ಈ ಬ್ಲಾಗ್ ರಚನೆ ಮಾಡಲು ಮಾರ್ಗದರ್ಶನ ಮಾಡಿದವರು ನನ್ನ ತಂದೆ
ದಿll ಮಾನಪ್ಪ ಮಹೇಂದ್ರ,
ನಿವೃತ್ತ ಹಿರಿಯ ಸಹಾಯಕ ನಿರ್ದೇಶಕರು (ಚಿತ್ರಕಲಾ ವಿಭಾಗ), ಆಯುಕ್ತರ ಕಛೇರಿ, ಬೆಂಗಳೂರು.
ಶಿಕ್ಷಣ ಇಲಾಖೆಯಲ್ಲಿ ಚಿತ್ರಕಲಾ ವಿಭಾಗದ ಪ್ರಪ್ರಥಮ ಹಿರಿಯ ಸಹಾಯಕ ನಿರ್ದೇಶಕರು
ಈ ಬ್ಲಾಗ್ ರಚನೆ ಮಾಡಿಕೊಟ್ಟ ಮನೋಹರ R ರವರಿಗೆ ನನ್ನ ಕೃತಜ್ಞತೆ ಸಲ್ಲಿಸುತೆನೆ
-----------------------------------------------------------------------------
35. ಒಂದು ಸರಳರೇಖೆಯ ಅದರಲ್ಲಿಯೇ ಇರುವ C ಬಿಂದುವಿನಲ್ಲಿ ಒಂದು ಕೋನ ಇರುವಂತೆ ಆಯತಾಕೃತಿಯನ್ನು ರಚಿಸಿರಿ.
1) ಮೊದಲು A B ಸರಳ ರೇಖೆಯನ್ನು ಎಳೆಯಿರಿ
2) A B ಯಲ್ಲಿ C ಬಿಂದುವನ್ನು ಗುರ್ತಿಸಿರಿ.
3) ಸೂಕ್ತ ತ್ರಿಜ್ಯದಿಂದ D E ಗಳಲ್ಲಿ ಛೇದಿಸುವಂತೆ C ಕೇಂದ್ರವನ್ನಾಗಿ ಮಾಡಿಕೊಂಡು ಅರ್ಧವರ್ತುಳವನ್ನು ತೆಗೆಯಿರಿ.
4) ಸೂಕ್ತ ಸಾಮಾನ್ಯ ತ್ರಿಜ್ಯದಿಂದ DE ಕೇಂದ್ರಗಳನ್ನಾಗಿ ಮಾಡಿಕೊಂಡು F ನಲ್ಲಿ ಒಂದನ್ನೊಂದು ಛೇದಿಸುವಂತೆ ಕಂಸಗಳನ್ನು ಎಳೆಯಿರಿ.
5) C F ಕೂಡಿಸಿ ವೃದ್ಧಿಸಿರಿ.
6) ಲಂಬದ ಬೇಕಾದ ಸ್ಥಳದಲ್ಲಿ G ಬಿಂದುವನ್ನು ಗುರ್ತಿಸಿರಿ.
7) G C ತ್ರಿಜ್ಯದಿಂದ G ಕೇಂದ್ರವನ್ನಾಗಿ ಮಾಡಿಕೊಂಡು ವೃತ್ತವನ್ನು ತೆಗೆಯಿರಿ H ಉಂಟಾಗುವದು.
8) ಅಷ್ಟೇ ತ್ರಿಜ್ಯದಿಂದ C ಕೇಂದ್ರಮಾಡಿಕೊಂಡು I ನಲ್ಲಿ ಮತ್ತು H ಕೇಂದ್ರ ಮಾಡಿಕೊಂಡು J ನಲ್ಲಿ ಛೇದಿಸಿರಿ.
9) CJ, JH, HI, IC ಕೂಡಿಸಿರಿ.
34. ಒಂದು ಸರಳರೇಖೆಯ ಅದರಲ್ಲಿಯೇ ಇರುವ C ಬಿಂದುವಿನಲ್ಲಿ ಒಂದು ಕೋನ ಇರುವಂತೆ ಸಮಭುಜ ಚಚೌಕೋನವನ್ನು ರಚಿಸಿರಿ.
ರಚನಾ ಕ್ರಮ :
1) ಮೊದಲು ಕೊಟ್ಟ AB ಸರಳ ರೇಖೆ ಯನ್ನು ಎಳೆಯಿರಿ.
2) A B ಯಲ್ಲಿ C ಬಿಂದುವನ್ನು ಗುರ್ತಿಸಿರಿ.
3) ಸೂಕ್ತ ತ್ರಿಜ್ಯದಿಂದ D E ಗಳಲ್ಲಿ ಛೇದಿಸುವಂತೆ C ಕೇಂದ್ರವನ್ನಾಗಿ ಮಾಡಿಕೊಂಡು ಅರ್ಧವೃತ್ತವನ್ನು ತೆಗೆಯಿರಿ.
4) ಸೂಕ್ತ ತ್ರಿಜ್ಯದಿಂದ D E ಕೇಂದ್ರಗಳನ್ನಾಗಿ ಮಾಡಿಕೊಂಡು F ನಲ್ಲಿ ಒಂದನ್ನೊಂದು ಛೇದಿಸುವಂತೆ ಕಂಸಗಳನ್ನು ಎಳೆಯಿರಿ.
5) C F ಕೂಡಿಸಿ ವೃದ್ದಿಸಿರಿ.
6) ಲಂಬದ ಮೇಲೆ ಬೇಕಾದ ಸ್ಥಳದಲ್ಲಿ G ಬಿಂದುವನ್ನು ಗುರ್ತಿಸಿರಿ.
7) C G ತ್ರಿಜ್ಯಕ್ಕಿಂತ ಕಡಿಮೆ ಅಥವಾ ಹೆಚ್ಚು ತ್ರಿಜ್ಯದಿಂದ C G ಕೇಂದ್ರಗಳನ್ನಾಗಿ ಮಾಡಿಕೊಂಡು H ಮತ್ತು I ನಲ್ಲಿ ಒಂದನ್ನೊಂದು ಛೇದಿಸುವಂತೆ ಕಂಸಗಳನ್ನು ಎಳೆಯಿರಿ.
8) CH, HG, GI, IC ಕೂಡಿಸಿರಿ.
33. ಒಂದು ಸರಳರೇಖೆಯ ಅದರಲ್ಲಿಯೇ ಇರುವ C ಬಿಂದುವಿನಲ್ಲಿ ಒಂದು ಕೋನ ಇರುವಂತೆ ಚಚೌಕವನ್ನು ರಚಿಸಿರಿ.
1) ಮೊದಲು A B ಸರಳರೇಖೆಯನ್ನು ಎಳೆಯಿರಿ.
2) A B ಯಲ್ಲಿ C ಬಿಂದುವನ್ನು ಗುರ್ತಿಸಿರಿ
3) ಸೂಕ್ತ ತ್ರಿಜ್ಯದಿಂದ D E ಗಳಲ್ಲಿ ಛೇದಿಸುವಂತೆ C ಕೇಂದ್ರವನ್ನಾಗಿ ಮಾಡಿಕೊಂಡು ಅರ್ಧವೃತ್ತವನ್ನು ತೆಗೆಯಿರಿ.
4) ಸೂಕ್ತ ಸಾಮಾನ್ಯ ತ್ರಿಜ್ಯದಿಂದ D E ಕೇಂದ್ರಗಳನ್ನಾಗಿ ಮಾಡಿಕೊಂಡು F ನಲ್ಲಿ ಒಂದನ್ನೊಂದು ಛೇದಿ ಸುವಂತೆ ಕಂಸಗಳನ್ನು ಎಳೆಯಿರಿ.
5) C F ಕೂಡಿಸಿ ವೃದ್ಧಿಸಿರಿ.
6) ಲಂಬದ ಬೇಕಾದ ಸ್ಥಳದಲ್ಲಿ G ಬಿಂದುವನ್ನು ಗುರ್ತಿಸಿರಿ.
7) GC ತ್ರಿಜ್ಯದಿಂದ G ಕೇಂದ್ರವನ್ನಾಗಿ ಮಾಡಿಕೊಂಡು ವೃತ್ತವನ್ನು ತೆಗೆಯಿರಿ. H ಉಂಟಾಗುವದು.
8) C H ದ್ವಿಭಾಗಿಸಿರಿ ಸೂಕ್ತ ತ್ರಿಜ್ಯದಿಂದ.C H ಕೇಂದ್ರಗಳನ್ನಾಗಿ ಮಾಡಿಕೊಂಡು ಎರಡೂ ಬದಿಗೆ ಒಂದನ್ನೊಂದು ಛೇದಿಸುವಂತೆ ಕಂಸಗಳನ್ನು ಎಳೆಯಿರಿ.
9) ಎರಡೂ ಛೇದಕ ಬಿಂದುಗಳನ್ನು ಕೂಡಿಸಿ ವೃದ್ದಿಸಿರಿ, I ಮತ್ತು J ನಲ್ಲಿ ಛೇದಿಸುವವು.
10) CI, IH, HJ, JC ಕೂಡಿಸಿರಿ.
32. ಒಂದು ಸರಳ ರೇಖೆಯ ಅದರಲ್ಲಿಯೇ ಇರುವ C ಬಿಂದುವಿನಲ್ಲಿ ಒಂದು ಕೋನ ಇರುವಂತ ಸಮದ್ವಿಬಾಹು ತ್ರಿಭುಜವನ್ನು ರಚಿಸಿರಿ.
1) ಮೊದಲು A. B ಸರಳರೇಖೆಯನ್ನು ಎಳೆಯಿರಿ.
2) A B ಯಲ್ಲಿ C ಬಿಂದುವನ್ನು ಗುರ್ತಿ ಸಿರಿ.
3) ಸೂಕ್ತ ತ್ರಿಜ್ಯದಿಂದ D E ಗಳಲ್ಲಿ ಛೇದಿಸುವಂತೆ C ಕೇಂದ್ರವನ್ನಾಗಿ ಮಾಡಿಕೊಂಡು ಅರ್ಧವರ್ತುಳ ವನ್ನು ತೆಗೆಯಿರಿ.
4) ಅಷ್ಟೆ ತ್ರಿಜ್ಯಕ್ಕಿಂತ ಹೆಚ್ಚು ಅಥವಾ ಕಡಿಮೆ ತ್ರಿಜ್ಯದಿಂದ D ಕೇಂದ್ರ ಮಾಡಿ ಕೊಂಡು F ನಲ್ಲಿ ಮತ್ತು E ಕೇಂದ್ರ ಮಾಡಿಕೊಂಡು G ನಲ್ಲಿ ಛೇದಿಸಿರಿ.
5) C F ಕೂಡಿಸಿ ವೃದ್ದಿಸಿರಿ.
6) C G ಕೂಡಿಸಿ ವೃದ್ಧಿಸಿರಿ.
7) ಅನುಕೂಲ ತ್ರಿಜ್ಯದಿಂದ C ಕೇಂದ್ರ ಮಾಡಿಕೊಂಡು H ಮತ್ತುI ನಲ್ಲಿ ಛೇದಿಸಿರಿ.
8) H Iಕೂಡಿಸಿರಿ.
31. ಒಂದು ಸರಳರೇಖೆಯ ಅದರಲ್ಲಿಯೇ ಇರುವ C ಬಿಂದುವಿನಲ್ಲಿ ಒಂದು ಕೋನ ಇರುವಂತೆ ಸಮಬಾಹು ತ್ರಿಭುಜವನ್ನು ರಚಿಸಿರಿ.
ರಚನಾ ಕ್ರಮ :
1) ಮೊದಲು A B ರೇಖೆಯನ್ನು ಎಳೆಯಿರಿ.
2) A B ಯಲ್ಲಿ C ಬಿಂದುವನ್ನು ಗುರ್ತಿಸಿರಿ.
3) ಸೂಕ್ತತ್ರಿಜ್ಯದಿಂದ D ನಲ್ಲಿ ಛೇದಿಸುವ೦ತೆ C ಕೇ೦ದ್ರವನ್ನಾಗಿ ಮಾಡಿಕೊಂಡು ಕಂಸವನ್ನು ಎಳೆಯಿರಿ.
4) ಅಷ್ಟೇ ತ್ರಿಜ್ಯದಿಂದ D ಕೇಂದ್ರ ಮಾಡಿಕೊಂಡು E ನಲ್ಲಿ ಮತ್ತು E ಕೆಂದ್ರಮಾಡಿಕೊಂಡು F ನಲ್ಲಿ ಛೇದಿಸಿರಿ.
5) C E ಕೂಡಿಸಿ ವೃದ್ಧಿಸಿರಿ.
6) C F ಕೂಡಿಸಿ ವೃದ್ಧಿಸಿರಿ.
7) ಅನುಕೂಲ ತ್ರಿಜ್ಯದಿಂದ C ಕೇಂದ್ರವನ್ನಾಗಿ ಮಾಡಿಕೊಂಡು G ಮತ್ತು H ನಲ್ಲಿ ಛೇದಿಸಿರಿ.
8) G H ಕೂಡಿಸಿರಿ.
30. ಸರಳರೇಖೆಯ ಅದರಲ್ಲಿಯೇ ಇರುವ C ಬಿಂದುವಿಗೆ ಸ್ಪರ್ಶವಾಗುವಂತೆ ವೃತ್ತವನ್ನು ರಚಿಸಿರಿ.
ರಚನಾ ಕ್ರಮ :
1) ಮೊದಲು A B ಸರಳ ರೇಖೆಯನ್ನು ಎಳೆಯಿರಿ.
2) A B ಯಲ್ಲಿ ಬಿಂದುವನ್ನು ಗುರ್ತಿ ಸಿರಿ.
3) ಸೂಕ್ತ ತ್ರಿಜ್ಯದಿಂದ D E ಗಳಲ್ಲಿ ಛೇದಿಸುವಂತೆ C ಕೇಂದ್ರವನ್ನಾಗಿ ಮಾಡಿ ಕೊಂಡು ಅರ್ಧವೃತ್ತವನ್ನು ತೆಗೆಯಿರಿ.
4) ಸೂಕ್ತ ಸಾಮಾನ್ಯ ತ್ರಿಜ್ಯದಿಂದ D E ಕೇಂದ್ರಗಳನ್ನಾಗಿ ಮಾಡಿಕೊಂಡು F ನಲ್ಲಿ ಒಂದನ್ನೊಂದು ಛೇದಿಸುವಂತೆ ಕಂಸಗಳನ್ನು ಎಳೆಯಿರಿ.
5) C F ಕೂಡಿಸಿ ವೃದ್ಧಿಸಿರಿ.
6) ಲಂಬದ ಬೇಕಾದ ಸ್ಥಳದಲ್ಲಿ G ಬಿಂದುವನ್ನು ಗುರ್ತಿಸಿರಿ.
7) G C ತ್ರಿಜ್ಯದಿಂದ G ಕೇಂದ್ರವನ್ನಾಗಿ ಮಾಡಿಕೊಂಡು ವೃತ್ತವನ್ನು ರಚಿಸಿರಿ.
29. ಸರಳರೇಖೆಯ ಮೇಲೆ ಏಕಾದಶ (11) ಭುಜಾಕೃತಿಯನ್ನು ರಚಿಸಿರಿ. ಅಥವಾ ಒಂದು ಏಕಾದಶಭುಜಾಕೃತಿಯನ್ನು ರಚಿಸಿರಿ.
ರಚನಾ ಕ್ರಮ :
1) ಮೊದಲು A B ಸರಳ ರೇಖೆಯನ್ನು ಎಳೆಯಿರಿ.
2) A B ದ್ವಿಭಾಗಿಸಿ, CD ಮದ್ಯಗಾಮೀ ಲಂಬ ತೆಗೆಯಿರಿ.
3) A B ತ್ರಿಜ್ಯದಿಂದ A ಕೇಂದ್ರವನ್ನಾಗಿ ಮಾಡಿಕೊಂಡು B E
ಕಂಸವನ್ನು ಎಳೆಯಿರಿ.
4) B E ಕಂಸದಲ್ಲಿ ಆರು ಸಮ ಭಾಗಗಳನ್ನು ಮಾಡಿರಿ. ( ಕೋನಮಾಪಕ ಸಹಾಯದಿಂದ A ಕೇಂದ್ರವನ್ನಾಗಿ ಮಾಡಿಕೊಂಡು B E ಕಂಸದಲ್ಲಿ 10° ದಂತೆ ಆರು
ಬಿಂದುಗಳನ್ನು ಗುರುತಿಸಿರಿ).
5) A ಕೇಂದ್ರಕ್ಕೆ ಆರೂ ಕಿರಣ ಬಿಂದುಗಳನ್ನು ಕೂಡಿಸಿರಿ.
6) E B ಕಂಸದ ಐದು ಭಾಗ (5/6) ಅಂದರೆ E 5 ತ್ರಿಜ್ಯದಿಂದ E ಕೇಂದ್ರವನ್ನಾಗಿ ಮಾಡಿ ಕೊಂಡು F ನಲ್ಲಿ ಛೇದಿಸಿರಿ.
7) F ಕೇಂದ್ರವನ್ನಾಗಿ ಮಾಡಿಕೊಂಡು A ದಿಂದ B ವರೆಗೆ ವರ್ತುಳ ಕಂಸವನ್ನು ತೆಗೆಯಿರಿ.
8) A B ತ್ರಿಜ್ಯದಿಂದ ವೃತ್ತ ಕಂಸದಲ್ಲಿ G H I J K L M N P ಗಳಲ್ಲಿ ಛೇದಿಸಿರಿ.
9) BG, GH, HI, IJ, JK, KL, LM, MN, NP, PAಕೂಡಿಸಿರಿ.
28. ಸರಳರೇಖೆಯ ಮೇಲೆ ದಶ (10 ) ಭುಜಾಕೃತಿಯನ್ನು ರಚಿಸಿರಿ. ಅಥವಾ ಒಂದು ದಶಭುಜಾಕೃತಿಯನ್ನು ರಚಿಸಿರಿ.
ರಚನಾ ಕ್ರಮ :
1) ಮೊದಲು A B ಸರಳ ರೇಖೆಯನ್ನು ಎಳೆಯಿರಿ.
2) A B ದ್ವಿಭಾಗಿಸಿ, C D ಮಧ್ಯಗಾಮಿ ಲಂಬ ತೆಗೆಯಿರಿ.
3) A B ತ್ರಿಜ್ಯದಿಂದ A ಕೇಂದ್ರ ವನ್ನಾಗಿ ಮಾಡಿಕೊಂಡು B E ಕಂಸವನ್ನು ಎಳೆಯಿರಿ.
4) B E ಕಂಸದಲ್ಲಿ ಆರು ಸಮ ಭಾಗಗಳನ್ನು ಮಾಡಿರಿ. ( ಕೋನಮಾಪ ಸಹಾಯದಿಂದ A ಕೇಂದ್ರವನ್ನಾಗಿ ಮಾಡಿ ಕೊಂಡು B E ಕಂಸದಲ್ಲಿ 10° ದಂತೆ ಆರು ಬಿಂದುಗಳನ್ನು ಗುರ್ತಿಸಿರಿ.
5) A ಕೇಂದ್ರಕ್ಕೆ ಆರೂ ಕಿರಣ ಬಿಂದುಗಳನ್ನು ಕೂಡಿಸಿರಿ.
6) E B ಕಂಸದ ನಾಲ್ಕು ಭಾಗ ( 4/6) ಅಂದರೆ E4 ತ್ರಿಜ್ಯದಿಂದ E ಕೇಂದ್ರವನ್ನಾಗಿ ಮಾಡಿಕೊಂಡು F ನಲ್ಲಿ ಛೇದಿಸಿರಿ.
7) F ಕೇಂದ್ರವನ್ನಾಗಿ ಮಾಡಿ ಕೊಂಡು A ದಿಂದ B ವರೆಗೆ ವೃತ್ತ ಕಂಸವನ್ನು ತೆಗೆಯಿರಿ.
8A B ತ್ರಿಜ್ಯದಿಂದ ವೃತ್ತ ಕಂಸದಲ್ಲಿ G H I J K L M N ಗಳಲ್ಲಿ ಛೇದಿಸಿರಿ.
9) BC, GH, HI, JK, KL, LM, MN, NA ಕೂಡಿಸಿರಿ.
27. ಸರಳರೇಖೆಯ ಮೇಲೆ ನವ( 9 ) ಭುಜಾಕೃತಿಯನ್ನು ರಚಿಸಿರಿ. ಅಥವಾ ಒಂದು ನವ ಭುಜಾಕೃತಿಯನ್ನು ರಚಿಸಿರಿ.
ರಚನಾ ಕ್ರಮ :
1) ಮೊದಲು A B ಸರಳ ರೇಖೆಯನ್ನು ಎಳೆಯಿರಿ.
2) A B ದ್ವಿಭಾಗಿಸಿ, ಮಧ್ಯಗಾಮೀ ಲಂಬ ತೆಗೆಯಿರಿ.
3) A B ತ್ರಿಜ್ಯದಿಂದ A ಕೇಂದ್ರವನ್ನಾಗಿ ಮಾಡಿಕೊಂಡು B E ಕಂಸವನ್ನು ಎಳೆಯಿರಿ.
4) B E ಕಂಸದಲ್ಲಿ ಆರು ಸಮಭಾಗಗಳನ್ನು ಮಾಡಿರಿ. ( ಕೋನಮಾಪಕ ಸಹಾಯದಿಂದ A ಕೇಂದ್ರವನ್ನಾಗಿ ಮಾಡಿಕೊಂಡು B E ಕಂಸದಲ್ಲಿ 10°ದಂತೆ ಆರು ಬಿಂದುಗಳನ್ನು ಗುರ್ತಿಸಿರಿ.)
5) A ಕೇಂದ್ರಕ್ಕೆ ಆರೂ ಕಿರಣ ಬಿಂದುಗಳನ್ನು ಕೂಡಿಸಿರಿ.
6) E B ಕಂಸದ ಮೂರುಭಾಗ (3/6) ಅಂದರೆ E 3 ತ್ರಿಜ್ಯದಿಂದ E ಕೇಂದ್ರ ಮಾಡಿ ಕೊಂಡು F ನಲ್ಲಿ ಛೇದಿಸಿರಿ.
7) F ಕೇಂದ್ರವನ್ನಾಗಿ ಮಾಡಿಕೊಂಡು A ದಿಂದ B ವರೆಗೆ ವೃತ್ತ ಕಂಸವನ್ನು ತೆಗೆಯಿರಿ.
8) A B ತ್ರಿಜ್ಯದಿಂದ ವೃತ್ತ ಕಂಸದಲ್ಲಿ G H I J K L M ಗಳಲ್ಲಿ ಛೇದಿಸಿರಿ.
9) BG, GH, HI, IJ, JK, KL, LM, MA ಕೂಡಿಸಿರಿ.
26. ಸರಳರೇಖೆಯ ಮೇಲೆ ಅಷ್ಟ (8)ಭುಜಾಕೃತಿಯನ್ನು ರಚಿಸಿರಿ. ಅಥವಾ ಒಂದು ಅಷ್ಟಭುಜಾಕೃತಿಯನ್ನು ರಚಿಸಿರಿ.
1) ಮೊದಲು A B ಸರಳರೇಖೆಯನ್ನು ಎಳೆಯಿರಿ.
2) A B ದ್ವಿಭಾಗಿಸಿ, C D ಮಧ್ಯಗಾಮೀ ಲಂಬ ತೆಗೆಯಿರಿ.
3) A B ತ್ರಿಜ್ಯದಿಂದ A ಕೇಂದ್ರ ವನ್ನಾಗಿ ಮಾಡಿಕೊಂಡು B E ಕಂಸವನ್ನು ಎಳೆಯಿರಿ.
4) B E ಕಂಸದಲ್ಲಿ ಆರು ಸಮ ಭಾಗಗಳನ್ನು ಮಾಡಿರಿ. ( ಕೋನಮಾಪಕ ಸಹಾಯದಿಂದ A ಕೇಂದ್ರ ಮಾಡಿಕೊಂಡು B E - ಕಂಸದಲ್ಲಿ 10° ದಂತೆ ಆರು ಬಿಂದುಗಳನ್ನು ಗುರ್ತಿಸಿರಿ.
5) A B ಕೇಂದ್ರಕ್ಕೆ ಆರೂ ಕಿರಣ ಬಿಂದುಗಳನ್ನು ಕೂಡಿಸಿರಿ.
6) BE ಕಂಸದ ಎರುಡು ಭಾಗ ( 2/6) ಅಂದರೆ E 2 ತ್ರಿಜ್ಯದಿಂದ E ಕೇಂದ್ರವನ್ನಾಗಿ ಮಾಡಿಕೊಂಡು F ನಲ್ಲಿ ಛೇದಿಸಿರಿ.
7) F ಕೇಂದ್ರವನ್ನಾಗಿ ಮಾಡಿಕೊಂಡು A ದಿಂದ B ವರೆಗೆ ವೃತ್ತ ಕಂಸವನ್ನು ತೆಗೆ ಯಿರಿ.
8) A B ತ್ರಿಜ್ಯದಿಂದ ವೃತ್ತಕಂಸದಲ್ಲಿ G H I J K L ಗಳಲ್ಲಿ ಛೇದಿಸಿರಿ.
9) BG, GH, HI, IJ, JK, KL, LA ಕೂಡಿಸಿರಿ.
25. ಸರಳರೇಖೆಯ ಮೇಲೆ ಸಪ್ತ (7) ಭುಜಾಕೃತಿಯನ್ನು ರಚಿಸಿರಿ ಅಥವಾ ಒಂದು ಸಪ್ತಭುಜಾಕೃತಿಯನ್ನು ರಚಿಸಿರಿ.
ರಚನಾ ಕ್ರಮ :
1) ಮೊದಲು AB ಸರಳ ರೇಖೆಯನ್ನು ಎಳೆಯಿರಿ.
2) A B ದ್ವಿಭಾಗಿಸಿ, C D ಮಧ್ಯಭಾಗ ಲಂಬ ತೆಗೆಯಿರಿ.
3) A B ತ್ರಿಜ್ಯದಿಂದ A ಕೇಂದ್ರ
ವನ್ನಾಗಿ ಮಾಡಿಕೊಂಡು B E ಕಂಸವನ್ನು ಎಳೆಯಿರಿ.
4) B E ಕಂಸದಲ್ಲಿ ಆರು ಸಮ ಭಾಗಗಳನ್ನು ಮಾಡಿರಿ. ( ಕೋನಮಾಪಕ ಸಹಾಯದಿಂದ A ಕೇಂದ್ರ ಮಾಡಿ ಕೊಂಡು B E ಕಂಸದಲ್ಲಿ 10° ದಂತೆ ಆರು ಬಿಂದುಗಳನ್ನು ಗುರ್ತಿಸಿರಿ.
5) A ಕೇಂದ್ರಕ್ಕೆ ಆರೂ ಕಿರಣ ಬಿಂದುಗಳನ್ನು ಕೂಡಿಸಿರಿ.
6) E B ಕಂಸದ ಬಿಂದು ಭಾಗ (1/6) ಅಂದರೆ E1 ತ್ರಿಜ್ಯದಿಂದ E ಕೇಂದ್ರ ಮಾಡಿಕೊಂಡು F ನಲ್ಲಿ ಛೇದಿಸಿರಿ.
7) F ಕೇಂದ್ರವನ್ನಾಗಿ ಮಾಡಿಕೊಂಡು A ದಿಂದ B ವರೆಗೆ ವರ್ತುಳ ಕಂಸವನ್ನು ತೆಗೆ ಯಿರಿ.
8) A B ತ್ರಿಜ್ಯದಿಂದ ವರ್ತುಳ ಕಂಸದಲ್ಲಿ G H I J K ಗಳಲ್ಲಿ ಛೇದಿಸಿರಿ.
9) BG, GH, HI, IJ, JK, KA ಕೂಡಿಸಿರಿ.
24. ಸರಳರೇಖೆಯ ಮೇಲೆ ಷಡ್ಭುಜಾಕೃತಿಯನ್ನು ರಚಿಸಿರಿ ಅಥವಾ ಒಂದು ಷಡ್ಭುಜಾಕೃತಿಯನ್ನು ರಚಿಸಿರಿ.
ರಚನಾ ಕ್ರಮ :
1) ಮೊದಲು AB ಸರಳ ರೇಖೆಯನ್ನು ಎಳೆಯಿರಿ.
2) A B ತ್ರಿಜ್ಯದಿಂದ A B ಕೇಂದ್ರಗಳನ್ನಾಗಿ ಮಾಡಿಕೊಂಡು ೦ ನಲ್ಲಿ ಒಂದನ್ನೊಂದು ಛೇದಿಸುವಂತೆ ಕಂಸಗಳನ್ನು ಎಳೆಯಿರಿ.
3) O ಕೇಂದ್ರವನ್ನಾಗಿಮಾಡಿಕೊಂಡು A ದಿಂದ B ವರೆಗೆ ವರ್ತುಳ ಕಂಸವನ್ನು ತೆಗೆಯಿರಿ.
4) A B ತ್ರಿಜ್ಯದಿಂದ ವರ್ತುಳ ಕಂಸ ದಲ್ಲಿ C D E Fಗಳಲ್ಲಿ ಛೇದಿಸಿರಿ.
5) BC, CD, DE, EF, FA ಕೂಡಿಸಿರಿ.
23. ಸರಳರೇಖೆಯ ಮೇಲೆ ಪಂಚಭುಜಾ ಕೃತಿಯನ್ನು ರಚಿಸಿರಿ. ಅಥವಾ ಒಂದು ಪಂಚಭುಜಾಕೃತಿಯನ್ನು ರಚಿಸಿರಿ.
ರಚನಾ ಕ್ರಮ:
1) ಮೊದಲು AB ಸರಳ ರೇಖೆಯನ್ನು ಎಳೆಯಿರಿ.
2) A B ತ್ರಿಜ್ಯದಿಂದ A B ಕೇಂದ್ರ ಗಳನ್ನಾಗಿ ಮಾಡಿಕೊಂಡು C ನಲ್ಲಿ ಒಂದನ್ನೊಂದು ಛೇದಿ ಸುವಂತೆ ಕಂಸವನ್ನು ಎಳೆಯಿರಿ.
3) A ಕೇಂದ್ರಮಾಡಿಕೊಂಡು B C ಕಂಸವನ್ನು ತೆಗೆಯಿರಿ.
4) C D ಮಧ್ಯದಲ್ಲಿ ಲಂಬ ತೆಗೆಯಿರಿ.
5) B C ಕಂಸದಲ್ಲಿ ಆರು ಸಮ ಭಾಗಗಳನ್ನು
ಮಾಡಿರಿ ( ಕೋನ ಮಾಪಕ ಸಹಾಯದಿಂದ A ಕೇಂದ್ರ ಮಾಡಿಕೊಂಡು 10°ದಂತೆ ಆರು ಬಿಂದುಗಳನ್ನು ಗುರ್ತಿಸಿರಿ).
6) A ಕೇಂದ್ರಕ್ಕೆ ಆರೂ ಕಿರಣ ಬಿಂದುಗಳನ್ನು ಕೂಡಿಸಿರಿ.
7) C B ಕಂಸದ ಒಂದು ಭಾಗ ಅಂದರೆ (1/6) C1 ತ್ರಿಜ್ಯದಿಂದ C ಕೇಂದ್ರವನ್ನಾಗಿ ಮಾಡಿ ಕೊಂಡು E ನಲ್ಲಿ ಛೇದಿಸಿರಿ.
8) E ಕೇಂದ್ರವನ್ನಾಗಿಮಾಡಿಕೊಂಡು A ದಿಂದ B ವರಗೆ ವರ್ತುಳ ಕಂಸವನ್ನು ತೆಗೆಯಿರಿ.
9) A B ತ್ರಿಜ್ಯದಿಂದ B ಕೇಂದ್ರ ಮಾಡಿಕೊಂಡು F ನಲ್ಲಿ F ಕೇಂದ್ರ ಮಾಡಿಕೊಂಡು G ನಲ್ಲಿ G ಕೇಂದ್ರ ಮಾಡಿಕೊಂಡು H ನಲ್ಲಿ ಛೇದಿಸಿರಿ.
10) BF, FG, GH. HA ಕೂಡಿಸಿರಿ.
22. ಸರಳರೇಖೆಯ ಮೇಲೆ ಸಮಾಂತರ ದ್ವಿಬಾಹು ಚೌಕೋನವನ್ನು ರಚಿಸಿರಿ. ಅಥವಾ ಒಂದು ಸಮಾಂತರ ದ್ವಿಬಾಹು ಚೌಕೋನವನ್ನು ರಚಿಸಿರಿ.
ರಚನಾ ಕ್ರಮ :
1) ಮೊದಲು A B ರೇಖೆಯನ್ನು ಎಳೆಯಿರಿ.
2) A B ಯಲ್ಲಿ B ಸಮೀಪ C ಬಿಂದುವನ್ನು ಗುರ್ತಿಸಿರಿ.
3) ಸೂಕ್ತ ತ್ರಿಜ್ಯದಿಂದ D ಛೇದಿಸುವ೦ತೆ A ಕೇಂದ್ರವನ್ನಾಗಿ ಮಾಡಿಕೊಂಡು ಕಂಸವನ್ನು ಎಳೆಯಿರಿ.
4) ಅಷ್ಟೇ ತ್ರಿಜ್ಯದಿಂದ D ಕೇಂದ್ರ ಮಾಡಿಕೊಂಡು E ನಲ್ಲಿ ಮತ್ತು E ಕೇಂದ್ರ ಮಾಡಿ ಕೊಂಡು F ನಲ್ಲಿ ಛೇದಿಸಿರಿ.
5) ಸೂಕ್ತ ಸಾಮಾನ್ಯ ತ್ರಿಜ್ಯದಿಂದ E F ಕೇಂದ್ರಗಳನ್ನಾಗಿ ಮಾಡಿಕೊಂಡು G ನಲ್ಲಿ ಒಂದ ನ್ನೊಂದು ಛೇದಿಸುವಂತೆ ಕಂಸಗಳನ್ನು ಎಳೆಯಿರಿ.
6) AG ಕೂಡಿಸಿ ವೃದ್ಧಿಸಿರಿ. ಕೇಂದ್ರದಿಂದ I ನಲ್ಲಿ ಛೇದಿಸಿರಿ.
7) C ಬಿಂದುವಿನಲ್ಲಿ ಲಂಬ ತೆಗೆಯಿರಿ.
8) ಅನುಕೂಲ ತ್ರಿಜ್ಯದಿಂದ A ಕೇಂದ್ರದಿಂದ H ನಲ್ಲಿ ಮತ್ತು C ಕೇಂದ್ರದಿಂದ I ನಲ್ಲಿ ಛೇದಿಸಿರಿ.
9) H I ಮತ್ತು I B ಕೂಡಿಸಿರಿ.
21. ಸರಳರೇಖೆಯ ಮೇಲೆ ಪತಂಗಾಕೃತಿಯನ್ನು ರಚಿಸಿರಿ. ಅಥವಾ ಒಂದು ಪತಂಗಾಕೃತಿಯನ್ನು ರಚಿಸಿರಿ.
ರಚನಾ ಕ್ರಮ
1) ಮೊದಲು AB ಸರಳ ರೇಖೆಯನ್ನು ಎಳೆಯಿರಿ.
2) A B ತ್ರಿಜ್ಯದಿಂದ A ಕೇಂದ್ರವನ್ನಾಗಿ ಮಾಡಿಕೊಂಡು ಕಂಸವನ್ನು ಎಳೆಯಿರಿ.
3) A B ಕ್ಕಿಂತ ಕಡಿಮೆ ತ್ರಿಜ್ಯದಿಂದ B ಕೇಂದ್ರಮಾಡಿಕೊಂಡು C ನಲ್ಲಿ ಛೇದಿಸಿರಿ.
4) AC ಕೂಡಿಸಿರಿ.
5) B C ಕ್ಕಿಂತ ಕಡಿಮೆ ತ್ರಿಜ್ಯದಿಂದ B C ಕೇಂದ್ರಗಳನ್ನಾಗಿಮಾಡಿಕೊಂಡು D ನಲ್ಲಿ ಒಂದನ್ನೊಂದು ಛೇದಿಸುವಂತೆ ಕಂಸಗಳನ್ನು ಎಳೆಯಿರಿ.
6) BD ಮತ್ತು CD ಕೂಡಿಸಿರಿ.
20. ಸರಳರೇಖೆಯ ಮೇಲೆ ಸಮಪ್ರತಿಭುಜ ಚೌಕೋನವನ್ನು ರಚಿಸಿರಿ. ಅಥವಾ
ಒಂದು ಸಮಪ್ರತಿಭುಜ ಚೌಕೋನವನ್ನು ರಚಿಸಿರಿ.
ರಚನಾ ಕ್ರಮ :
1) ಮೊದಲು A B ರೇಖೆಯನ್ನು ಎಳೆಯಿರಿ.
2) ಸೂಕತ್ರಿಜ್ಯದಿಂದ C ನಲ್ಲಿ ಛೇದಿಸುವಂತೆ A ಕೇಂದ್ರವನ್ನಾಗಿ ಮಾಡಿಕೊಂಡು ಕಂಸವನ್ನು ಎಳೆಯಿರಿ.
3) ಅಷ್ಟೇ ತ್ರಿಜ್ಯದಿಂದ Cಕೇಂದ್ರ ಮಾಡಿಕೊಂಡು D ನಲ್ಲಿ ಛೇದಿಸಿರಿ.
4) AD ಕೂಡಿಸಿ ವೃದ್ಧಿಸಿರಿ.
5) A B ಕ್ಕಿಂತ ಕಡಿಮೆ ಅಥವಾ ಹೆಚ್ಚು ತ್ರಿಜ್ಯದಿಂದ A ಕೇಂದ್ರದಿಂದ E ನಲ್ಲಿ ಛೇದಿಸಿರಿ.
6) A E ತ್ರಿಜ್ಯದಿಂದ B ಕೇಂದ್ರಮಾಡಿಕೊಂಡು ಮೇಲ್ಬದಿಗೆ ಕಂಸವನ್ನು ಎಳೆಯಿರಿ.
6) A B ತ್ರಿಜ್ಯದಿಂದ E ಕೇಂದ್ರಮಾಡಿಕೊಂಡು ಕಂಸವನ್ನು ಎಳೆಯಲಾಗಿ, F ನಲ್ಲಿ ಛೇದಿಸುವದು.
8) B F ಮತ್ತು E F ಕೂಡಿಸಿರಿ.
19. ಸರಳರೇಖೆಯ ಮೇಲೆ ಆಯತಾಕೃತಿಯನ್ನು ರಚಿಸಿರಿ.
ಅಥವಾ ಒಂದು ಆಯಾತಾಕೃತಿಯನ್ನು ರಚಿಸಿರಿ.
ರಚನಾ ಕ್ರಮ:
1) ಮೊದಲು A B ಸರಳ
ರೇಖೆಯನ್ನು ಎಳೆಯಿರಿ.
2) ಸೂಕ್ತ ತ್ರಿಜ್ಯದಿಂದ C ನಲ್ಲಿ ಛೇದಿಸುವಂತೆ A ಕೇಂದ್ರವನ್ನಾಗಿ ಮಾಡಿಕೊಂಡು ಕಂಸವನ್ನು ಎಳೆ ಯಿರಿ.
3) ಅಷ್ಟೇ ತ್ರಿಜ್ಯದಿಂದ C ಕೇಂದ್ರ ಮಾಡಿಕೊಂಡು D ನಲ್ಲಿ ಮತ್ತು D ಕೇಂದ್ರ ಮಾಡಿ ಕೊಂಡು E ನಲ್ಲಿ
ಛೇದಿಸಿರಿ.
4) ಸೂಕ್ತ ಸಾಮಾನ್ಯ ತ್ರಿಜ್ಯದಿಂದ D E ಕೇಂದ್ರಗಳನ್ನಾಗಿ ಮಾಡಿ. ಕೊಂಡು F ನಲ್ಲಿ ಒಂದನ್ನೊಂದು ಛೇದಿಸುವಂತೆ ಕಂಸಗಳನ್ನು ಎಳೆ ಯಿರಿ.
5) A ಕೂಡಿಸಿ ವೃದ್ಧಿಸಿರಿ.
6) AB ಕ್ಕಿಂತ ಕಡಿಮೆ ಅಥವಾ ಹೆಚ್ಚು ತ್ರಿಜ್ಯದಿಂದ A ಕೇಂದ್ರದಿಂದ G ನಲ್ಲಿ ಛೇದಿಸಿರಿ.
7) A G ತ್ರಿಜ್ಯದಿಂದ B ಕೇಂದ್ರದಿಂದ ಮೇಲ್ಪದಿಗೆ ಒಂದು ಕಂಸವನ್ನು ಎಳೆಯಿರಿ.
8) A B ತ್ರಿಜ್ಯದಿಂದ G ಕೇಂದ್ರದಿಂದ ಕಂಸವನ್ನು ಎಳೆಯಿರಿ. H ನಲ್ಲಿ ಛೇದಿಸುವದು.
9) B H ಮತ್ತು G H ಕೂಡಿಸಿರಿ.
18. ಸರಳರೇಖೆಯ ಮೇಲೆ ಸಮಬಾಹು ಚೌಕೋನ (ವಜ್ರಾಕೃತಿ) ರಚಿಸಿರಿ. ಅಥವಾ ಒಂದು ಸಮಬಾಹು ಚೌಕೋನ (ವಜ್ರಾಕೃತಿ) ರಚಿಸಿರಿ.
ರಚನಾ ಕ್ರಮ :
1) ಮೊದಲು A B ಸರಳ ರೇಖೆಯನ್ನು ಎಳೆಯಿರಿ.
2) ಸೂಕ್ತ ತ್ರಿಜ್ಯದಿಂದ C ನಲ್ಲಿ ಛೇದಿಸುವಂತೆ A ಕೇಂದ್ರವನ್ನಾಗಿ ಮಾಡಿ ಕೊಂಡು ಕಂಸವನ್ನು ಎಳೆ ಯಿರಿ.
3) ಅಷ್ಟೇ ತ್ರಿಜ್ಯದಿಂದ C ಕೇಂದ್ರ
ಮಾಡಿಕೊಂಡು D ನಲ್ಲಿ ಛೇದಿಸಿರಿ. 4) A D ಕೂಡಿಸಿ ವೃದ್ಧಿಸಿರಿ.
5) AB ತ್ರಿಜ್ಯದಿಂದ A ಕೇಂದ್ರ ದಿಂದ E ನಲ್ಲಿ ಛೇದಿಸಿರಿ.
6) ಅಷ್ಟೇ ತ್ರಿಜ್ಯದಿಂದ E B ಕೇಂದ್ರಗಳನ್ನಾಗಿ ಮಾಡಿಕೊಂಡು F ನಲ್ಲಿ ಒಂದನ್ನೊಂದು ಛೇದಿಸುವಂತೆ ಕಂಸಗಳನ್ನು ಎಳೆಯಿರಿ.
7) EF ಮತ್ತು FB ಕೂಡಿಸಿರಿ.
17. ಸರಳ ರೇಖೆಯ ಮೇಲೆ ಚೌಕವನ್ನು ರಚಿಸಿರಿ. ಅಥವಾ ಒಂದು ಚಚೌಕವನ್ನು ರಚಿಸಿರಿ.
1) ಮೊದಲು A B ಸರಳರೇಖೆಯನ್ನು ಎಳೆಯಿರಿ.
2) ಸೂಕ್ತತ್ರಿಜ್ಯದಿಂದ C ನಲ್ಲಿ ಛೇದಿಸುವಂತೆ A ಕೇಂದ್ರವನ್ನಾಗಿ ಮಾಡಿಕೊಂಡು ಕಂಸವನ್ನು ಎಳೆಯಿರಿ.
3) ಅಷ್ಟೇ ತ್ರಿಜ್ಯದಿಂದ C ಕೇಂದ್ರ ಮಾಡಿಕೊಂಡು D ನಲ್ಲಿ ಮತ್ತು D ಕೇಂದ್ರಮಾಡಿಕೊಂಡು E ನಲ್ಲಿ ಛೇದಿಸಿರಿ.
4) ಸೂಕ್ತ ಸಾಮಾನ್ಯ ತ್ರಿಜ್ಯದಿಂದ D E ಕೇಂದ್ರಗಳನ್ನಾಗಿ ಮಾಡಿಕೊಂಡು F ನಲ್ಲಿ ಒಂದನ್ನೊಂದು ಛೇದಿಸುವಂತೆ ಕಂಸಗಳನ್ನು ಎಳೆಯಿರಿ.
5) A F ಕೂಡಿಸಿ ವೃದ್ದಿಸಿರಿ.
6) A B ತ್ರಿಜ್ಯದಿಂದ A ಕೇಂದ್ರದಿಂದ G ನಲ್ಲಿ ಛೇದಿಸಿರಿ. 7) ಅಷ್ಟೇ ತ್ರಿಜ್ಯದಿಂದ G B ಕೇಂದ್ರಗಳನ್ನಾಗಿ ಮಾಡಿಕೊಂಡು H ನಲ್ಲಿ ಒಂದನೋಂದು ಛೇದಿಸುವಂತೆ ಕಂಸಗಳನ್ನು ಎಳೆಯಿರಿ.
8) G H ಮತ್ತು H B ಕೂಡಿಸಿರಿ.
16. ಒಂದು ಸರಳರೇಖೆಯ ಮೇಲೆ ವಿಷಮಬಾಹು ತ್ರಿಭುಜವನ್ನು ರಚಿಸಿರಿ ಅಥವಾ ಒಂದು ವಿಷಮಬಾಹು ತ್ರಿಭುಜವನ್ನು ರಚಿಸಿರಿ.
ರಚನಾ ಕ್ರಮ:
1) ಮೊದಲು 8 ಸೆಂ.ಮೀ. AB ಸರಳರೇಖೆಯನ್ನು ಎಳೆಯಿರಿ.
2) 9 ಸೆಂ. ಮೀ. ತ್ರಿಜ್ಯದಿಂದ A ಕೇಂದ್ರವನ್ನಾಗಿ ಮಾಡಿಕೊಂಡು ಮೇಲ್ಬದಿಗೆ ಒಂದು ಕಂಸವನ್ನು ಎಳೆಯಿರಿ.
3) 10 ಸೆಂ. ಮೀ. ತ್ರಿಜ್ಯದಿಂದ B ಕೇಂದ್ರವನ್ನಾಗಿ ಮಾಡಿಕೊಂಡು ಮೇಲ್ಪದಿಗೆ ಮತ್ತೊಂದು ಕಂಸ ವನ್ನು ಎಳೆಯಿರಿ, C ನಲ್ಲಿ ಛೇದಿಸುವದು.
4) AC ಮತ್ತು BC ಕೂಡಿಸಿರಿ.
15. ಸರಳರೇಖೆಯ ಮೇಲೆ ಸಮದ್ವಿಬಾಹು ತ್ರಿಕೋನವನ್ನು ರಚಿಸಿರಿ. ಅಥವಾ ಒಂದು ಸಮದ್ವಿಬಾಹು ತ್ರಿಕೋನವನ್ನು ರಚಿಸಿರಿ.
ರಚನಾ ಕ್ರಮ :
1) ಮೊದಲು AB ಸರಳರೇಖೆಯನ್ನು ಎಳೆಯಿರಿ.
2) AB ಕ್ಕಿಂತ ಕಡಿಮೆ ಅಥವಾ ಹೆಚ್ಚು ತ್ರಿಜ್ಯದಿಂದ A ಕೇಂದ್ರವನ್ನಾಗಿಮಾಡಿಕೊಂಡು ಮೇಲ್ಪದಿಗೆ ಒಂದು ಕಂಸವನ್ನು ಎಳೆಯಿರಿ.
3) ಅಷ್ಟೇ ತ್ರಿಜ್ಯದಿಂದ B ಕೇಂದ್ರವನ್ನಾಗಿ ಮಾಡಿಕೊಂಡು ಮೇಲ್ಪ ದಿಗೆ ಮತ್ತೊಂದು ಕಂಸವನ್ನು ಎಳೆ ಯಿರಿ, C ನಲ್ಲಿ ಛೇದಿಸುವುದು.
4) AC ಮತ್ತು BC ಕೂಡಿಸಿರಿ.
14. ಸರಳರೇಖೆಯ ಮೇಲೆ ಸಮಭುಜ ತ್ರಿಕೋನವನ್ನು ರಚಿಸಿರಿ. ಅಥವಾ ಒಂದು ಸಮಭುಜ ತ್ರಿಕೋನವನ್ನು ರಚಿಸಿರಿ.
1) ಮೊದಲು A B ಸರಳರೇಖೆಯನ್ನು ಎಳೆಯಿರಿ.
2) A B ತ್ರಿಜ್ಯದಿಂದ A ಕೇಂದ್ರವನ್ನಾಗಿ ಮಾಡಿಕೊಂಡು ಮೇಲ್ಪದಿಗೆ ಕಂಸವನ್ನು ಎಳೆಯಿರಿ.
3) ಅಷ್ಟೇ ತ್ರಿಜ್ಯದಿಂದ B ಕೇಂದ್ರವನ್ನಾಗಿ ಮಾಡಿಕೊಂಡು ಮೇಲ್ಪ ದಿಗೆ ಮತ್ತೊಂದು ಕಂಸವನ್ನು ಎಳೆಯಿರಿ, C ನಲ್ಲಿ ಛೇದಿಸುವದು.
4) AC ಮತ್ತು BC ಕೂಡಿಸಿರಿ.
13. ಒಂದು ಸರಳ ರೇಖೆಯ AB ಬಿಂದುಗಳಲ್ಲಿ ಹಾಯುವಂತೆ ವೃತ್ತವನ್ನು ರಚಿಸಿರಿ.
ರಚನಾ ಕ್ರಮ :
1) ಮೊದಲು AB ಸರಳ ರೇಖೆಯನ್ನು ಎಳೆಯಿರಿ.
2) AB ಅರ್ಧಕ್ಕಿಂತ ಅಧಿಕ ತ್ರಿಜ್ಯದಿಂದ A ಕೇಂದ್ರವನ್ನಾಗಿಮಾಡಿ ಕೊಂಡು ಮೇಲ್ಬದಿಗೆ ಮತ್ತು
ಕೆಳಬದಿಗೆ ಕಂಸಗಳನ್ನು ಎಳೆಯಿರಿ.
3) ಅಷ್ಟೆ ತ್ರಿಜ್ಯದಿಂದ B ಕೇಂದ್ರವನ್ನಾಗಿಮಾಡಿಕೊಂಡು ಮೇಲ್ಬದಿಗೆ ಮತ್ತು ಕೆಳಬದಿಗೆ ಕಂಸ ಗಳನ್ನು ಎಳೆಯಲಾಗಿ, CD ಗಳಲ್ಲಿ ಒಂದನ್ನೊಂದು ಛೇದಿ ಸುವವು.
4) CD ಕೂಡಿಸಿರಿ E ಉಂಟಾಗುವದು.
5) EA ತ್ರಿಜ್ಯದಿಂದ E ಕೇಂದ್ರವನ್ನಾಗಿಮಾಡಿಕೊಂಡು ವೃತ್ತವನ್ನು ರಚಿಸಿರಿ.
12. ಸರಳ ರೇಖೆಯ ಮೇಲೆ ಅರ್ಧವೃತ್ತವನ್ನು ರಚಿಸಿರಿ.
ರಚನಾ ಕ್ರಮ :
1) ಮೊದಲು AB ಸರಳ ರೇಖೆಯನ್ನು ಎಳೆಯಿರಿ.
2) AB ಅರ್ಧಕ್ಕಿಂತ ಅಧಿಕ ತ್ರಿಜ್ಯ ದಿಂದ A ಕೇಂದ್ರವನ್ನಾಗಿ ಮಾಡಿ ಕೊಂಡು ಮೇಲ್ಬದಿಗೆ ಮತ್ತು ಕೆಳಬದಿಗೆ ಕಂಸಗಳನ್ನು ಎಳೆಯಿರಿ.
3) ಅಷ್ಟೇ ತ್ರಿಜ್ಯದಿಂದ B ಕೇಂದ್ರವನ್ನಾಗಿ ಮಾಡಿಕೊಂಡು ಮೇಲ್ಪದಿಗೆ ಮತ್ತು ಕೆಳಬದಿಗೆ ಕಂಸ ಗಳನ್ನು ಎಳೆಯಿರಿ CD ಗಳಲ್ಲಿ ಒಂದನ್ನೊಂದು ಛೇದಿಸುವವು.
4) CD ಕೂಡಿಸಿರಿ E ಉಂಟಾಗು ವದು.
5) EA ತ್ರಿಜ್ಯದಿಂದ E ಕೇಂದ್ರ ವನ್ನಾಗಿ ಮಾಡಿಕೊಂಡು ಅರ್ಧ ವೃತ್ತವನ್ನು ರಚಿಸಿರಿ.
11. ಸರಳರೇಖೆಯ ಅದರಲ್ಲಿಯೇ ಇರುವ C ಬಿಂದುವಿನಿಂದ ಬೇಕಾದ ಅಂತರದಲ್ಲಿ ಸಮಾತರ ರೇಖೆಯನ್ನು ಎಳೆಯಿರಿ.
ರಚನಾ ಕ್ರಮ :
1) ಮೊದಲು AB ಸರಳ ರೇಖೆಯನ್ನು ಎಳೆಯಿರಿ.
2) AB ಯಲ್ಲಿ C ಬಿಂದುವನ್ನು ಗುರ್ತಿಸಿರಿ.
3) ಸೂಕ್ತ ತ್ರಿಜ್ಯದಿಂದ DE ಗಳಲ್ಲಿ ಛೇದಿಸುವಂತೆ C ಕೇಂದ್ರವನ್ನಾಗಿ ಮಾಡಿಕೊಂಡು ಅರ್ಧವರ್ತುಳವನ್ನು ತೆಗೆಯಿರಿ.
4) ಸೂಕ್ತ ಸಾಮಾನ್ಯ ತ್ರಿಜ್ಯದಿಂದ DE ಕೇಂದ್ರಗಳನ್ನಾಗಿ ಮಾಡಿ ಕೊಂಡು F ನಲ್ಲಿ ಒಂದನ್ನೊಂದು ಛೇದಿಸುವಂತೆ ಕಂಸಗಳನ್ನು ಎಳೆಯಿರಿ.
5) CF ಕೂಡಿಸಿ ವೃದ್ಧಿಸಿರಿ.
6) ಬೇಕಾದ ಅಂತರದ ತ್ರಿಜ್ಯದಿಂದ C ಕೇಂದ್ರದಿಂದ G ನಲ್ಲಿ ಛೇದಿಸಿರಿ.
7) ಸೂಕ್ತ ತ್ರಿಜ್ಯದಿಂದ H ನಲ್ಲಿ ಛೇದಿಸುವಂತೆ G ಕೇಂದ್ರವನ್ನಾಗಿ ಮಾಡಿಕೊಂಡು ಕಂಸವನ್ನು ಎಳೆಯಿರಿ.
8) ಅಷ್ಟೇ ತ್ರಿಜ್ಯದಿಂದ H ಕೇಂದ್ರ ಮಾಡಿಕೊಂಡು I ನಲ್ಲಿ ಮತ್ತು I ಕೇಂದ್ರ ಮಾಡಿಕೊಂಡು J ನಲ್ಲಿ ಛೇದಿಸಿರಿ.
9) ಸೂಕ್ತ ಸಾಮಾನ್ಯ ತ್ರಿಜ್ಯದಿಂದ IJ ಕೇಂದ್ರಗಳನ್ನಾಗಿ ಮಾಡಿಕೊಂಡು K ನಲ್ಲಿ ಒಂದನ್ನೊಂದು ಛೇದಿಸುವಂತೆ ಕಂಸಗಳನ್ನು ಎಳೆಯಿರಿ.
10) GK ಕೂಡಿಸಿ XY ವರೆಗೆ ವೃದ್ಧಿಸಿರಿ.
10. ಸರಳರೇಖೆಯ ಹೊರಬದಿಯ ದತ್ತ C ಬಿಂದುವಿನಿಂದ ಸಮಾಂತರ ರೇಖೆಯನ್ನು ಎಳೆಯಿರಿ.
ರಚನಾ ಕ್ರಮ:
1) ಮೊದಲು AB ಸರಳರೇಖೆಯನ್ನು ಎಳೆಯಿರಿ.
2) AB ಮೇಲ್ಬದಿಗೆ ಬೇಕಾದ ಸ್ಥಳದಲ್ಲಿ C ಬಿಂದುವನ್ನು ಗುರ್ತಿಸಿರಿ.
3) AB ಯಲ್ಲಿ D ಬಿಂದುವನ್ನು ಗುರ್ತಿಸಿರಿ.
4) DC ತ್ರಿಜ್ಯದಿಂದ E ನಲ್ಲಿ ಛೇದಿ ಸುವಂತೆ D ಕೇಂದ್ರವನ್ನಾಗಿ ಮಾಡಿಕೊಂಡು ಕಂಸವನ್ನು ಎಳೆ ಯಿರಿ.
5) CD ತ್ರಿಜ್ಯದಿಂದ C ಕೇಂದ್ರ ವನ್ನಾಗಿಮಾಡಿಕೊಂಡು ಬೇಕಾದ ಕಂಸವನ್ನು ಎಳೆಯಿರಿ.
6) EC ತ್ರಿಜ್ಯದಿಂದ D ಕೇಂದ್ರದಿಂದ F ನಲ್ಲಿ ಛೇದಿಸಿರಿ.
7) FC ಕೂಡಿಸಿ XY ವರೆಗೆ ವೃದ್ದಿಸಿರಿ.
9. ಸರಳರೇಖೆಗೆ ಸಮಾಂತರವಾಗಿ ಮತ್ತೊಂದು ಸರಳ ರೇಖೆಯನ್ನು ಎಳೆಯಿರಿ.
ರಚನಾ ಕ್ರಮ :
1) ಮೊದಲು AB ಸರಳರೇಖೆಯನ್ನು ಎಳೆಯಿರಿ.
2) AB ತ್ರಿಜ್ಯದಿಂದ A ಕೇಂದ್ರವನ್ನಾಗಿಮಾಡಿಕೊಂಡು ಬೇಕಾದ BC ಕಂಸವನ್ನು ಎಳೆಯಿರಿ.
3) ಅಷ್ಟೇ ತ್ರಿಜ್ಯದಿಂದ B ಕೇಂದ್ರವನ್ನಾಗಿಮಾಡಿಕೊಂಡು ಬೇಕಾದ AD ಕಂಸವನ್ನು ಎಳೆಯಿರಿ.
4) ಅನುಕೂಲ ತ್ರಿಜ್ಯದಿಂದ A ಕೇಂದ್ರದಿಂದ E ನಲ್ಲಿ ಮತ್ತು ಅಷ್ಟೇ ತ್ರಿಜ್ಯದಿಂದ B ಕೇಂದ್ರದಿಂದ F ನಲ್ಲಿ ಛೇದಿಸಿರಿ.
5) EF ಕೂಡಿಸಿ ಎರಡೂ ಕಡೆಗೆ ವೃದ್ಧಿಸಿರಿ.
8. ಸರಳರೇಖೆಯಲ್ಲಿ ಒಂಬತ್ತು ಸಮಭಾಗಗಳಾಗಿ ಮಾಡಿರಿ.
1) ಮೊದಲು ಕೊಟ್ಟ AB ಸರಳ ರೇಖೆ ಯನ್ನು ಎಳೆಯಿರಿ.
2) ಕೋನಮಾಪಕ ಸಹಾಯದಿಂದ A ಕೇಂದ್ರದಲ್ಲಿ ಬೇಕಾದ ಲಘುಕೋನ ವಾಗುವಂತೆ AC ರೇಖೆ ಎಳೆಯಿರಿ.
3) ಸೂಕ್ತ ತ್ರಿಜ್ಯದಿಂದ AC ರೇಖೆಯ ಮೇಲೆ A ಕೇಂದ್ರದಿಂದ ಸಮನಾಗಿ 1, 2, 3, 4, 5, 6, 7, 8, 9 ರಲ್ಲಿ ಛೇದಿಸಿರಿ.
4) B ಕೇಂದ್ರದ ಕೆಳಬದಿಗೆ A ಕೇಂದ್ರ ದಲ್ಲಿ ತೆಗೆದುಕೊಂಡ ಕೋನದಷ್ಟೇ ಕೊನ ತೆಗೆದುಕೊಂಡು B D ರೇಖೆ ಎಳೆಯಿರಿ.
5) AC ರೇಖೆಯಲ್ಲಿ ಛೇದಿಸಿದಷ್ಟೇ ಅಂತರದ ಛೇದಕ ಬಿಂದುಗಳನ್ನು BD ರೇಖೆಯಲ್ಲಿ B ಕೇಂದ್ರದಿಂದ ಛೇದಿಸಿರಿ.
6) A ದಿಂದ 9, 1 ರಿಂದ 8, 2 ರಿಂದ 7, 3 ರಿಂದ 6, 4 ರಿಂದ 5, 5 ರಿಂ 4, 6 ರಿಂದ 3, 7 ರಿಂದ 2, 8 ರಿಂದ 1, 9 ರಿಂದ B ಕೂಡಿಸಿರಿ.
7. ಸರಳರೇಖೆಯಲ್ಲಿ ಎಂಟು ಸಮಭಾಗಗಳಾಗಿ ಮಾಡಿರಿ.
ರಚನಾ ಕ್ರಮ:
1) ಮೊದಲು AB ಸರಳರೇಖೆಯನ್ನು ಎಳೆಯಿರಿ.
2) ಕೋನಮಾಪಕ ಸಹಾಯದಿಂದ A ಕೇಂದ್ರದಲ್ಲಿ ಬೇಕಾದ ಲಘು ಕೋನ ವಾಗುವಂತೆ AC ರೇಖೆ ಎಳೆಯಿರಿ.
3) ಸೂಕ್ತತ್ರಿಜ್ಯದಿಂದ AC ರೇಖೆಯ ಮೇಲೆ A ಕೇಂದ್ರದಿಂದ ಸಮನಾಗಿ 1, 2, 3, 4, 5, 6, 7, 8 ರಲ್ಲಿ ಛೇದಿಸಿರಿ.
4) B ಕೇಂದ್ರದ ಕೆಳ ಬದಿಗೆ A ಕೇಂದ್ರದಲ್ಲಿ ತೆಗೆದುಕೊಂಡ ಕೋನದಷ್ಟೇ ಕೋನ ತೆಗೆದು ಕೊಂಡು B D ರೇಖೆ ಎಳೆಯಿರಿ.
5) AC ರೇಖೆಯಲ್ಲಿ ಛೇದಿಸಿದಷ್ಟೇ ಅಂತರದ ಛೇದಕ ಬಿಂದು ಗಳನ್ನು B D ರೇಖೆಯಲ್ಲಿ B ಕೇಂದ್ರದಿಂದ ಛೇದಿಸಿರಿ.
6) A ದಿಂದ 8, 1 ರಿಂದ 7, 2 ರಿಂದ 6, 3 ರಿಂದ 5, 4 ರಿಂದ 4, 5 ರಿಂದ 3, 6 ರಿಂದ 2, 7 ರಿಂದ 1, 8 ರಿಂದ B ಕೂಡಿಸಿರಿ.
6. ಸರಳರೇಖೆಯಲ್ಲಿ ಏಳು ಸಮಭಾಗಗಳಾಗಿ ಮಾಡಿರಿ.
1) ಮೊದಲು AB ಸರಳ ರೇಖೆಯನ್ನು ಎಳೆಯಿರಿ.
2) ಕೋನಮಾಪಕ ಸಹಾಯ ದಿಂದ A ಕೇಂದ್ರದಲ್ಲಿ ಬೇಕಾದ ಲಘು ಕೋನವಾಗುವಂತೆ AC ರೇಖೆ ಎಳೆಯಿರಿ.
3) ಸೂಕ್ತ ತ್ರಿಜ್ಯದಿಂದ AC ರೇಖೆಯ ಮೇಲೆ A ಕೇಂದ್ರದಿಂದ ಸಮನಾಗಿ 1,2,3,4,5,6,7 ರಲ್ಲಿ ಛೇದಿಸಿರಿ.
4) B ಕೇಂದ್ರದ ಕೆಳಬದಿಗೆ A ಕೇಂದ್ರದಲ್ಲಿ ತೆಗೆದುಕೊಂಡ ಕೋನದಷ್ಟೇ ಕೋನ ತೆಗೆದುಕೊಂಡು BD ರೇಖೆ ಎಳೆಯಿರಿ.
5) AC ರೇಖೆಯಲ್ಲಿ ಛೇದಿಸಿದಷ್ಟೇ ಅಂತರದ ಛೇದಕ ಬಿಂದುಗಳನ್ನು B D ರೇಖೆಯಲ್ಲಿ B ಕೇಂದ್ರದಿಂದ ಛೇದಿಸಿರಿ.
6) A ದಿಂದ 7, 1 ರಿಂದ 6, 2 ರಿಂದ5, 3 ರಿಂದ 4, 4 ರಿಂದ 3, 5 ರಿಂದ 2, 6 ರಿಂದ 1, 7 ದಿಂದ B ಕೂಡಿಸಿರಿ.
5. ಸರಳರೇಖೆಯಲ್ಲಿ ಆರು ಸಮಭಾಗಗಳಾಗಿ ಮಾಡಿರಿ.
1) ಮೊದಲು A B ಸರಳರೇಖೆಯನ್ನು ಎಳೆಯಿರಿ.
2) ಕೋನಮಾಪಕ ಸಹಾಯ ದಿಂದ A ಕೇಂದ್ರದಲ್ಲಿ ಬೇಕಾದ ಲಘು ಕೋನವಾಗುವಂತೆ A C ರೇಖೆ ಎಳೆಯಿರಿ.
3) ಸೂಕ್ತ ತ್ರಿಜ್ಯದಿಂದ AC ರೇಖೆಯ ಮೇಲೆ A ಕೇಂದ್ರದಿಂದ ಸಮನಾಗಿ 1, 2, 3, 4, 5, 6 ರಲ್ಲಿ ಛೇದಿಸಿರಿ.
4) B ಕೇಂದ್ರದ ಕೆಳಬದಿಗೆ A ಕೇಂದ್ರದಲ್ಲಿ ತೆಗೆದುಕೊಂಡ ಕೋನದಷ್ಟೇ ಕೋನ ತೆಗೆದುಕೊಂಡು BD ರೇಖೆ ಎಳೆಯಿರಿ.
5) AC ರೇಖೆಯಲ್ಲಿ ಛೇದಿಸಿದಷ್ಟೇ ಅಂತರದ ಛೇದಕ ಬಿಂದುಗಳನ್ನು B D ರೇಖೆಯಲ್ಲಿ B ಕೇಂದ್ರ ದಿಂದ ಛೇದಿಸಿರಿ.
6) A ದಿಂದ 6, 1 ರಿಂದ 5, 2 ರಿಂದ 4, 3 ರಿಂದ 3, 4 ರಿಂದ2, 5 ರಿಂದ1, 6 ರಿಂದ B ಕೂಡಿಸಿರಿ.
4. ಸರಳರೇಖೆಯಲ್ಲಿ ಐದು ಸಮಭಾಗಗಳಾಗಿ ಮಾಡಿರಿ.
ರಚನಾ ಕ್ರಮ :
1) ಮೊದಲು A B ಸರಳ ರೇಖೆಯನ್ನು ಎಳೆಯಿರಿ.
2) ಕೋನಮಾಪಕ ಸಹಾಯ ದಿಂದ A ಕೇಂದ್ರದಲ್ಲಿ ಬೇಕಾದ ಲಘು ಕೋನವಾಗುವಂತೆ AC ರೇಖೆ ಎಳೆಯಿರಿ.
3) ಸೂಕ್ತ ತ್ರಿಜ್ಯದಿಂದ AC ರೇಖೆಯ ಮೇಲೆ A ಕೇಂದ್ರದಿಂದ ಸಮನಾಗಿ 1, 2, 3, 4, 5 ರಲ್ಲಿ ಛೇದಿಸಿರಿ.
4) B ಕೇಂದ್ರದ ಕೆಳಬದಿಗೆ A ಕೇಂದ್ರದಲ್ಲಿ ತೆಗೆದುಕೊಂಡ ಕೋನದಷ್ಟೇ ಕೋನ ತೆಗೆದು ಕೊಂಡು B D ರೇಖೆ ಎಳೆಯಿರಿ.
5) AC ರೇಖೆಯಲ್ಲಿ ಛೇದಿಸಿ ದಷ್ಟೇ ಅಂತರದ ಛೇದಕ ಬಿಂದುಗಳನ್ನು B D ರೇಖೆಯಲ್ಲಿ B ಕೇಂದ್ರದಿಂದ ಛೇದಿಸಿರಿ.
6) A ದಿಂದ 5, 1ರಿಂದ 4, 2 ರಿಂದ 3, 3ರಿಂದ 2, 4ರಿಂದ 1, 5 ರಿಂದ B ಕೂಡಿಸಿರಿ.
ರಚನಾ ಕ್ರಮ :
1) ಮೊದಲು AB ಸರಳ ರೇಖೆಯನ್ನು ಎಳೆಯಿರಿ.
2) ಸರಳ ರೇಖೆಯನ್ನು ದ್ವಿಭಾಗಿಸಬೇಕು E ಉಂಟಾಗುವದು.
3) AE ಅರ್ಧಕ್ಕಿಂತ ಅಧಿಕ ತ್ರಿಜ್ಯ ದಿಂದ A E ಕೇಂದ್ರಗಳನ್ನಾಗಿ ಮಾಡಿಕೊಂಡು ಮೇಲ್ಪದಿಗೆ ಮತ್ತು ಕೆಳಬದಿಗೆ ಕಂಸಗಳನ್ನು ಎಳೆಯಿರಿ, F G ಗಳಲ್ಲಿ ಛೇದಿಸುವವು.
4) F G ಕೂಡಿಸಿರಿ H ಉಂಟಾಗುವದು.
5) EB ಅರ್ಧಕ್ಕಿಂತ ಅಧಿಕ ತ್ರಿಜ್ಯದಿಂದ EB ಕೇಂದ್ರಗಳನ್ನಾಗಿ ಮಾಡಿಕೊಂಡು ಮೇಲ್ಬದಿಗೆ ಮತ್ತು ಕೆಳಬದಿಗೆ ಕಂಸಗಳನ್ನು ಎಳೆಯಿರಿ, I J ಗಳಲ್ಲಿ ಛೇದಿಸುವವು.
6) I J ಕೂಡಿಸಿರಿ K ಉಂಟಾಗುವದು.
ವಿ. ಸೂ.- AH, HE, EK, KB, ದ್ವಿಭಾಗಿಸಿದರೆ, ಎಂಟು ಸಮಭಾಗಗಳಾಗುವವು.
2. ಸರಳ ರೇಖೆಯಲ್ಲಿ ಮೂರು ಸಮಭಾಗಗಳಾಗಿ ಮಾಡಿರಿ.
ರಚನಾ ಕ್ರಮ:
1) ಮೊದಲು A B ಸರಳ ರೇಖೆಯನ್ನು ಎಳೆಯಿರಿ.
2) ಕೋನಮಾಪಕ ಸಹಾಯದಿಂದ A ಕೇಂದ್ರದಲ್ಲಿ ಬೇಕಾದ ಲಘು ಕೋನವಾಗುವಂತೆ AC ರೇಖೆ ಎಳೆಯಿರಿ.
3) ಸೂಕ್ತತ್ರಿಜ್ಯದಿಂದ AC ರೇಖೆಯ ಮೇಲೆ A ಕೇಂದ್ರದಿಂದ ಸಮನಾಗಿ 1,2,3 ರಲ್ಲಿ ಛೇದಿಸಿರಿ.
4) B ಕೇಂದ್ರದ ಕೆಳಬದಿಗೆ A ಕೇಂದ್ರದಲ್ಲಿ ತೆಗೆದುಕೊಂಡ ಕೋನದಷ್ಟೇ ಕೋನ ತೆಗೆದುಕೊಂಡು BD ರೇಖೆ ಎಳೆ
ಯಿರಿ.
5) AC ರೇಖೆಯಲ್ಲಿ ಛೇದಿಸಿದಷ್ಟೇ ಅಂತರದ ಛೇದಕ ಬಿಂದುಗಳನ್ನು BD ರೇಖೆ ಯಲ್ಲಿ B ಕೇಂದ್ರದಿಂದ ಛೇದಿಸಿರಿ.
6) A ದಿಂದ 3, 1 ದಿಂದ 2, 2 ದಿಂದ 1, 3 ದಿಂದ B ಕೂಡಿಸಿರಿ.
1). ಸರಳ ರೇಖೆಯನ್ನು ದ್ವಿಭಾಗಿಸಿರಿ.
ರಚನಾ ಕ್ರಮ :
1) ಮೊದಲು AB ಸರಳ ರೇಖೆಯನ್ನು ರಚಿಸಿರಿ.
2) AB ಅರ್ಧಕ್ಕಿಂತ ಅಧಿಕ ತ್ರಿಜ್ಯದಿಂದ A ಕೇಂದ್ರವನ್ನಾಗಿ ಮಾಡಿಕೊಂಡು ಮೇಲ್ಬದಿಗೆ ಮತ್ತು ಕೆಳಬದಿಗೆ ಕಂಸಗಳನ್ನು ಎಳೆಯಿರಿ.
3) ಅಷ್ಟೇ ತ್ರಿಜ್ಯದಿಂದ B ಕೇಂದ್ರವನ್ನಾಗಿಮಾಡಿಕೊಂಡು ಮೇಲ್ಬದಿಗೆ ಮತ್ತು ಕೆಳಬದಿಗೆ ಕಂಸಗಳನ್ನು ಎಳೆಯಲಾಗಿ, CD ಗಳಲ್ಲಿ ಛೇದಿಸುವವು.
4) CD ಕೊಡಿಸಿರಿ. E ಉಂಟಾಗುವದು.