ಕನ್ನಡ ಕಾನ್ವೆಂಟ ಪ್ರೌಢ ಶಾಲೆ ಕಲಬುರಗಿ


ಅರುಣಕುಮಾರ ತಂದೆ ಶ್ರೀಕಾಂತ್ 
ಮಹಾಂತೇಶ ತಂದೆ ಮಹಾದೇವಪ್ಪ
ಅರುಣಕುಮಾರ ತಂದೆ ಶಾಮರಾಯ 
P. N. Gadgil & Sons jewellery shop kalaburagi ವತಿಯಿಂದ ಇಂದು ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿ ಪಡೆದಿರುತ್ತಾರೆ.
ಅದರಲ್ಲಿ ‌ಕನ್ನಡ ಕಾನ್ವೆಂಟ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ 7 ಮತ್ತು 8 ನೇ ತರಗತಿ ವಿಭಾಗದಲ್ಲಿ ಅರುಣಕುಮಾರ ತಂದೆ ಶ್ರೀಕಾಂತ್ 8ನೇ ತರಗತಿ ತೃತೀಯ ಬಹುಮಾನ ಪ್ರಶಸ್ತಿ ಪತ್ರ ಮತ್ತು 25 ಗ್ರಾಂ ಬೆಳ್ಳಿಯ ಪದಕ ಪಡೆದಿರುತ್ತಾರೆ.
ಅದೇ ರೀತಿ 9 & 10ನೇ ತರಗತಿ ವಿಭಾಗದಲ್ಲಿ ಅರುಣಕುಮಾರ ತಂದೆ ಶಾಮರಾಯ 10ನೇ ತರಗತಿ ಪ್ರಥಮ ಬಹುಮಾನ ಪ್ರಶಸ್ತಿ ಪತ್ರ ಮತ್ತು 50 ಗ್ರಾಂ ಬೆಳ್ಳಿ ಪದಕ, ಮತ್ತು ಮಹಾಂತೇಶ ತಂದೆ ಮಹಾದೇವಪ್ಪ 9ನೇ ತರಗತಿ ದ್ವಿತೀಯ ಬಹುಮಾನ ಪ್ರಶಸ್ತಿ ಪತ್ರ ಮತ್ತು 35 ಗ್ರಾಂ ಬೆಳ್ಳಿ ಪದಕ ಪಡೆದು ಶಾಲೆಗೂ ಮತ್ತು ಸಂಸ್ಥೆಗೂ ಕೀರ್ತಿ ತಂದಿದ್ದಾರೆ, ವಿದ್ಯಾರ್ಥಿಗಳಿಗೆ ಅಭಿನಂದನೆಗಳು💐


ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ  ಚಿತ್ರಕಲೆ ಸ್ಪರ್ಧೆಯಲ್ಲಿ*  ಕನ್ನಡ ಕಾನ್ವೆಂಟ ಪ್ರೌಢ ಶಾಲೆ ವಿದ್ಯಾರ್ಥಿಯಾದ ಅರುಣಕುಮಾರ ಶಾಮರಾಯ 10ನೇ ತರಗತಿ *ಪ್ರಥಮ ಬಹುಮಾನ ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಗೆ* ಆಯ್ಕೆಯಾಗಿದ್ದಾನೆ ಈ ವಿದ್ಯಾರ್ಥಿಗೆ ಅಭಿನಂದನೆಗಳು💐

ಸಹನಾ  ಸುರೇಶ್ , ವರುಣ್, ಅನುಷ್ಕಾ


ಸಾಯಿ ರಾಜು 
👆 ಸೆಂಟ್ರಲ್ ಪವರ್ ರಿಸರ್ಚ್ ಇನ್‌ಸ್ಟಿಟ್ಯೂಟ್ (CPRI) ನ್ಯೂ ದೆಹಲಿ ರವರು ಏರ್ಪಡಿಸಿ *ರಾಷ್ಟ್ರ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಕಾಸ ಇಂಗ್ಲಿಷ್ ಮೀಡಿಯಂ ಶಾಲೆ* ವಿದ್ಯಾರ್ಥಿಗಳಾದ 1) ವರುಣ್ 7ನೇ ತರಗತಿ,  2)  ಸಹನಾ  ಸುರೇಶ್ 7ನೇ ತರಗತಿ  3)  ಸಾಯಿ ರಾಜು  9ನೇ ತರಗತಿ ಹಾಗೂ *ಕನ್ನಡ ಕಾನ್ವೆಂಟ ಪ್ರಾಥಮಿಕ ಶಾಲೆ* ವಿದ್ಯಾರ್ಥಿ ಅನುಷ್ಕಾ 6ನೇ ತರಗತಿ ಈ ವಿದ್ಯಾರ್ಥಿಗಳು *ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.* ದಿನಾಂಕ 27  ನವೆಂಬರ್ 2023 ರಂದು (ಸೋಮವಾರ) ಸಿಸಿಎಆರ್, ಸೆಂಟ್ರಲ್ ಪವರ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಸಿಪಿಆರ್‌ಐ), ಸರ್ ಸಿವಿ ರಾಮನ್ ರಸ್ತೆ, *ಬೆಂಗಳೂರು ನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ-2023 ರಲ್ಲಿ ಭಾಗವಹಿಸಿತ್ತಿದ್ದಾರೆ. 



ಚೇತನ ಯುಥ್ ಪೋರಂ ಶಾಲೆ ವತಿಯಿಂದ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಕನ್ನಡ ಕಾನ್ವೆಂಟ ಪ್ರೌಢ ಶಾಲೆಯ ವಿದ್ಯಾರ್ಥಿನಿಯಾದ ಗೋದಾವರಿ 10ನೇ ತರಗತಿ ತೃತೀಯ ಬಹುಮಾನ ಪಡೆದಿರುತ್ತಾಳೆ ಈ ವಿದ್ಯಾರ್ಥಿನಿಗೆ ಅಭಿನಂದನೆಗಳು

ಕಲ್ಯಾಣ ಕರ್ನಾಟಕ ದಿನಾಚರಣೆ ವರ್ಷವನ್ನು 'ಅಮೃತ ಮಹೋತ್ಸವ' ಅಂಗವಾಗಿ ಏರ್ಪಡಿಸಿದ, ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಕನ್ನಡ ಕಾನ್ವೆಂಟ ಪ್ರೌಢ ಶಾಲೆಯ ವಿದ್ಯಾರ್ಥಿ ಅರುಣಕುಮಾರ ತಂದೆ ಶಾಮರಾಯ 10 ನೇ ತರಗತಿ ಪ್ರಥಮ ಸ್ಥಾನ  ಪಡೆದು  ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.  ಈ ವಿದ್ಯಾರ್ಥಿಗೆ ಅಭಿನಂದನೆಗಳು💐

ಕಲ್ಯಾಣ ಕರ್ನಾಟಕ ದಿನಾಚರಣೆ ವರ್ಷವನ್ನು 'ಅಮೃತ ಮಹೋತ್ಸವ' ಅಂಗವಾಗಿ ಏರ್ಪಡಿಸಿದ, ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಕನ್ನಡ ಕಾನ್ವೆಂಟ ಪ್ರೌಢ ಶಾಲೆಯ ವಿದ್ಯಾರ್ಥಿ ಅರುಣಕುಮಾರ ತಂದೆ ಶಾಮರಾಯ 10 ನೇ ತರಗತಿ ಪ್ರಥಮ ಸ್ಥಾನ  ಮತ್ತು ವಿಕಾಸ ಆಂಗ್ಲ ‌ಮಾಧ್ಯಮ ಪ್ರೌಢ ಶಾಲೆಯ ಶ್ರಾವಣಿ ತಂದೆ ಕೇದಾರನಾಥ 9 ನೇ ತರಗತಿ ವಿದ್ಯಾರ್ಥಿನಿ ದ್ವಿತೀಯ ಸ್ಥಾನ ಪಡೆದು ನಾಳೆ ದಿನಾಂಕ 12-09-2023 ರಂದು ನಡೆಯುವ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.  ಈ ವಿದ್ಯಾರ್ಥಿಗಳಿಗೆ ಅಭಿನಂದನೆಗಳು💐
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಚೇರಿ, ಕಲಬುರಗಿ. ಶಾಲಾ ಶಿಕ್ಷಣ ಇಲಾಖೆ, ಕಲಬುರಗಿ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಇವರುಗಳ ಸಂಯುಕ್ತ ಆಶ್ರಯದಲ್ಲಿ ಪರಿಸರ ಸ್ನೇಹಿ ಗಣೇಶೋತ್ಸವ ಅಂಗವಾಗಿ ಏರ್ಪಡಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಕಾಸ ಇಂಗ್ಲಿಷ್ ಮೀಡಿಯಂ ಸ್ಕೂಲ್ ವಿದ್ಯಾರ್ಥಿನಿ ಸಿಂಚನಾ ವಿ ಬಿ 10ನೇ ತರಗತಿ ಪ್ರಥಮ ಬಹುಮಾನ. ಮತ್ತು ಕನ್ನಡ ಕಾನ್ವೆಂಟ ಪ್ರೌಢ ಶಾಲೆಯ ವಿದ್ಯಾರ್ಥಿನಿ ಸ್ಪೂರ್ತಿ ಮಹಾಂತೇಶ 8ನೇ ತರಗತಿ ತೃತೀಯ ಬಹುಮಾನ ಪಡೆದಿರುತ್ತಾರೆ. ಹಾಗೂ ಕ್ಲೇ ಮಾಡಲಿಂಗ್ ಸ್ಪರ್ಧೆಯಲ್ಲಿ ಕನ್ನಡ ಕಾನ್ವೆಂಟ ಪ್ರೌಢ ಶಾಲೆಯ ವಿದ್ಯಾರ್ಥಿನಿ ರಕ್ಷಿತಾ ತೃತೀಯ ಬಹುಮಾನ ಪಡೆದಿರುತ್ತಾರೆ.
ಈ ವಿದ್ಯಾರ್ಥಿಗಳಿಗೆ ಅಭಿನಂದನೆಗಳು💐


ಕನ್ನಡ ಕಾನ್ವೆಂಟ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕರಾದ  "ಸೋಮನಾಥ ಎಂ ಮಹೇಂದ್ರ" ಸರ್ ರವರಿಗೆ "ಕಲಾಸಾರಂಗ ಸಾಂಸ್ಕೃತಿಕ ಹಾಗೂ ಶಿಕ್ಷಣ ಸೇವಾ ಸಂಸ್ಥೆ" ಸಂಯುಕ್ತಾಶ್ರಯದಲ್ಲಿ ವಿಶ್ವ ಸ್ನೇಹಿತರ ದಿನಾಚರಣೆಯ ಅಂಗವಾಗಿ 2023-24 ಸಾಲಿನ "ಭಾರತೀಯ ಸಮಾಜದ ಸ್ನೇಹಜೀವಿ ಪ್ರಶಸ್ತಿ"ಯನ್ನು  ನೀಡಿ ಗೌರವಿಸಲಾಯಿತು


ವೀರಶೈವ ಮಹಾಸಭಾ ಕಲಬುರಗಿರವರು
ಈ ವರ್ಷದ ಬಸವ ಜಯಂತಿ ಅಂಗವಾಗಿ ಏರ್ಪಡಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಕಾಸ ಆಂಗ್ಲ ಮಾದ್ಯಮ ವಿದ್ಯಾರ್ಥಿಗಳಾದ ಸ್ವಾತಿ ಎಸ್ ಪಾಟೀಲ ಪ್ರಥಮ, ಸಿಂಚನಾ ವಿಜಯಕುಮಾರ ತೃತೀಯ, ಶ್ರಾವಣಿ  ಕೇದಾರನಾಥ ಕನ್ನಡ ಕಾನ್ವೆಂಟ ಪ್ರೌಢ ಶಾಲೆಯ ಸಂಜನಾ  ಸಮಾಧಾನಕರ ಬಹುಮಾನವನ್ನು ಪಡೆದಿರುತ್ತಾರೆ ಈ ವಿದ್ಯಾರ್ಥಿಗಳಿಗೆ  ಅಭಿನಂದನೆಗಳು💐

ಚೈತ್ರಾ ತಂದೆ ಶರಣಪ್ಪ  9 ನೇ ತರಗತಿ  ಪ್ರಥಮ ಬಹುಮಾನ

ಅರಣಕುಮಾರ ತಂದೆ ಶಾಮರಾಯ 9 ನೇ ತರಗತಿ
 ತೃತೀಯ ಬಹುಮಾನ
ಕಲ್ಯಾಣ ಕರ್ನಾಟಕ ಉತ್ಸವದ ನಿಮಿತ್ಯ ದಿನಾಂಕ 25-02-2023 ನಡೆದ ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಯ ವಿದ್ಯಾರ್ಥಿಗಳಿಗೆ  ಮಕ್ಕಳ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು ಅದರಲ್ಲಿ *9 ರಿಂದ 12 ನೇ ತರಗತಿ ವಿಭಾಗದಲ್ಲಿ* ಕನ್ನಡ ಕಾನ್ವೆಂಟ  ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ  ಚೈತ್ರಾ ತಂದೆ ಶರಣಪ್ಪ  9 ನೇ ತರಗತಿ  ಪ್ರಥಮ ಬಹುಮಾನ ಪಡೆದು ಪ್ರಶಸ್ತಿ ಪತ್ರ ಮತ್ತು 10,000 ( ಹತ್ತು ಸಾವಿರ) ನಗದು ರೂಪಾಯಿ  ಪಡೆದಿರುತ್ತಾಳೆ, ಅದೇ ರೀತಿ  ಅರಣಕುಮಾರ ತಂದೆ ಶಾಮರಾಯ 9 ನೇ ತರಗತಿ
 ತೃತೀಯ ಬಹುಮಾನ  ಪ್ರಶಸ್ತಿ ಪತ್ರ ಮತ್ತು 7,000 (ಏಳು ಸಾವಿರ) ರೂಪಾಯಿ* ನಗದು ಬಹುಮಾನ ಪದಡೆದಿರುತ್ತಾನೆ.  
ಶ್ರಾವಣಿ ತಂದೆ ಕೇದಾರನಾಥ 8 ನೇ ತರಗತಿ  ಪ್ರಥಮ ಬಹುಮಾನ
 ಕಲ್ಯಾಣ ಕರ್ನಾಟಕ ಉತ್ಸವದ ನಿಮಿತ್ಯ  ದಿನಾಂಕ 25.02.2023 ನಡೆದ ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಯ ವಿದ್ಯಾರ್ಥಿಗಳಿಗೆ  ಮಕ್ಕಳ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು ಅದರಲ್ಲಿ 6 ರಿಂದ 8 ನೇ ತರಗತಿ ವಿಭಾಗದಲ್ಲಿ ವಿಕಾಸ ಆಂಗ್ಲ ಮಾದ್ಯಮ  ಪ್ರೌಢ ಶಾಲೆಯ  ಶ್ರಾವಣಿ ತಂದೆ ಕೇದಾರನಾಥ 8 ನೇ ತರಗತಿ  ಪ್ರಥಮ ಬಹುಮಾನ ಪಡೆದು ಪ್ರಶಸ್ತಿ ಪತ್ರ ಮತ್ತು 10,000 ( ಹತ್ತು ಸಾವಿರ) ನಗದು ರೂಪಾಯಿ  ಪಡೆದಿರುತ್ತಾಳೆ.
  

 ದಿನಾಂಕ16-2-2023ರಂದು ಪ್ರೌಢಶಾಲಾ ಮಕ್ಕಳಿಗಾಗಿ  ಹಮ್ಮಿಕೊಂಡಿರುವ ತಾಲ್ಲೂಕು ಮಟ್ಟದ  ಪ್ರಾಚ್ಯ ಪ್ರಜ್ಞೆ ಕಾರ್ಯಕ್ರಮದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಕಾಸ ಇಂಗ್ಲಿಷ್ ಮೀಡಿಯಂ ಶಾಲೆಯ ಪ್ರವಿತ್ರಾ ತಂದೆ ಸುರೇಶ ಉಡಚಾಣ 9ನೇ ತರಗತಿ ಪ್ರಥಮ ಬಹುಮಾನ ಪಡೆದು  ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆ ಯಾಗಿದ್ದಾಳೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ
(ಕ ಪ್ರೌ ಶಿ ಪ ಮಂಡಳಿ) ಬೆಂಗಳೂರು ರವರು ನಡೆಸುವ

ಡ್ರಾಯಿಂಗ್ ಗ್ರೇಡ್ ಪರೀಕ್ಷೆ ನವೆಂಬರ್ - 2022 ರ ಫಲಿತಾಂಶ
     Drawing Grade Exam Results :2022   
ಕನ್ನಡ ಕಾನ್ವೆಂಟ ಮತ್ತು ವಿಕಾಸ ಆಂಗ್ಲ ಮಾದ್ಯಮ ಪ್ರೌಢ ಶಾಲೆ ಕಲಬುರಗಿ .
 ಡ್ರಾಯಿಂಗ್ ಲೋಯರ್ ಗ್ರೇಡ್ (Lower Grade) :
ಪರೀಕ್ಷೆಗೆ ಕುಳಿತವರು  : 11   
ಅತ್ಯುತ್ತಮ ಶ್ರೇಣಿ       : 04  
ಪ್ರಥಮ ಶ್ರೇಣಿ            : 07 
ಶೇಕಡಾ ಫಲಿತಾಂಶ   :100%    
 ಹೈಯರ್ ಗ್ರೇಡ್ ( Higher Grade)   
 ಪರೀಕ್ಷೆಗೆ ಕುಳಿತವರು    :17
 ಪ್ರಥಮಶ್ರೇಣಿ              :15                     
 ದ್ವಿತೀಯಶ್ರೇಣಿ             :02                        
ಶೇಕಡಾ ಫಲಿತಾಂಶ     :100%

ಲೋಯರ್ ಗ್ರೇಡ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‌ ಪಡೆದ ವಿದ್ಯಾರ್ಥಿಗಳು

ಶ್ರಾವಣಿ ಕೇದಾರ

ಮಹಾಂತೇಶ ಮಹಾದೇವಪ್ಪ

ಚೇತನಕುಮಾರ ಶ್ರೀರಾಮಚಂದ್ರ

ಆಶಮ್ಮ ಮುತ್ತಪ್ಪ

ಹೈಯರ್ ಗ್ರೇಡ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು
ಕಾವ್ಯಶ್ರೀ ಮಾಣಿಕರಾವ್

ಅಪರ್ಣಾ ಸಂಜುಕುಮಾರ

ಸಾಗರಿಕಾ ಶರಣಕುಮಾರ

ರೋಹಿತ ಶೆಟ್ಟಿರಾಮ

ದಿನಾಂಕ:- 31- 12 -2022 ರಂದು ಸ್ವಾಧ್ಯಾಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ  ಸಂಸ್ಥೆ ಕಲಬುರಗಿ ರವರು ಏರ್ಪಡಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ಕನ್ನಡ ಕಾನ್ವೆಂಟ ಪ್ರೌಢ ಶಾಲೆ ವಿದ್ಯಾರ್ಥಿಗಳು ಭಾಗವಹಿಸಿ ಅಮೂಲ್ಯ 10ನೇ ತರಗತಿ, ಸಂಜನಾ 10ನೇ ತರಗತಿ, ಅಪರ್ಣಾ 10ನೇ ತರಗತಿ, ಕಾವ್ಯಶ್ರೀ 10ನೇ ತರಗತಿ ಇವರು ಉತ್ತಮ ಕಲಾಕೃತಿಗಳನ್ನು ರಚಿಸಿ ನಗದು ರೂಪಾಯಿ ಬಹುಮಾನ ಪಡೆದಿರುತ್ತಾರೆ ಈ ವಿದ್ಯಾರ್ಥಿಗಳಿಗೆ ಅಭಿನಂದನೆಗಳು💐



ದಿನಾಂಕ:- 31- 12 -2022 ರಂದು ಸ್ವಾಧ್ಯಾಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ  ಸಂಸ್ಥೆ ಕಲಬುರಗಿ ರವರು ಏರ್ಪಡಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಕಾಸ ಇಂಗ್ಲಿಷ್ ಮೀಡಿಯಂ ಪ್ರೌಢ ಶಾಲೆ ವಿದ್ಯಾರ್ಥಿಗಳು ಭಾಗವಹಿಸಿ ಶ್ರಾವಣಿ 8ನೇ ತರಗತಿ, ಅಭಿಕ್ಷೇಕ 9ನೇ ತರಗತಿ, ಸಿಂಚನಾ 9ನೇ ತರಗತಿ, ಸ್ವಾತಿ S 9ನೇ ತರಗತಿ ಇವರು ಉತ್ತಮ ಕಲಾಕೃತಿಗಳನ್ನು ರಚಿಸಿ ನಗದು ರೂಪಾಯಿ ಬಹುಮಾನ ಪಡೆದಿರುತ್ತಾರೆ ಈ ವಿದ್ಯಾರ್ಥಿಗಳಿಗೆ ಅಭಿನಂದನೆಗಳು💐


 ದಿನಾಂಕ :- 30-12-2022 ರಂದು  ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕಲಬುರಗಿ ಸಭಾಂಗಣದಲ್ಲಿ ಸ್ವೀಪ್ ಕಾರ್ಯಕ್ರಮದಡಿ ತಾಲೂಕ ಮಟ್ಟದ ಸ್ಪರ್ಧೆಗಳಲ್ಲಿ ಕನ್ನಡ ಕಾನ್ವೆಂಟ ಪ್ರೌಢ ಶಾಲೆಯ ವಿದ್ಯಾರ್ಥಿನಿ ಚಿತ್ರಕಲಾ ಸ್ಪರ್ಧೆಯಲ್ಲಿ ಕಾವ್ಯಶ್ರೀ ಎಂ 10ನೇ ತರಗತಿ ಪ್ರಥಮ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆ (ರಿ) ಗದಗ ಚಿಣ್ಣರ ಚಿತ್ರ ಚಿತ್ತಾರ - 2022 ಮಕ್ಕಳ ರಾಜ್ಯ ಮಟ್ಟದ ಚಿತ್ರ ಕಲೋತ್ಸವ 'ನೀಲಿ ವಿಭಾಗ"  (6, 7 ಮತ್ತು 8 ನೇ ತರಗತಿ) ಯ ಚಿತ್ರಕಲಾ ಸ್ಪರ್ಧೆಯಲ್ಲಿ ಜಯಲಕ್ಷ್ಮಿ ತಂದೆ ಪದ್ಮಾಕರ 7ನೇ ತರಗತಿ ಕನ್ನಡ ಕಾನ್ವೆಂಟ ಪ್ರಾಥಮಿಕ ಶಾಲೆ, ಓಕಳಿ ವಿದ್ಯಾ ಮಂದಿರ, ಕಲಬುರಗಿ. ವಿದ್ಯಾರ್ಥಿನಿ ರಾಜ್ಯ ಮಟ್ಟದ ಪ್ರಶಸ್ತಿ ಪಡೆದಿರುತ್ತಾಳೆ. ಪ್ರಶಸ್ತಿಯು 3000/ರೂ ನಗದು, ವಿಶಿಷ್ಠ ಸ್ಮರಣಿಕ' (2000 ಬೆಲೆಯ) ಆಕರ್ಷಕ ಪ್ರಶಸ್ತಿ ಪತ್ರ (1000 ಬೆಲೆಯ) 'ಪುಟ್ಟ ಕಲಾವಿದ' (ಲಿಟ್ಟಲ್ ಆರ್ಟಿಸ್ಟ್) ಪ್ರಶಸ್ತಿ ದಿನಾಂಕ:- 05-12-2022 ರಂದು ಪ್ರಶಸ್ತಿ ಗದಗ ನಲ್ಲಿ ನೀಡಿ ಗೌರವಿಸಲಾಯಿತು

ದಿನಾಂಕ:- 03-12-2022 ರಂದು  ರಂಗಾಂತರಂಗ ಸಾಂಸ್ಕೃತಿಕ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದಲ್ಲಿ 
ರಂಗಾಂತರಂಗ ಕಲೋತ್ಸವ
ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಶಸ್ತಿಗೆ ಆಯ್ಕೆಯಾದ ಕನ್ನಡ ಕಾನ್ವೆಂಟ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಜಯಲಕ್ಷ್ಮಿ ಪದ್ಮಾಕರ 7ನೇ ತರಗತಿ ಇವಳಿಗೆ ಸನ್ಮಾನಿಸಿ ಅಭಿನಂದಿಸಿದರು.


ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆ (ರಿ) ಗದಗ ಚಿಣ್ಣರ ಚಿತ್ರ ಚಿತ್ತಾರ - 2022 ಮಕ್ಕಳ ರಾಜ್ಯ ಮಟ್ಟದ ಚಿತ್ರ ಕಲೋತ್ಸವ 'ನೀಲಿ ವಿಭಾಗ"  (6, 7 ಮತ್ತು 8 ನೇ ತರಗತಿ) ಯ ಚಿತ್ರಕಲಾ ಸ್ಪರ್ಧೆಯಲ್ಲಿ ಜಯಲಕ್ಷ್ಮಿ ತಂದೆ ಪದ್ಮಾಕರ 7ನೇ ತರಗತಿ ಕನ್ನಡ ಕಾನ್ವೆಂಟ ಪ್ರಾಥಮಿಕ ಶಾಲೆ, ಓಕಳಿ ವಿದ್ಯಾ ಮಂದಿರ, ಕಲಬುರಗಿ. ವಿದ್ಯಾರ್ಥಿನಿ ರಾಜ್ಯ ಮಟ್ಟದ ಪ್ರಶಸ್ತಿ ಪಡೆದಿರುತ್ತಾಳೆ. ಪ್ರಶಸ್ತಿಯು 3000/ರೂ ನಗದು, ವಿಶಿಷ್ಠ ಸ್ಮರಣಿಕ' (2000 ಬೆಲೆಯ) ಆಕರ್ಷಕ ಪ್ರಶಸ್ತಿ ಪತ್ರ (1000 ಬೆಲೆಯ) 'ಪುಟ್ಟ ಕಲಾವಿದ' (ಲಿಟ್ಟಲ್ ಆರ್ಟಿಸ್ಟ್) ಪ್ರಶಸ್ತಿಗೆ ಆಯ್ಕೆಯಾಗಿದ್ದಾಳೆ. ಈ ವಿದ್ಯಾರ್ಥಿನಿಗೆ ಅಭಿನಂದನೆಗಳು.💐


ಭಾರತ ಸರ್ಕಾರದ ಬ್ಯೂರೋ ಆಫ್ ಎನರ್ಜಿ ಎಫಿಷಿಯೆನ್ಸಿ ಬೆಂಗಳೂರು ರವರು ಏರ್ಪಡಿಸಿದ  ಇಂಧನ ಸಂರಕ್ಷಣೆ ಬಗ್ಗೆ ರಾಷ್ಟ್ರೀಯ ಚಿತ್ರಕಲೆ ಸ್ಪರ್ಧೆ 2022 ರಲ್ಲಿ ಕನ್ನಡ ಕಾನ್ವೆಂಟ ಪ್ರೌಢ ಶಾಲೆ ಓಕಳಿ ವಿದ್ಯಾ ಮಂದಿರದ , ವಿದ್ಯಾರ್ಥಿನಿಯಾದ ಅನನ್ಯ 10ನೇ ತರಗತಿ  ದಿನಾಂಕ 14-11-2022 ರಂದು ಬೆಂಗಳೂರುನಲ್ಲಿ ನಡೆಯುವ ‌ರಾಜ್ಯ‌ ಮಟ್ಟದ ಚಿತ್ರಕಲೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿಗಳಿಗೆ ಅಭಿನಂದನೆಗಳು💐


ಭಾರತ ಸರ್ಕಾರದ ಬ್ಯೂರೋ ಆಫ್ ಎನರ್ಜಿ ಎಫಿಷಿಯೆನ್ಸಿ ಬೆಂಗಳೂರು ರವರು ಏರ್ಪಡಿಸಿದ  ಇಂಧನ ಸಂರಕ್ಷಣೆ ಬಗ್ಗೆ ರಾಷ್ಟ್ರೀಯ ಚಿತ್ರಕಲೆ ಸ್ಪರ್ಧೆ 2022 ರಲ್ಲಿ ಕನ್ನಡ ಕಾನ್ವೆಂಟ ಪ್ರೌಢ ಶಾಲೆ ಓಕಳಿ ವಿದ್ಯಾ ಮಂದಿರದ ಕಲಬುರಗಿಯ ವಿದ್ಯಾರ್ಥಿಗಳಾದ ಚೈತ್ರಾ ತಂದೆ ಶರಣಪ್ಪ 9ನೇ ತರಗತಿ ಮತ್ತು ಐಶ್ವರ್ಯ ತಂದೆ ಸಂತೋಷ 10ನೇ ತರಗತಿ ಇಬ್ಬರು ದಿನಾಂಕ 14-11-2022 ರಂದು ಬೆಂಗಳೂರುನಲ್ಲಿ ನಡೆಯುವ ‌ರಾಜ್ಯ‌ ಮಟ್ಟದ ಚಿತ್ರಕಲೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿಗಳಿಗೆ ಅಭಿನಂದನೆಗಳು


ಕಲಬುರಗಿ ಮಹಾನಗರ ಪಾಲಿಕೆ ಯವರು ಏರ್ಪಡಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ 'ಕನ್ನಡ ಕಾನ್ವೆಂಟ ಪ್ರೌಢ ಶಾಲೆ - ಓಕಳಿ ವಿದ್ಯಾ ಮಂದಿರದ '  ವಿದ್ಯಾರ್ಥಿನಿಯಾದ 'ಸಂಜನಾ ತಂದೆ ಸಿದ್ದಯ್ಯ' 10ನೇ ತರಗತಿ ಇವಳಿಗೆ ಇಂದು ಮಹಾನಗರ ಪಾಲಿಕೆಯ ಉಪ ಆಯುಕ್ತರು ಪ್ರಶಸ್ತಿ ಪತ್ರ ಮತ್ತು 5,000-00 ( ಐದು ಸಾವಿರ,). ರೂಪಾಯಿ ನಗದು ನೀಡಿ ಗೌರವಿಸಿದರು

'ಸ್ವಚ್ಛ ಅಮೃತ ಮಹೋತ್ಸವದ' ಅಂಗವಾಗಿ ದಿನಾಂಕ:10-09-2022 ರಂದು *ಕಲಬುರಗಿ ಮಹಾನಗರ ಪಾಲಿಕೆ* ಹಾಗೂ *ಯುನೈಟೆಡ್ ಆಸ್ಪತ್ರೆಯ* ಸಹಯೋಗದೊಂದಿಗೆ ನಗರದಲ್ಲಿ “ಏಕ ಬಳಕೆಯ ಪ್ಲಾಸ್ಟಿಕ ನಿಷೇಧ'ದ ಕುರಿತು ಏರ್ಪಡಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ 'ಕನ್ನಡ ಕಾನ್ವೆಂಟ ಪ್ರೌಢ ಶಾಲೆಯ ವಿದ್ಯಾರ್ಥಿನಿ ಸಂಜನಾ ತಂದೆ ಸಿದ್ದಯ್ಯ 10 ನೇ ತರಗತಿ ಇವಳಿಗೆ ತೃತೀಯ ಬಹುಮಾನ ಪಡೆದಿರುತ್ತಾಳೆ. ಪ್ರಶಸ್ತಿ 5,000-00 ( ಐದು ಸಾವಿರ) ನಗದು ರೂಪಾಯಿ ಮತ್ತು ಪ್ರಶಸ್ತಿ ಪತ್ರ ನೀಡಿ ಇಂದು ಗೌರವಿಸಿದ್ದಾರೆ , ಈ ವಿದ್ಯಾರ್ಥಿನಿಗೆ ಅಭಿನಂದನೆಗಳು


ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2022-23ನೇ ಸಾಲಿನ ರಾಜ್ಯ ಮಟ್ಟದ ಸರಕಾರಿ ಹಾಗೂ ಅನುದಾನಿತ  ಪ್ರೌಢ ಶಾಲೆ, ವಿದ್ಯಾರ್ಥಿಗಳ ಚಿತ್ರಕಲಾ ಸ್ಪರ್ಧೆಯಲ್ಲಿ  ಜಿಲ್ಲಾ ಮಟ್ಟದಿಂದ *ವಿಭಾಗ ಮಟ್ಟಕ್ಕೆ* ಕನ್ನಡ ಕಾನ್ವೆಂಟ ಪ್ರೌಢ ಶಾಲೆಯ ವಿದ್ಯಾರ್ಥಿನಿ ಕಾವ್ಯಶ್ರೀ ಶೇರಿಕಾರ 10ನೇ ತರಗತಿ ಆಯ್ಕೆಯಾಗಿದ್ದಾಳೆ.


ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕಲಬುರಗಿ. ಸಮೂಹ ಸಂಪನ್ಮೂಲ ಕೇಂದ್ರ, ಎಮ್.ಬಿ. ನಗರ ತಾ|| ಕಲಬುರಗಿ (ಉತ್ತರ ವಲಯ) ಜಿ. ಕಲಬುರಗಿ.
2022-23ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯ ಚಿತ್ರಕಲೆ ಸ್ಪರ್ಧೆಯಲ್ಲಿ ಕನ್ನಡ ಕಾನ್ವೆಂಟ  ಪ್ರೌಢ ಶಾಲೆಯ ಸಂಜನಾ ತಂದೆ ಸಿದ್ದಯ್ಯ 10 ನೇ ತರಗತಿ ಇವರು ಕ್ಲಸ್ಟರ್ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ತಾಲ್ಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಕಲಬುರಗಿಯಲ್ಲಿ 131 ನೇ ಡಾ.B.R.ಅಂಬೇಡ್ಕರ್ ಜಯಂತಿ ನಿಮಿತ್ತ ಜಿಲ್ಲಾ ಉತ್ಸವ ಸಮಿತಿ ಕಲಬುರಗಿ ವತಿಯಿಂದ ಏರ್ಪಡಿಸಿದ ಡಾ.B.R.ಅಂಬೇಡ್ಕರ್ ಜಿವನ ಚರಿತ್ರೆ ಮತ್ತು ಸಾಧನೆ ವಿಷಯದ ಚಿತ್ರ ಕಲಾ ಸ್ಪರ್ಧೆಯಲ್ಲಿ ಕನ್ನಡ ಕಾನ್ವೆಂಟ ಪ್ರೌಢ ಶಾಲೆ ವಿದ್ಯಾರ್ಥಿನಿ ಕಾವ್ಯಶ್ರೀ ತಂದೆ ಮಾಣಿಕರಾವ್ 10ನೇ ತರಗತಿ ಪ್ರಥಮ ಬಹುಮಾನ 5,000-00 ನಗದು ರೂಪಾಯಿ ಮತ್ತು ಪ್ರಶಸ್ತಿ ಪತ್ರವನ್ನು ದಿನಾಂಕ 13-04-2022 ರಂದು ನೀಡಿ ಗೌರವಿಸಲಾಯಿತು. 

*ಕನ್ನಡ ಕಾನ್ವೆಂಟ್ ಪ್ರೌಢ ಶಾಲೆಗೆ ಚಿತ್ರಕಲಾ ಗ್ರೇಡ್ ಪರೀಕ್ಷೆಯಲ್ಲಿ ಪ್ರತಿಶತ ಫಲಿತಾಂಶ* 
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಬೆಂಗಳೂರುರವರು 2021-22 ಸಾಲಿನ ಮಾಚ್೯ ತಿಂಗಳಲ್ಲಿ ನಡೆಸಿದ ಚಿತ್ರಕಲಾ ಗ್ರೇಡ್ ಪರೀಕ್ಷೆಯಲ್ಲಿ ಶೇ.100 ಫಲಿಂತಾಶ ಪಡೆದಿದ್ದಾರೆ.

ಲೋಯರ್ ಗ್ರೇಡ್ ಪರೀಕ್ಷೆಯಲ್ಲಿ 22 ವಿದ್ಯಾರ್ಥಿಗಳಲ್ಲಿ 4 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 17
ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ , 1 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಹೈಯರ್ ಗ್ರೇಡ್‌ನಲ್ಲಿ 15 ವಿದ್ಯಾರ್ಥಿಗಳಲ್ಲಿ ಓರ್ವ ವಿದ್ಯಾರ್ಥಿ
 ಡಿಸ್ಟಿಂಕ್ಷನ್‌ನಲ್ಲಿ, 10 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ , 4 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಲೋಯರ್ ಗ್ರೇಡ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‌ ಪಡೆದ ವಿದ್ಯಾರ್ಥಿಗಳು
ಸಂಜನಾ ತಂದೆ ಸಿದ್ದಯ್ಯ

ಕೆಶವಾನಂದ ತಂದೆ ದಿಗಂಬರ

ನೈನಾ ತಂದೆ ಶೆಟ್ಟಿರಾಮ

ಭೂಮಿಕಾ ತಂದೆ ಸೂರ್ಯಕಾಂತ

ಹೈಯರ್ ಗ್ರೇಡ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‌ ಪಡೆದ ವಿದ್ಯಾರ್ಥಿ
ಶ್ವೇತ ತಂದೆ ಅಂಬಣ್ಣಾ

*ವಿಕಾಸ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಚಿತ್ರಕಲಾ ಗ್ರೇಡ್ ಪರೀಕ್ಷೆಯಲ್ಲಿ ಪ್ರತಿಶತ ಫಲಿತಾಂಶ* . 
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಬೆಂಗಳೂರುರವರು 2021-22 ಸಾಲಿನ ಮಾಚ್೯ ತಿಂಗಳಲ್ಲಿ ನಡೆಸಿದ ಚಿತ್ರಕಲಾ ಗ್ರೇಡ್ ಪರೀಕ್ಷೆಯಲ್ಲಿ ಶೇ.100 ಫಲಿಂತಾಶ ಪಡೆದಿದ್ದಾರೆ.

ಲೋಯರ್ ಗ್ರೇಡ್ ಪರೀಕ್ಷೆಯಲ್ಲಿ 03 ವಿದ್ಯಾರ್ಥಿಗಳಲ್ಲಿ  03
ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ  ಉತ್ತೀರ್ಣರಾಗಿದ್ದಾರೆ.

ಹೈಯರ್ ಗ್ರೇಡ್‌ನಲ್ಲಿ 09 ವಿದ್ಯಾರ್ಥಿಗಳಲ್ಲಿ 02 ವಿದ್ಯಾರ್ಥಿಗಳು
 ಡಿಸ್ಟಿಂಕ್ಷನ್‌ನಲ್ಲಿ, 04 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ , 03 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಹೈಯರ್ ಗ್ರೇಡ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‌ ಪಡೆದ ವಿದ್ಯಾರ್ಥಿಗಳು

ಶರಥ ತಂದೆ ಅನಿಲಕುಮಾರ

ಚೆನ್ನವೀರ ತಂದೆ ವೆಂಕಟ









ದಿನಾಂಕ:- 14-11-2010 ರಂದು ಕರ್ನಾಟಕ ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಂಗಳೂರು ಇವರು  ಕನ್ನಡ ಕಾನ್ವೆಂಟ ಶಾಲೆಯ ಶಿವರಂಜಿನಿ ಎಂ ಹಿರೇಮಠ 7ನೇ ತರಗತಿ ಚಿತ್ರಕಲಾ ಕ್ಷೇತ್ರದಲ್ಲಿ ಹೊಂದಿರುವ ಅಸಾಧಾರಣ ಸಾಧನೆಯನ್ನು ಗುರುತಿಸಿ 2010ನೇ ಸಾಲಿನ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಪ್ರಶಸ್ತಿಯನ್ನು ರಾಜ್ಯಪಾಲರಾದ ಹಂಸರಾಜ ಭಾರದ್ವಾಜ್ ರವರು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ದಿನಾಂಕ : 13-08-2016 ರಂದು ಪಿ.ಆರ್ ತಿಪ್ಪೇಸ್ವಾಮಿ ಪ್ರತಿಷ್ಠಾನ ಮೈಸೂರು ರವರು ಏರ್ಪಡಿಸಿದ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಕನ್ನಡ ಕಾನ್ವೆಂಟ ಶಾಲೆಯ ಕುಶಲ ತಂದೆ ವಾಲ್ಮೀಕಿ 6ನೇ ತರಗತಿ ಪ್ರಥಮ ಬಹುಮಾನವನ್ನು ಮಾಜಿ ಮುಖ್ಯ ಮಂತ್ರಿಗಳಾದ ಧರ್ಮಸಿಂಗ್ ರವರು ನೀಡಿದರು.



ದಿನಾಂಕ:- 17-11-2021 ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ಕಲಬುರಗಿ ರವರು ಏರ್ಪಡಿಸಿದ ರಕ್ತ ಧಾನ್ಯದ ಮಹತ್ವ ವಿಷಯದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ‌ಕನ್ನಡ ಕಾನ್ವೆಂಟ ಪ್ರೌಢ ಶಾಲೆಯ  ವಿದ್ಯಾಥಿನಿಯಾದ ಕಾವ್ಯಶ್ರೀ ತಂದೆ ಮಾಣಿಕ 9ನೇ ತರಗತಿ ದ್ವಿತೀಯ ಬಹುಮಾನ ಪ್ರಶಸ್ತಿ ಪತ್ರ ಮತ್ತು 2500-00 ನಗದು ರೂಪಾಯಿ ಬಹುಮಾನ ಪಡೆದಿರುತ್ತಾಳೆ.

ದಿನಾಂಕ:- 15-08-2021 ರಂದು ಅಜಾದಿ ಕಾ ಅಮೃತ ಮಹೋತ್ಸವ ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಏರ್ಪಡಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ಕಾವ್ಯಶ್ರೀ ತಂದೆ ಮಾಣಿಕರಾವ್ 9 ನೇ ತರಗತಿ ದ್ವೀತಿಯ ಬಹುಮಾನ ಪಡೆದಿರುತ್ತಾಳೆ ಇದನ್ನು ಕಲಬುರಗಿ ಜಿಲ್ಲಾ ಉಸ್ತುವಾರಿ ಮಂತ್ರಿ ಮುರಗೇಶ ನಿರಾಣಿ ರವರು ನೀಡಿದರು


ದಿನಾಂಕ:- 01-11-2021 ರಂದು ಅಜಾದಿ ಕಾ ಅಮೃತ ಮಹೋತ್ಸವ ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸ್ವಚ್ಛ ಭಾರತ ಮಿಷನ್ ವತಿಯಿಂದ
ಮಹಾನಗರ ಪಾಲಿಕೆ ಕಲಬುರಗಿ ರವರು ಏರ್ಪಡಿಸಿದ  ಚಿತ್ರಕಲಾ ಸ್ಪರ್ಧೆಯಲ್ಲಿ ಕಾವ್ಯಶ್ರೀ ತಂದೆ ಮಾಣಿಕರಾವ್ 9 ನೇ ತರಗತಿ ಪ್ರಥಮ ಬಹುಮಾನ 5,000-00  (ಐದು ಸಾವಿರ ) ರೂಪಾಯಿ ನಗದು ಬಹುಮಾನವನ್ನು ಪಡೆದಿರುತ್ತಾಳೆ. ಈ ಬಹುಮಾನವನ್ನು ಶಾಸಕರಾದ ದತ್ತಾತ್ರೇಯ ಪಾಟೀಲ ರೇವುರ ರವರು ನೀಡಿದರು.


👆   ದಿನಾಂಕ :- 11-01-2021 ರಂದು ಭಾರತ ಚುನಾವಣಾ ಆಯೋಗ ಬೆಂಗಳೂರು ರವರು ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಏರ್ಪಡಿಸಿದ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ
ರಕ್ಷಿತಾ ಚೆನ್ನಪ್ಪ ದಾಮ 10ನೇ ತರಗತಿ  ಭಾಗವಹಿಸಿದ ಕ್ಷಣ ಮತ್ತು ಅವಳ ಕಲಾಕೃತಿ.





ಕನ್ನಡ ಕಾನ್ವೆಂಟ್ ಶಾಲೆ ಕಲಬುರಗಿಯಲ್ಲಿ 16ನೇ ವರ್ಷದ ಮಕ್ಕಳ ಚಿತ್ರಕಲಾ ಪ್ರದರ್ಶನವನ್ನು ದಿ ಐಡಿಯಲ್ ಫೈನ್ ಆರ್ಟ್ಸ್ ಪ್ರಾಚಾರ್ಯರಾದ ಶ್ರೀ ರಾಜಶೇಖರ ಪಾಟೀಲ ರವರು ಉದ್ಘಾಟಿಸಿದರು. ಅದರ ಭಾವಚಿತ್ರಗಳು ದಿನಾಂಕ 16-02-2019


2018-19 ರ  ಪ್ರತಿಭಾ ಕಾರಂಜಿ  ಸ್ಪರ್ಧೆಯ ದೃಶ್ಯ ಕಲೆಯ  ಜಿಲ್ಲಾ ಮಟ್ಟದಲ್ಲಿ ಸ್ಪರ್ಧೆಯಲ್ಲಿ ಮೋನಿಕಾ ತಂದೆ ಚೆನ್ನಪ್ಪ, ಅಂಬಿಕಾ ತಂದೆ ಬಂಡೆಯ, ಲಕ್ಷ್ಮಿ ತಂದೆ ಭೀಮಣ್ಣ ಗೌಡ, ಸುಶ್ಮಿತಾ ತಂದೆ ಗುರುಲಿಂಗಯ್ಯ ಇವರು ಭಾಗವಹಿಸಿ ದ್ವಿತೀಯ ಬಹುಮಾನ ಪಡೆದಿರುತ್ತಾರೆ ವಿಷಯ ಮೈಸೂರು ಪಾರಂಪರಿಕ ಕಲೆ .

ದಿನಾಂಕ : 26-09-2018 ರಂದು ಕಲಬುರಗಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಚಿತ್ರಕಲೆ  ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ.



ದಿನಾಂಕ 21-11-2017 ರಂದು ಓಕಳಿ ವಿದ್ಯಾ ಮಂದಿರ ಕಲಬುರಗಿಯಲ್ಲಿ  ನಡೆದ ಚಿತ್ರಕಲಾ ಸ್ಪರ್ಧೆ & ಪ್ರದರ್ಶನದ ಕಾರ್ಯಕ್ರಮ ಭಾವಚಿತ್ರ

 ದಿನಾಂಕ : 09-12-2018 ರಂದು  ಜಿಲ್ಲಾ  ಪಂಚಾಯತ ಕಲಬುರಗಿ, ಸಾರ್ವಜನಿಕ   ಕಲಬುರಗಿ ರವರ ಸಂಯುಕ್ತ ಆಶ್ರಯದಲ್ಲಿ ನಡೆದ ಸಿರಿ ಕಾರ್ಯಕ್ರಮದಡಿಯಲ್ಲಿ ಏರ್ಪಡಿಸಿದ ಸ್ಪರ್ಧೆಯಲ್ಲಿ ಕನ್ನಡ ಕಾನ್ವೆಂಟ ಪ್ರೌಢ ಶಾಲೆ ವಿದ್ಯಾರ್ಥಿನಿ ಚಿತ್ರಕಲಾ ಸ್ಪರ್ಧೆಯಲ್ಲಿ ಅಂಬಿಕಾ ತಂದೆ ಬಂಡಯ್ಯ 9ನೇ ತರಗತಿ ಪ್ರಥಮ ಬಹುಮಾನ ಪಡೆದಿರುತ್ತಾರೆ.

ದಿನಾಂಕ:14-12-2017 ರಂದು ಮದರ ತೆರೇಸಾ ಚಿಲ್ಡ್ರನ್ಸ್ ಡೆವಲಪ್ಮೆಂಟ್ ಸೊಸೈಟಿ ಮುಂಬಯಿನವರು ಏರ್ಪಡಿಸಿದ ರಾಷ್ಟ್ರ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಶರತ ಎ ಎಸ್‌ 6ನೇ ತರಗತಿ ಮತ್ತು ಕನ್ನಡ ಕಾನ್ವೆಂಟ ಪ್ರೌಢ ಶಾಲೆಯ ಐಶ್ವರ್ಯ ರುದ್ರಪ್ಪ 9ನೇ ತರಗತಿ ಇವರು ಚಿನ್ನದ ಪದಕ ಪಡೆದು ವ್ಯಕ್ತಿತ್ವ ವಿಕಾಸ ಶಿಕ್ಷಣ ಸಂಸ್ಥೆಗೆ ಕೀರ್ತಿ ತಂದಿದ್ದಾರೆ, ಅವರಿಗೆ ಅಭಿನಂದನೆಗಳು.

ದಿನಾಂಕ: 29-12-2017 ರಂದು ಸಾರ್ವಜನಿಕ ಶಿಕ್ಷಣ ಇಲಾಖೆಯವರು ಏರ್ಪಡಿಸಿರುವ  ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. 

ದಿನಾಂಕ: 25-01-2018 ರಂದು ಭಾರತ ಚುನಾವಣಾ ಆಯೋಗ ಬೆಂಗಳೂರು ರವರು ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಏರ್ಪಡಿಸಿದ ರಾಜ್ಯ ಮಟ್ಟದ ಕೋಲ್ಯಾಜ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಸಂಜೀವ್ ಕುಮಾರ್ IAS ಮುಖ್ಯ ಚುನಾವಣಾಧಿಕಾರಿ, ಕರ್ನಾಟಕ ಹಾಗೂ ಅಪರ ಮುಖ್ಯ ಕಾರ್ಯದರ್ಶಿ ಇವರು ಕನ್ನಡ ಕಾನ್ವೆಂಟ ಪ್ರೌಢ ಶಾಲೆ ಕಲಬುರಗಿ ವಿದ್ಯಾರ್ಥಿನಿ ದುರ್ಗಾ ತಂ ಶೈಲೇಂದ್ರ ಠಾಕೂರ್ ಗೆ ನೀಡಿದರು.

ದಿನಾಂಕ:26-01-2018 ರಂದು ನವ ಕರ್ನಾಟಕ 2025 ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ  ಜೂನಿಯರ್ ವಿಭಾಗದಲ್ಲಿ ಸ್ವಾತಿ ಎಸ್ ಪಾಟೀಲ   ವಿಕಾಸ ಇಂಗ್ಲಿಷ್ ಮಿಡಿಯಂ, ಕಲಬುರಗಿ. ಸೀನಿಯರ್ ವಿಭಾಗದಲ್ಲಿ ಲಕ್ಷ್ಮಿ ಬಿ ಪಾಟೀಲ  ಕನ್ನಡ ಕಾನ್ವೆಂಟ ಪ್ರೌಢ ಶಾಲೆ ಕಲಬುರಗಿ.ಈ ಇಬ್ಬರಿಗೂ ಪ್ರಥಮ ಬಹುಮಾನವನ್ನು ತಲಾ 5,000/- ರೂಪಾಯಿ ಚೆಕ್ ಮತ್ತು ಪ್ರಶಸ್ತಿ ಪತ್ರವನ್ನು ಕಲಬುರಗಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಶ್ರೀ ಡಾ. ಶರಣಪ್ರಕಾಶ ಪಾಟೀಲ ವೈದ್ಯಕೀಯ ಸಚಿವರು ನೀಡಿ ಸನ್ಮಾನಿಸಿದರು‌. ಇವರಿಬ್ಬರ ಚಿತ್ರವು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ.


ದಿನಾಂಕ: 27-01-2018 ರಂದು ಮತದಾನದ ಮಹತ್ವದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಡಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಕನ್ನಡ ಕಾನ್ವೆಂಟ ಪ್ರೌಢ ಶಾಲೆ ಕಲಬುರಗಿ ವಿದ್ಯಾರ್ಥಿಗಳಾದ ಸುಶ್ಮಿತಾ ಮಠಪತಿ ಚಿತ್ರಕಲೆಯಲ್ಲಿ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದುರ್ಗಾ ಠಾಕೂರ್ ಕೋಲ್ಯಾಜ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಜಿಲ್ಲಾಧಿಕಾರಿ ಮತ್ತು ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳು ನೀಡಿದರು.

ದಿನಾಂಕ: 28-01-2018 ರಂದು ಚಿತ್ರ ಸಂತೆ 2018ರ ಮಕ್ಕಳ ಜಿಲ್ಲಾ ಮಟ್ಟದ ಚಿತ್ರಕಲೆ ಸ್ಪರ್ಧೆಯಲ್ಲಿ ಕನ್ನಡ ಕಾನ್ವೆಂಟ ಪ್ರಾಥಮಿಕ ಶಾಲೆಯ ರಕ್ಷೀತಾ ಚನ್ನಪ್ಪ 7ನೇ ತರಗತಿ ದ್ವಿತೀಯ ಮತ್ತು ವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಶರಣ ಎಸ್ ಪಾಟೀಲ7ನೇ ತರಗತಿ ತೃತೀಯ ಬಹುಮಾನ ಪಡೆದಿದ್ದಾರೆ.



ದಿನಾಂಕ: 21-02-2018 ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಛೇರಿ, ಕಲಬುರಗಿ ರವರು ಏರ್ಪಡಿಸಿದ ರಾಜ್ಯ ಮಟ್ಟದ ಪ್ರೌಢ ಶಾಲಾ ಮಕ್ಕಳ ಚಿತ್ರಕಲಾ ಸ್ಪರ್ಧೆಯಲ್ಲಿ ಕನ್ನಡ ಕಾನ್ವೆಂಟ ಪ್ರೌಢ ಶಾಲೆ ಕಲಬುರಗಿ ವಿದ್ಯಾರ್ಥಿಗಳಾದ ಮಂಜರಿ ಭೀಮಯ್ಯ, ಸ್ವಾತಿ ಕೈಲಾಸ, ಸುಷ್ಮೀತಾ ಗುರುಲಿಂಗಯ್ಯಾ ಇವರ ರಚಿಸಿದ ಕಲಾಕೃತಿಗಳು ವಿಭಾಗ ಮಟ್ಟದ ಉತ್ತಮ ಕೃತಿ ಪ್ರಶಸ್ತಿ ತಲಾ ಒಂದು ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಪಡೆದಿದ್ದಾರೆ.

ದಿನಾಂಕ: 21-02-2018 ರಂದು ಚಿತ್ರಕಲೆಯಲ್ಲಿ ಕನ್ನಡ ಕಾನ್ವೆಂಟ ಶಾಲೆ ವಿದ್ಯಾರ್ಥಿಗಳು ಸಾಧನೆ ಮಾಡಿದಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿಯ ಆಯುಕ್ತರಾದ ಹೆಪ್ಸಿಬಾ ರಾಣಿ ಕೊರ್ಲಪಾಟಿ IAS ರವರು ಚಿತ್ರಕಲಾ ಶಿಕ್ಷಕರಾದ ಸೋಮನಾಥ ಎಂ ಮಹೇಂದ್ರ ಇವರಿಗೆ ಉತ್ತಮ ಚಿತ್ರಕಲಾ ಶಿಕ್ಷಕ (Best Teacher )ಎಂದು ಸನ್ಮಾನ ಮಾಡಿದರು.


ದಿನಾಂಕ: 03-03-2018 ರಂದು ನವ ಕರ್ನಾಟಕ 2025 ನನ್ನ ವಿಷನ್ ರಾಜ್ಯ ಮಟ್ಟದ ಚಿತ್ರಕಲೆ ಸ್ಪರ್ಧೆಯಲ್ಲಿ ಕನ್ನಡ ಕಾನ್ವೆಂಟ ಪ್ರೌಢ ಶಾಲೆ ಕಲಬುರಗಿ ವಿದ್ಯಾರ್ಥಿನಿ ಲಕ್ಷ್ಮೀ ಬಿ ಪಾಟೀಲ ಪ್ರಥಮ ಬಹುಮಾನ ಪ್ರಶಸ್ತಿಯು ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ವಿಷನ್ 2025 ಸಿಇಒ  ರೇಣುಕಾ ಚಿದಂಬರಂ ರವರು ಪ್ರಮಾಣ ಪತ್ರಪ್ರಶಸ್ತಿ ಫಲಕ 25,000-00 ರೂಪಾಯಿ ನಗದು ಬಹುಮಾನ ನೀಡಿದರು.

ದಿನಾಂಕ: 06-04-2018 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಲಬುರಗಿ ರವರು ಚಿತ್ರಕಲಾ ಕ್ಷೇತ್ರದಲ್ಲಿ ಅಪ್ರತಿಮ ಅಸಾಧಾರಣ ಪ್ರಶಸ್ತಿಯನ್ನು ಕನ್ನಡ ಕಾನ್ವೆಂಟ ಪ್ರೌಢ ಶಾಲೆಯ ಸುಷ್ಮೀತಾರಾಣಿ ಆರ್ ಮತ್ತು ಶ್ವೇತ ಎಸ್ 10ನೇ ತರಗತಿ ಇವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಶಸ್ತಿಯು ತಲಾ 10,000-00 ರೂಪಾಯಿ ಮತ್ತು ಪ್ರಶಸ್ತಿ ನೀಡಿ ಗೌರವಿಸಿದರು.

ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳ ಪತ್ರಿಕಾ ಪ್ರಕಟಣೆ


























































































1)