ಅಮೃತ ವಾಣಿ

ಈ ಬ್ಲಾಗ್ ರಚನೆ ಮಾಡಲು ಮಾರ್ಗದರ್ಶನ ಮಾಡಿದವರು ನನ್ನ ತಂದೆ
 ದಿll ಮಾನಪ್ಪ ಮಹೇಂದ್ರ, 
ನಿವೃತ್ತ ಹಿರಿಯ ಸಹಾಯಕ ನಿರ್ದೇಶಕರು (ಚಿತ್ರಕಲಾ ವಿಭಾಗ), ಆಯುಕ್ತರ ಕಛೇರಿ, ಬೆಂಗಳೂರು. 
ಶಿಕ್ಷಣ ಇಲಾಖೆಯಲ್ಲಿ ಚಿತ್ರಕಲಾ ವಿಭಾಗದ ಪ್ರಪ್ರಥಮ ಹಿರಿಯ ಸಹಾಯಕ ನಿರ್ದೇಶಕರು
ಈ ಬ್ಲಾಗ್ ರಚನೆ ಮಾಡಿಕೊಟ್ಟ ಮನೋಹರ R ಮತ್ತು ಚಿತ್ರಕಲಾ ಶಿಕ್ಷಕರ ಬಳಗಕ್ಕೆ ಹಾಗೂ What's app ಕೃಪೆಗೂ ನನ್ನ ಕೃತಜ್ಞತೆ ಸಲ್ಲಿಸುತೆನೆ
-----------------------------------------------------------------------------
ಕಲೆಯ ಬಗ್ಗೆ ಅಮೃತವಾಣಿ

👉 ಜೀವನದಲ್ಲಿ ವೈಜ್ಞಾನಿಕ ಭಾಗ ಎಷ್ಟು ಅಗತ್ಯವೋ ಕಲಾ ಭಾಗ ಅದಕ್ಕಿಂತ ಹೆಚ್ಚು ಅಗತ್ಯ.

👉 ಕಲಾ ಶಿಕ್ಷಣವು ಉಲ್ಲಾಸ,  ಉತ್ಸಾಹ, ಸಂತೋಷದಿಂದ ಕಲೆಯುವ ಒಂದು ಪ್ರಕ್ರಿಯೆ.

👉 ದೃಶ್ಯ ಕಲೆಯಲ್ಲಿ ಕಲ್ಪನೆಯು ಭ್ರಮೆಯ ಪರ್ವತವನ್ನು ಏರಿಸಿ ನಿಲ್ಲಿಸುತ್ತದೆ. ಅಥವಾ ವಿವೇಚನೆಯ ಆಳಕ್ಕೆ ಇಳಿಸುತ್ತವೆ  ಮತ್ತು ವಿಚಿತ್ರ ಗತಿಯಲ್ಲಿ ತೇಜಸ್ಸನ್ನು ತುಂಬಿ ಬ್ರಹ್ಮ ಲೋಕವನ್ನು  ಸೃಷ್ಟಿಸುತ್ತದೆ.
 ಡಾll ಡಿ ವಿ ಉಪಾಧ್ಯ ತೌಲನಿಕ ಅಧ್ಯಾಯನ

👉 ಕಲಾವಿದ ಭಾರತೀಯನಾಗ ಬೇಕಾದರೆ ನಿಜವಾಗಿ ತನ್ನ ವಿಚಾರ ಮತ್ತು ಕೃತಿಯಲ್ಲಿ ಭಾರತೀಯನಾಗಿರಬೇಕು. 
ಪದ್ಮಭೂಷಣ ಕೆ. ಕೆ. ಹೆಬ್ಬಾರ್

👉 'ಕಲೆ' ಎಂದರೆ ನಮ್ಮ ಮನಸ್ಸಿಗೆ, ಕಣ್ಣು, ಕಿವಿ ಮೊದಲಾದ ಇಂದ್ರಿಯಗಳ ಮೂಲಕ, ಒಂದು ಸೌಂದರ್ಯವನ್ನು ಒಂದು ಮಹತ್ವವನ್ನು ಒಂದು ಗಂಭೀರ  ವಿಚಾರವನ್ನು ಅನುಭವ ಮಾಡಿಸಿ ಕೊಡಬಲ್ಲ ಕುಶಲಕರ್ಮ .
ಡಿ ವಿ ಜಿ ಯವರ ಕಲೋಪಾಸಕರು ಗ್ರಂಥದಿಂದ

👉 ಕಾಲ ಕಾಲದ ನಾಗರಿಕತೆ ಮತ್ತು ಸಂಸ್ಕೃತಿ ಸಂಸ್ಕಾರವನ್ನು ಅಳೆಯಲು ಕಲೆ ಪ್ರಥಮ ಹಾಗೂ ಪ್ರಮುಖ ಮಾನದಂಡವಾಗಿದೆ .

👉 ಅಂದವಾದ ಬರವಣಿಗೆ ಶಿಕ್ಷಣದ ಒಂದು ಮುಖ್ಯ ಅಂಗವೆಂದು ತಿಳಿಯಬೇಕು. ನನ್ನ ದೃಷ್ಟಿಯಲ್ಲಿ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸುವುದಕ್ಕೆ ಮೊದಲು ಚಿತ್ರ ಬರೆಯುವುದನ್ನು ಕಲಿಸುವುದು ಅವಶ್ಯಕ. ಪಕ್ಷಿಗಳು ಹೂವುಗಳು ಮೊದಲಾದವುಗಳನ್ನು ನೋಡಿ ಅರಿತು ಕೊಳ್ಳುವಂತೆ ಅಕ್ಷರಗಳನ್ನು ನೋಡಿ ಅರಿತುಕೊಳ್ಳಬೇಕು. ವಸ್ತುಗಳನ್ನು ನೋಡಿ ಚಿತ್ರ ಬರೆಯುವ ಅಭ್ಯಾಸ ಮಾಡುವಂತೆ ಅಕ್ಷರಾಭ್ಯಾಸವನ್ನು ಮಾಡಬೇಕು. ಹೀಗೆ ಅಭ್ಯಾಸ ಮಾಡುವುದರಿಂದ ಅಕ್ಷರಗಳ ಬರವಣಿಗೆ ಸುಂದರವಾಗ   ಬಲ್ಲದು.
 ಮಹಾತ್ಮ ಗಾಂಧೀಜಿಯವರ ಆತ್ಮಚರಿತ್ರೆಯಿಂದ ಆಯ್ದುಕೊಳ್ಳಲಾಗಿದೆ.

👉 ರೇಖೆ,  ಆಕಾರ , ವರ್ಣ , ಹಾಗೂ ಸ್ಥಳಾವಕಾಶಗಳನ್ನು ಬಳಸಿಕೊಂಡು ಚಿತ್ರಕಲೆ 1 ಇಂದ್ರ ಸೃಷ್ಟಿಯನ್ನೇ ನಿರ್ಮಿಸಬಲ್ಲದು. ಜೀವನದ ಅನಂತ ವೈವಿಧ್ಯಮಯಗಳ ಸನ್ನಿವೇಶಗಳನ್ನು ಮಾನವೀಯ ಭಾವನೆಗಳನ್ನು, ನಿಸರ್ಗದ ರಮಣೀಯ ಕಥೆಗಳನ್ನು ಅತಿ ಸ್ಮರಣೀಯವಾಗಿ ಅಭಿವ್ಯಕ್ತಿಗೊಳಿಸಬಲ್ಲದು.  ಪ್ರಪಂಚವನ್ನು ತಿಳಿಯಲು ಉಳಿದ ಕಲೆಗಳಂತೆ ಚಿತ್ರಕಲೆ ಮಾನವನಿಗೆ ಅನನ್ಯ ದೃಷ್ಟಿ ಒಂದನ್ನು ದಯಪಾಲಿಸಿದೆ.
 ವಿ .ಕೃ . ಗೋಕಾಕ್

👉 ಕಲೆ ಇಲ್ಲದೆ ಬದುಕೂ ಬೆಳೆಯುವುದಕ್ಕೆ ಸಾಧ್ಯವಿಲ್ಲ. ಕಲೆ ಎನ್ನುವುದು ನಾವು ಹಾಕಿಕೊಳ್ಳುವ ಕೋಟ್ ಇದ್ದ ಹಾಗಲ್ಲ. ಕಲೆ ಎನ್ನುವುದು ಜೀವನದ ಭಾಗವಾದಾಗ ಮಾತ್ರ ಕಲೆ ಏನನ್ನು ಕೊಡಬಲ್ಲದು ಅದನ್ನು ಮಾತ್ರ ನಾವು ಸಂಪೂರ್ಣವಾಗಿ ಸ್ವೀಕರಿಸಲು ಸಾಧ್ಯ.
 ಪ್ರೊl ಎಲ್. ಎಸ್. ಶೇಷಗಿರಿರಾವ್

👉 ವಾಸ್ತವದ ಕರೆಗೆ ಮಾನವ ಕೊಡುವ ಪ್ರತಿಧ್ವನಿಯೇ ಕಲೆ.
ರವೀಂದ್ರನಾಥ್ ಟ್ಯಾಗೋರ್