ ಆನಂದವಾಯಿತು.ಬರೋಡದ ನರೇಶರು ರವಿವರ್ಮರಿಗೆ, ಗೌರವಾರ್ಥವಾಗಿ, 50,000 ರೂಪಾಯಿಗಳನ್ನೂ, ಆನೆ, ಧನ-ಕನಕಗಳನ್ನು ಉಡುಗೊರೆಯಾಗಿ ಕೊಟ್ಟರು. ಸ್ವಲ್ಪ ದಿನ ತಮ್ಮ ತಾಯ್ನಾಡಿಗೆ ಹೋಗಿ ತಮ್ಮಕಲಾಭ್ಯಾಸದ ಮನೆಗುರುಗಳಾದ, ಅವರ ಮಾವನವರ ಪಾದಗಳಮೇಲೆ 5,000 ರೂಪಾಯಿಗಳನ್ನು ಸಮರ್ಪಿಸಿ, ನಮಸ್ಕರಿಸಿ, ತಮ್ಮ ಭಕ್ತಿಭಾವವನ್ನು ಪ್ರದರ್ಶಿಸಿದರು. 1887 ರಲ್ಲಿ ಅವರು ಒಂದು ವರ್ಷ ಊರುಬಿಟ್ಟು ಹೋಗಲಿಲ್ಲ. 1891 ರಲ್ಲಿ, ತಾವು ರಚಿಸಿದ್ದ 41 ಪೇಂಟಿಂಗ್ ತೆಗೆದುಕೊಂಡು ರೈಲಿನಲ್ಲಿ ಬರೋಡಾಕ್ಕೆ ಹೋಗುತ್ತಿರುವಾಗ, [ ಉದ್ದ-5 ಅಡಿ, 3 ಅಂಗುಲ, ಅಗಲ-3 ಅಡಿ 8 ಅಂಗುಲ ಗಾತ್ರದ ದೊಡ್ಡ ತೈಲಚಿತ್ರಗಳು.] ಮಧ್ಯೆ, ಬೊಂಬಾಯಿನಲ್ಲಿ ಉಳಿದುಕೊಂಡರು. ಊರಿನಿಂದ ಬಂದ ತಂತಿವಾರ್ತೆಯಿಂದ ವಿಚಲಿತಗೊಂಡರು. ಊರಿನಲ್ಲಿ ಅವರ ಪ್ರೀತಿಯ ಪತ್ನಿ ತೀರಿಕೊಂಡಿದ್ದರು. ಈ ವಾರ್ತೆ ಸಿಡಿಲಿನಂತೆ ಎರಗಿತು. ಕೂಡಲೇ ವಾಪಸ್ಸು ಹೋಗಿ 1 ತಿಂಗಳು ಊರಿನಲ್ಲೇ ಇದ್ದು ಮತ್ತೆ ಬರೋಡಾ ಹೋದರು. ಮೈಸೂರು ಮಹಾರಾಜರ ಬಳಿಸಂಪಾದಿಸಿ :- ಕೃಷ್ಣರಾಜವೊಡೆಯರ ಕಾಲದಲ್ಲಿ ಜಗನ್ಮೋಹನ ಅರಮನೆ ನಿರ್ಮಿಸಲಾಯಿತು. ಆಗ ಮಹಾರಾಜರು ರವಿವರ್ಮರನ್ನು ಕರೆಸಿ, ಅವರ ತೈಲಚಿತ್ರಗಳಿಂದ ಅರಮನೆ ಅಲಂಕೃತವಾಗಬೇಕೆಂದು ಮನವಿ ಮಾಡಿಕೊಂಡರು. ಅವರ ಇಷ್ಟದಂತೆ ರವಿವರ್ಮರು 9 ಭವ್ಯ ಚಿತ್ರಗಳನ್ನು ರಚಿಸಿದರು. ಜೊತೆಗೆ, ರಾಜಪರಿವಾರದ ಜನರ, ಮತ್ತು ಅರಮನೆಯ ಪರಿಸರದ ಚಿತ್ರಗಳನ್ನೂ ಅತ್ಯಂತ ಸೊಗಸಾಗಿ ಬಿಡಿಸಿಕೊಟ್ಟರು. ಪಾಂಡವರ ದ್ಯೂತ, ಕೌರವನ ಆಸ್ತಾನದಲ್ಲಿ ಪ್ರವೇಶಿಸಿದ ಶ್ರೀ ಕೃಷ್ಣ, ಬಂಧನಕ್ಕಾಗಿ ಸಾಗರದ ಮುಂದೆ, ಬಿಲ್ಲುಹೂಡಿದ ಶ್ರೀ ರಾಮಚಂದ್ರ. ಇವು ರವಿವರ್ಮರು ರಚಿಸಿದ ಕೆಲವಾರು ಶ್ರೇಷ್ಟಚಿತ್ರಗಳೆಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಇಲ್ಲಿ ದಾಖಲಿಸಬಹುದಾದ ಮತ್ತೊಂದು ಭವ್ಯ ತೈಲಚಿತ್ರವನ್ನು ಬರೆದು ರವಿವರ್ಮರು ಅತ್ಯಂತ ಯಶಸ್ಸನ್ನು ಗಳಿಸಿದರು. 3 ಜನ ನಂಬಿಕೆಯ ಅನುಚರರೊಡನೆ, ಆಶ್ವಾಸನೆ ಕೊಡಲು ಕೈಯಲ್ಲಿ ಭವಾನಿತಾಯಿ ಪ್ರಸಾದಿಸಿದ ಖಡ್ಗವನ್ನು ಝಳಪಿಸುತ್ತಾ ಶಿವನೇರಿದುರ್ಗದಬಳಿ, ಅರಿಭಯಂಕರನಾಗಿ ಕುದುರೆಯನ್ನೇರಿ ಬರುತ್ತಿರುವ ವೀರಶಿವಾಜಿಯವರ ಚಿತ್ರ, ಬಹುಶಃ ಬಹುತೇಕ ಮಹಾರಾಷ್ಟ್ರದವರ ಮನೆಗಳಲ್ಲಿ ಈ ವರ್ಣಚಿತ್ರವನ್ನು ಕಟ್ಟು ಹಾಕಿಸಿ ಇಟ್ಟುಕೊಂಡಿದ್ದಾರೆ. ರವಿವರ್ಮರು ಚಿತ್ರಿಸಿದ ವರ್ಣಚಿತ್ರಗಳು ಒಟ್ಟು 89. ಅವೆಲ್ಲಾ ಅಚ್ಚಾಗಿ ಮದ್ಯಮವರ್ಗದ ಕಲಾಪ್ರೇಮಿಗಳಿಗೆ, ಸಾಂತ್ವನ ನೀಡುವಲ್ಲಿ ಸಹಕಾರಿಯಾದವು. ಆಸ್ಥಾನದಲ್ಲಿಸಂಪಾದಿಸಿ. ಆಸ್ತಾನ ಕಲಾವಿದರಾಗಿ ನೇಮಿತರಾಗಿದ್ದರು. ವಿರಾಟನ ಆಸ್ಥಾನ, ಶಕುಂತಳೆ, ಹಂಸ ದಮಯಂತಿ, ರುಕ್ಮಾಂಗದ ಮತ್ತು ಮೋಹಿನಿ. ಪ್ರತಿ ವರ್ಣಚಿತ್ರಗಳಿಗೂ ತಲಾ 3,000 ರೂ ಪ್ರಶಸ್ತಿ ಕೊಡಲಾಯಿತು. "ಚಿತ್ರ ಆರ್ಟ್ ಗ್ಯಾಲರಿ ಎಂಬ ಸಂಸ್ತೆಯನ್ನು ಸ್ಥಾಪಿಸಲಾಯಿತು. ಅಲ್ಲಿ ರವಿವರ್ಮರ 14 ಭಾರಿ ಎತ್ತರದ ತೈಲಚಿತ್ರಗಳನ್ನು ಸ್ಥಾಪಿಸಲಾಗಿದೆ. 10 ಸಣ್ಣಗಾತ್ರದ ಪೇಂಟಿಂಗ್ ಗಳಿವೆ. 2 ಅಪೂರ್ಣ ಚಿತ್ರಗಳೂ ಇವೆ. ಬಹುಶಃ ರವಿವರ್ಮರ ಕೊನೆಯದಿನಗಳಲ್ಲಿ ಅವರ ಮಾನಸಿಕಬಲ ಸ್ವಲ್ಪ ಕಡಿಮೆಯಾಗಿತ್ತು. ಹೆಚ್ಚು ಹೊತ್ತು ಕುಳಿತು ಕೆಲಸಮಾಡುವುದು ಸಾಧ್ಯವಿರಲಿಲ್ಲ. ಅವರ ಸೋದರ, ರಾಜರಾಜ ವರ್ಮರು ತೀರಿಕೊಂಡಮೇಲೆ ಅವರಿಗೆ ಎಲ್ಲದರಲ್ಲೂ ಆಸಕ್ತಿ ಕಡಿಮೆಯಾಗಿತ್ತು. ಆರೋಗ್ಯವೂ ಸರಿಯಾಗಿರದೆ ಖಂಡಾಲಲೋನಾವಲಗಳಲ್ಲಿ ಸ್ವಲ್ಪದಿನ ಇದ್ದು ಸುಧಾರಿಸಿಕೊಡರು. ಇದೇ ಸಮಯದಲ್ಲಿ ಹೈದರಾಬಾದಿನ ರಾಜಾ ದೀನ ದಯಳರ ಒತ್ತಾಯಾಕ್ಕೆ ಮಣಿದು ಅಲ್ಲಿಗೆ ಹೋಗಿ, 3 ತಿಂಗಳಿದ್ದು ವರ್ಣಚಿತ್ರಗಳನ್ನು ರಚಿಸಿಕೊಟ್ಟುಬಂದರು. 1906 ರಲ್ಲಿ ತಮ್ಮ 57 ನೆಯ ಹುಟ್ಟಿದ ಹಬ್ಬವನ್ನು ಆಚರಿಸಿಕೊಂಡರು. ಚಿತ್ರಕಲಾಮುದ್ರಣಾಲಯ ಸಂಪಾದಿಸಿ:- ಸಾಮಾನ್ಯ ಜನರಿಗೆ ತೈಲಚಿತ್ರಗಳನ್ನು ಕೊಳ್ಳುವುದು ಸಾಧ್ಯವಿಲ್ಲದಮಾತು. ಅದಕ್ಕಾಗಿ ರವಿವರ್ಮರು, ಒಬ್ಬ ಪಾಲುದಾರನ ಜೊತೆಗೆ, ಒಪ್ಪಂದ ಮಾಡಿಕೊಂಡು ಒಂದು ಮುದ್ರಣಾಲಯವನ್ನು ಬೊಂಬಾಯಿನಲ್ಲಿ ಸ್ಥಾಪಿಸಿದರು. ಅದನ್ನು ನೋಡಿಕೊಳ್ಳಲು ಸದಾ ಅವರು ಅಲ್ಲಿ ಇರಲು ಸಾಧ್ಯವಾಗುತ್ತಿರಲಿಲ್ಲ. ಪಾಲುದಾರ, ಹಣವನ್ನೆಲ್ಲಾ ಲಪಟಾಯಿಸಿದ್ದ. 1894 ರಲ್ಲಿ ಆರ್ಥಿಕ ಮುಗ್ಗಟ್ಟು ಹೆಚ್ಚಿದ್ದರಿಂದ ತಮ್ಮ ಮುದ್ರಣಾಲಯವನ್ನು ಮಾರುವ ಪರಿಸ್ಥಿತಿ ಬಂತು. ಅವರು ಮೊದಲು ಕಾರ್ಲಿ ಎಂಬ ಜಾಗಕ್ಕೆ ಸ್ಥಳಾಂತರಿಸಿದರು. ಅಲ್ಲೂ ವ್ಯಾಪಾರ ಕುದುರದೆ, ಒಬ್ಬ ವಿದೇಶಿಗೆ 25 ಸಾವಿರ ರೂಪಾಯಿಗಳಿಗೆ ಮಾರಿದರು. ನಳ-ದಮಯಂತಿ, ಶಂತನು ಮತ್ತು ಮತ್ಸ್ಯಗಂಧಿ, ರಾಧಾ-ಮಾಧವ, ಶ್ರೀಕೃಷ್ಣ-ದೇವಕಿ, ಅರ್ಜುನ-ಸುಭದ್ರೆ, ದ್ರೌಪದಿ ವಸ್ತ್ರಾಪಹರಣ, ವಿಶ್ವಾಮಿತ್ರ-ಮೇನಕೆ, ಹರಿಶ್ಚಂದ್ರ-ತಾರಾಮತಿ, ಸೀತಾ-ಸ್ವಯಂವರ, ಭರತ, ಸಿಂಹದ ಮರಿಯಜೊತೆ, ಶ್ರೀಕೃಷ್ಣನ ಜನನ, ಕೀಚಕ ಸೈರಂಧ್ರಿ, ಕಂಸಮಾಯೆ, ಶಂತನು ಮತ್ತು ಗಂಗೆ, ಮುಂತಾದ ಒಟ್ಟು 14 ತೈಲಚಿತ್ರಗಳು. ಅಮೆರಿಕದ ಚಿಕಾಗೋ ನಲ್ಲಿ ನಡೆದ ' ವಸ್ತುಕಲಾ ಪ್ರದರ್ಶನ' ಕ್ಕೆ 10 ವರ್ಣಚಿತ್ರಗಳನ್ನು ಭಾರತದಿಂದ ಕಳಿಸಲಾಗಿತ್ತು. ಅದು ರವಿವರ್ಮರದೇ ಎಂದು ಹೇಳಬೇಕಾಗಿಲ್ಲ. ಬರೋಡಾ ಮಹಾರಾಜರು ಕಳಿಸುವ ಏರ್ಪಾಡುಮಾಡಿದ್ದರು. 2 ಪ್ರಶಸ್ತಿಗಳನ್ನು ರವಿವರ್ಮರು ಗಿಟ್ಟಿಸಿದ್ದರು. ಸ್ವಾಮಿ ವಿವೇಕಾನಂದರು ಆಗ ಅಮೆರಿಕೆಯಲ್ಲಿದ್ದರು. ರವಿವರ್ಮರ ತೈಲ ವರ್ಣಚಿತ್ರಗಳನ್ನು ನೋಡಿ ವಿಸ್ಮಯರಾದ ಅವರು, ಇದನ್ನು ಬರೆದ ಮಹಾಕಲಾಕಾರನನ್ನು ಭೇಟಿಮಾಡುವ ಉತ್ಸುಕತೆ ತೋರಿಸಿದ್ದರು. ಒಮ್ಮೆ ಬೊಂಬಾಯಿಗೆ ಬಂದಾಗ, ರವಿವರ್ಮರ ಮನೆಯಲ್ಲೇ ಒಂದು ದಿನ ಉಳಿದುಕೊಂಡಿದ್ದರಂತೆ. ರಾಜಾ ರವಿವರ್ಮರು ತಮ್ಮ 58 ನೆಯ ಸಣ್ಣ ಪ್ರಾಯದಲ್ಲೇ 2 ಅಕ್ಟೋಬರ್, 1906 ರಲ್ಲಿ ನಿಧನರಾದರು. ಭಾರತ ಸರ್ಕಾರ ಅವರ ಗೌರವಾರ್ಥವಾಗಿ ಅಂಚೆಚೀಟಿಯನ್ನು ಹೊರಡಿಸಿದ್ದರು
***********************************************
👉 ಕೆ.ಕೆ.ಹೆಬ್ಬಾರ
👉ವಿನ್ಸೆಂಟ್ ವಾನ್ ಗೋ
👉ಮೈಕೆಲ್ಯಾಂಜೆಲೊ
👉ಪಾಬ್ಲೊ ಪಿಕಾಸೋ
👉ರೆಂಬ್ರಾಂಟ್
👉ಅಮೃತಾ ಶೇರ್ಗಿಲ್
👉ರವೀಂದ್ರನಾಥ ಠಾಗೋರ್
👉ಎಂ.ಎಫ್. ಹುಸೇನ್