ಅಭ್ಯರ್ಥಿಗಳಿಗೆ ಸೂಚನೆಗಳು :
i) ನಿಮ್ಮ ನೋಂದಣಿ (ರಿಜಿಸ್ಟರ್) ಸಂಖ್ಯೆ ಮತ್ತು ಶ್ರೇಣಿ (ಗ್ರೇಡ್)ಯನ್ನು ಸ್ಪಷ್ಟವಾಗಿ ಬರೆಯಿರಿ.
ii) ಆಕೃತಿ ರಚನೆಯ ಎಲ್ಲಾ ರೇಖೆಗಳನ್ನು ಹಾಗೆಯೇ ಇರಿಸಿ.
ದಿನಾಂಕ: 24.11.2022
A. ಈ ಕೆಳಗಿನವುಗಳಲ್ಲಿ ಯಾವುದಾದರೂ ಎರಡನ್ನು ಬಿಡಿಸಿ: 15 X 2 = 30
1. ಕೋನಮಾಪಕ ಸಹಾಯವಿಲ್ಲದೆ 120 ಕೋನವನ್ನು ರಚಿಸಿ.
2. AB= 8ಸೆಂ.ಮೀ ಇರುವ ಸರಳರೇಖೆಗೆ,ಒಂದು ಸಮಾನಾಂತರ ಸರಳರೇಖೆಯನ್ನು ರಚಿಸಿ.
ರಚನಾ ಕ್ರಮ :
1) ಮೊದಲು AB 8 ಸೆ.ಮೀ ಇರುವ ಸರಳ ರೇಖೆಯನ್ನು ಎಳೆಯಿರಿ.
2) AB ತ್ರಿಜ್ಯದಿಂದ A ಕೇಂದ್ರ ವನ್ನಾಗಿಮಾಡಿಕೊಂಡು ಬೇಕಾದ BC ಕಂಸವನ್ನು ಎಳೆಯಿರಿ.
3) ಅಷ್ಟೇ ತ್ರಿಜ್ಯದಿಂದ B ಕೇಂದ್ರ ವನ್ನಾಗಿಮಾಡಿಕೊಂಡು ಬೇಕಾದ AD ಕಂಸವನ್ನು ಎಳೆಯಿರಿ.
4) ಅನುಕೂಲ ತ್ರಿಜ್ಯದಿಂದ A ಕೇಂದ್ರದಿಂದ E ನಲ್ಲಿ ಮತ್ತು ಅಷ್ಟೇ ತ್ರಿಜ್ಯದಿಂದ B ಕೇಂದ್ರದಿಂದ F ನಲ್ಲಿ ಛೇದಿಸಿರಿ.
5) EF ಕೂಡಿಸಿ ಎರಡೂ ಕಡೆಗೆ ವೃದ್ಧಿಸಿರಿ.
3. AB= 6ಸೆಂ.ಮೀ. ಬಾಹುವಿರುವ ABC ಸಮಬಾಹು ತ್ರಿಭುಜ ರಚಿಸಿ.
B. ಈ ಕೆಳಗಿನವುಗಳಲ್ಲಿ ಯಾವುದಾದರೂ “ಒಂದನ್ನು ಬಿಡಿಸಿ: 20 X 1 = 201
1. 6ಸೆಂ.ಮೀ ಭುಜದ ಒಂದು ಚೌಕವನ್ನು ರಚಿಸಿ, ಅದರ ನಾಲ್ಕು ಶೃಂಗ ಬಿಂದುಗಳಲ್ಲಿ ಹಾದು ಹೋಗುವಂತೆ ಒಂದು ಪರಿವೃತ್ತವನ್ನು ರಚಿಸಿ.
ರಚನಾ ಕ್ರಮ :
1) ಮೊದಲು 6 ಸೆಂ.ಮೀ ಇರುವ A B C D ಚೌಕವನ್ನು ತೆಗೆಯಿರಿ.
2) AC ಮತ್ತು BD ಕೂಡಿಸಿರಿ 0 ಉಂಟಾಗುವದು.
3) OA ತ್ರಿಜ್ಯದಿಂದ O ಕೇಂದ್ರ ವನ್ನಾಗಿ ಮಾಡಿಕೊಂಡು ವರ್ತುಳ ವನ್ನು ರಚಿಸಿರಿ.
2. ಪ್ರತಿಯೊಂದು ಬಾಹು 4ಸೆಂ.ಮೀ ಇರುವಂತೆ ಒಂದು ಷಡ್ಡುಜಾಕೃತಿಯನ್ನು ರಚಿಸಿ.
1) ಮೊದಲು 4 ಸೆಂ.ಮೀ ಇರುವ ವೃತ್ತವನ್ನು ತೆಗೆಯಿರಿ.
2) ತ್ರಿಜ್ಯದಿಂದ ವೃತ್ತದ ಪರಿಧಿಯ ಮೇಲೆ ಬೇಕಾದ ಸ್ಥಳದಲ್ಲಿ A ಗುರ್ತಿಸಿರಿ, A ಕೇಂದ್ರ ಮಾಡಿ ಕೊಂಡು B ನಲ್ಲಿ, B ಕೇಂದ್ರ ಮಾಡಿಕೊಂಡು C ನಲ್ಲಿ, C ಕೇಂದ್ರ ಮಾಡಿಕೊಂಡು D ನಲ್ಲಿ D ಕೇಂದ್ರ ಮಾಡಿಕೊಂಡು E ನಲ್ಲಿ E ಕೇಂದ್ರ ಮಾಡಿಕೊಂಡು F ನಲ್ಲಿ ಛೇದಿಸಿರಿ.
3) AB, BC, CD, DE, EF, FA ಕೂಡಿಸಿರಿ.
C. ಈ ಕೆಳಗಿನವುಗಳಲ್ಲಿ ಯಾವುದಾದರೂ ಎರಡನ್ನು ಬಿಡಿಸಿ: 25 X 2 = 50
1. 3ಸೆಂ.ಮೀ ತ್ರಿಜ್ಯವಿರುವ ವೃತ್ತದಲ್ಲಿ ಅತೀ ದೊಡ್ಡದಾದ ಆಯತವನ್ನು ರಚಿಸಿ.
1) ಮೊದಲು 3 ಸೆಂ.ಮೀ ಇರುವ ವೃತ್ತವನ್ನು ತೆಗೆಯಿರಿ.
2)AB ವ್ಯಾಸವನ್ನು ಎಳೆಯಿರಿ.
3) AO ತ್ರಿಜ್ಯದಿಂದ A ಕೇಂದ್ರ ಮಾಡಿಕೊಂಡು C ನಲ್ಲಿ ಮತ್ತು B ಕೇಂದ್ರ ಮಾಡಿಕೊಂಡು D ನಲ್ಲಿ ಛೇದಿಸಿರಿ.
4) A D, D B, B C, CA ಕೂಡಿಸಿರಿ.
2. 5 ಸೆಂ.ಮೀ ಬಾಹುವಿರುವ ABC ಸಮಬಾಹು ತ್ರಿಭುಜವನ್ನು ರಚಿಸಿ, ಮೂರು ಬಾಹುಗಳಿಗೆ ಸ್ಪರ್ಶಿಸುವಂತೆ ಒಂದು ಅಂತರ್‌ವೃತ್ತವನ್ನು ರಚಿಸಿ.
ರಚನಾ ಕ್ರಮ :
1) ಮೊದಲು ABC 5ಸೆಂ.ಮೀ ಇರುವ ಸಮಬಾಹು ತ್ರಿಭುಜವನ್ನು ರಚಿಸಿ.
2) ಬೇಕಾದ ಎರಡು ಕೊನಗಳನ್ನು ಅರ್ಧಿಸಿರಿ. ಸೂಕ್ತ ತ್ರಿಜ್ಯದಿಂದ DE ಗಳಲ್ಲಿ ಛೇದಿಸುವಂತೆ A ಕೇಂದ್ರವನ್ನಾಗಿ ಮಾಡಿಕೊಂಡು ಕಂಸವನ್ನು ಎಳೆಯಿರಿ.
3) ಸೂಕ್ತ ಸಾಮಾನ್ಯ ತ್ರಿಜ್ಯದಿಂದ DE ಕೇಂದ್ರ ಗಳನ್ನಾಗಿ ಮಾಡಿಕೊಂಡು F ನಲ್ಲಿ ಒಂದನ್ನೊಂದು ಛೇದಿಸುವಂತೆ ಕಂಸಗಳನ್ನು ಎಳೆಯಿರಿ.
4) AF ಕೂಡಿಸಿ ವೃದ್ದಿಸಿರಿ.ಸೂ
5) ಸೂಕ್ತ ತ್ರಿಜ್ಯದಿಂದ GH ಗಳಲ್ಲಿ ಛೇದಿಸುವಂತೆ C ಕೇಂದ್ರವನ್ನಾಗಿ ಮಾಡಿಕೊಂಡು ಕಂಸವನ್ನು ಎಳೆಯಿರಿ.
6) ಸೂಕ್ತ ಸಾಮಾನ್ಯ ತ್ರಿಜ್ಯದಿಂದ GH ಕೇಂದ್ರಗಳನ್ನಾಗಿ ಮಾಡಿಕೊಂಡು I ನಲ್ಲಿ ಒ೦ದನ್ನೊಂದು ಛೇದಿಸುವಂತೆ ಕಸಗಳನ್ನು ಎಳೆಯಿರಿ(
7) CI ಕೂಡಿಸಿ ವೃದಿಸಿ ರಿ O ನಲ್ಲಿ ಛೇದಿಸಿ J ಉಂಟಾಗುವದು.
8) OJ ತ್ರಿಜ್ಯದಿಂದ O ಕೇಂದ್ರವನ್ನಾಗಿ ಮಾಡಿಕೊಂಡು ವೃತ್ತ ವನ್ನು ರಚಿಸಿರಿ.
3. AB= 7ಸೆಂ.ಮೀ ಇರುವಂತೆ ABCD ಒಂದು ಚೌಕವನ್ನು ರಚಿಸಿ, ಅದರ ಒಳಗೆ 4 ಬಾಹುಗಳಿಗೆ ಸ್ಪರ್ಶಿಸುವಂತೆ ಒಂದು ವೃತ್ತರಚಿಸಿ.
ರಚನಾ ಕ್ರಮ :
1) ಮೊದಲು AB = 7 ಸೆಂ.ಮೀ ಇರುವಂತೆ ABCD ಚೌಕವನ್ನು ತೆಗೆಯಿರಿ.
2) AC ಮತ್ತು BD ಕೂಡಿಸಿ O ಉಂಟಾಗುವ ದು
3) O E ಲಂಬ ತೆಗೆಯಿರಿ. ಸೂಕ್ತ ತ್ರಿಜ್ಯದಿಂದ FG ಗಳಲ್ಲಿ ಛೇದಿಸುವಂತೆ O ಕೇಂದ್ರವನ್ನಾಗಿ ಮಾಡಿ ಕೊ೦ಡು ಕ೦ಸವನ್ನು ಎಳೆಯಿರಿ.
4) ಸೂಕ್ತ ಸಾಮಾನ್ಯ ತ್ರಿಜ್ಯದಿಂದ FG ಕೇಂದ್ರಗಳನ್ನಾಗಿ ಮಾಡಿಕೊಂಡು H ನಲ್ಲಿ ಒಂದನ್ನೊಂದು ಛೇದಿಸುವಂತೆ ಕಂಸಗಳನ್ನು ಎಳೆಯಿರಿ,
5) OH ಕೂಡಿಸಿರಿ E ಉಂಟಾಗುವರು.
6) OE ತ್ರಿಜ್ಯದಿಂದ O ಕೇಂದ್ರವನ್ನಾಗಿ ಮಾಡಿಕೊಂಡು ವೃತ್ತ ವನ್ನು ರಚಿಸಿರಿ.